ಭಾರತಿ ಹಿರೇಮಠ ಮತ್ತು ಜಯಶ್ರೀ ಸಂಗಡಿಗರಿಂದ ಎರಡನೇ ದಿನದ ನವರಾತ್ರಿ ಆಚರಣೆ.
ಕೊಪ್ಪಳ:ಸತ್ಯಮಿಥ್ಯ (ಅ -04).
ಜಿಲ್ಲೆಯ ಕುಕನೂರು ಪಟ್ಟಣದ ಭಾರತಿ ಹಿರೇಮಠ ಮತ್ತು ಜಯಶ್ರೀ ಸಂಗಡಿಗರು ಎರಡನೇ ದಿನ ಹಸಿರು ಬಣ್ಣದ ಉಡುಗಿಯನ್ನು ತೊಟ್ಟುಕೊಂಡು ನವರಾತ್ರಿ ಆಚರಣೆ ಮಾಡಿದರು. ನವರಾತ್ರಿಯ 2ನೇ ದಿನದ ಬಣ್ಣ ಹಸಿರು. ಹಸಿರು ಬಣ್ಣವು ಹೊಸ ಆರಂಭ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ. ಈ ದಿನ ಬ್ರಹ್ಮಚಾರಿನಿ ದೇವಿಯನ್ನು ಪೂಜಿಸಲಾಗುತ್ತದೆ. ಮಾತಾ ಬ್ರಹ್ಮಚಾರಿನಿ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವಿದೆ. ಅವಳು ನಿಷ್ಠೆ ಮತ್ತು ಬುದ್ಧಿವಂತಿಕೆಯನ್ನು ಸೂಚಿಸುತ್ತಾಳೆ. ಈ ದೇವತೆ ಪ್ರೀತಿಯ ಸಾರಾಂಶ. ಹಸಿರು ಬಣ್ಣದ ಸೀರೆಯನ್ನುಟ್ಟು ಮಹಿಳೆಯರು ಗ್ರಾಮ ದೇವತೆಯಾದ ಮಹಾಮಾಯ ಮತ್ತು ಬನ್ನಿ ಮಹಾಂಕಾಳಿಯ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ವರದಿ : ಚನ್ನಯ್ಯ ಹಿರೇಮಠ.