
ಶ್ರೀ ಕೃಷ್ಣ ಜನ್ಮಾಷ್ಟಮಿ, ಚಿಣ್ಣರ ಸಾಂಸ್ಕೃತಿಕ ಪ್ರತಿಭೋತ್ಸವ , ವೇಷ ಭೂಷಣ ಪ್ರದಶ೯ನ .
ಕುಕನೂರು:ಸತ್ಯಮಿಥ್ಯ (ಅಗಷ್ಟ -25).
ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ (ರಿ) ಕುಕನೂರು ಕೊಪ್ಪಳ ಜಿಲ್ಲೆ. ವತಿಯಿಂದ ಆ .೨೬ರಂದು ಶ್ರೀ ಕೃಷ್ಣ ಜಯಂತ್ಯೋತ್ಸವ.ವೇಷ ಭೂಷಣ ಪ್ರದಶ೯ನ,ಹಾಡು ಮಾತು ಮಂಥನ,ಜೊತೆಗೆ ೯ನೇಯ ಚಿಣ್ಣರ ಸಾಂಸ್ಕೃತಿಕ ಪ್ರತಿಭೋತ್ಸವ ಕಾಯ೯ಕ್ರಮ ನಡೆಯಲಿದೆ.
ಇಲ್ಲಿಯ ಸರಕಾರಿ ಮಾಧ್ಯಮಿಕ ಶಾಲೆ ಆವರಣ ವಿದ್ಯಾನಗರ ದಲ್ಲಿ ಮು.೧೦ಕ್ಕೆ ಪ್ರಾರಂಭವಾಗಲಿದ್ದು . ಪಟ್ಟಣ ಪಂಚಾಯತ ಅಧ್ಯಕ್ಷೆ ಲಲಿತಮ್ಮ ರಮೇಶ ಯಡಿಯಾಪೂರ ಕಾಯ೯ಕ್ರಮ ಉದ್ಘಾಟಿಸುವರು. ಮುಖ್ಯೋಪಾಧ್ಯಾಯ ಧಮ೯ಪ್ಪ ನಾಯಕ ಅಧ್ಯಕ್ಷತೆ ವಹಿಸುವರು. ಪಿ ಎಸ್ ಐ ಟಿ.ಗುರುರಾಜ್ ಪ್ರಶಸ್ತಿ ಪತ್ರ ವಿತರಿಸುವರು.
ಮುಖ್ಯಅತಿಥಿಗಳಾಗಿ ಶ್ರೀ ಪ್ರಶಾಂತ ಆರಬೆರಳಿನ ಉಪಾಧ್ಯಕ್ಷರು ಪಟ್ಟಣ ಪಂಚಾಯತ್ ಕುಕನೂರು . ಡಾ. ಜಂಬಣ್ಣ ಅಂಗಡಿ, ಶ್ರೀ ಮತಿ ರಾಧಾ ಸಿದ್ದಪ್ಪ ದೊಡ್ಡಮನಿ ಸದಸ್ಯರು ಪ.ಪಂ. ಕು.ನೇತ್ರಾವತಿ ಮಾಲಗಿತ್ತಿ ಸದಸ್ಯರು ಪ.ಪಂ. ಶ್ರೀಮತಿ ಮುಮ್ತಾಜ್ ಬೇಗಂ ಉಪಾಧ್ಯಕ್ಷರು ಎಸ್.ಡಿ.ಎಂ.ಸಿ. ವರದಿಗಾರರಾದ ವೀರಯ್ಯ ಕುತ೯ಕೋಟಿ ಶ್ರೀ ಚನ್ನಯ್ಯ ಹಿರೇಮಠ ಭಾಗವಹಿಸುವರು. ಶ್ರೀ ಮೇಘರಾಜ ಎಸ್ ಜಿಡಗಿ ಆಕಾಶವಾಣಿ ಕಲಾವಿದರು ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯ ನಡೆಯಲಿವೆ. ರುದ್ರೇಶ ಆರಬೇರಳಿನ್ ನೀರೂಪಿಸಲಿದ್ದಾರೆ. ಆಸಕ್ತರು ಸಮಾರಂಭಕ್ಕೆ ಆಗಮಿಸಿ ಶೋಭೆ ತರಬೇಕೆಂದು ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಭಂಡಾರಿ ತಿಳಿಸಿದ್ದಾರೆ.
ವರದಿ : ಚೆನ್ನಯ್ಯ ಹಿರೇಮಠ.