ಕ್ರೀಡೆ ಜಾತಿ-ಮತ-ಪಂತ ಮೀರಿದ್ದು .ದೈಹಿಕಮತ್ತು ಮಾನಸಿಕ ಸಧೃಡತೆಗೆ ಸಹಕಾರಿ -ಶಾಸಕ ಜಿ. ಎಸ್. ಪಾಟೀಲ್.
ಗಜೇಂದ್ರಗಡ ತಾಲ್ಲೂಕು ಮಟ್ಟದ ಪಿಯು ಕಾಲೇಜಿನ ಕ್ರೀಡಾಕೂಟಕ್ಕೆ ಚಾಲನೆ
ಕ್ರೀಡೆ ಜಾತಿ-ಮತ-ಪಂತ ಮೀರಿದ್ದು .ದೈಹಿಕಮತ್ತು ಮಾನಸಿಕ ಸಧೃಡತೆಗೆ ಸಹಕಾರಿ -ಶಾಸಕ ಜಿ. ಎಸ್. ಪಾಟೀಲ್.
ಗಜೇಂದ್ರಗಡ ತಾಲ್ಲೂಕು ಮಟ್ಟದ ಪಿಯು ಕಾಲೇಜಿನ ಕ್ರೀಡಾಕೂಟಕ್ಕೆ ಚಾಲನೆ
ಗಜೇಂದ್ರಗಡ:ಸತ್ಯಮಿಥ್ಯ (ಆಗಸ್ಟ್ -02).
ಕ್ರೀಡೆ ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರವಾಗುತ್ತದೆ. ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ. ನಾನು ಕೂಡಾ ಕ್ರೀಡಾಪಟುವಾಗಿದ್ದೆ ಆ ಮನೋಭಾವದಿಂದ ಬದುಕನ್ನು ರೂಪಿಸಿಕೊಂಡಿದ್ದೇನೆ ಎಂದು ರೋಣ ಮತಕ್ಷೇತ್ರದ ಶಾಸಕ ಹಾಗೂ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ. ಎಸ್. ಪಾಟೀಲ ಹೇಳಿದರು.
ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಾರ್ಯಾಲಯ ಗದಗ ಇವರ ಆಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭವಾದ 2024-25ನೇ ಸಾಲಿನ ಗಜೇಂದ್ರಗಡ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವದಲ್ಲಿ ಒಲಂಪಿಕ್ ಸ್ಪರ್ಧೆಗಳು ನಡೆಯುವ ಸಂದರ್ಭದಲ್ಲಿಯೇ ತಾಲ್ಲೂಕಿನ ಕ್ರೀಡೆಗಳು ನಡೆಯುತ್ತಿರುವುದು ಕಾಕತಾಳೀಯ. ಅಂತಹ ದೊಡ್ಡ ಮಟ್ಟದ ವೇದಿಕೆಗಳಲ್ಲಿ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಹೆಚ್ಚಿಸುವ ಹಂಬಲದೊಂದೆ ಆಟವಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು
ಈಗಿನ ವಿದ್ಯಾರ್ಥಿಗಳು ಮುಂದಿನ ಜವಾಬ್ದಾರಿತ ನಾಗರಿಕರು ಆಗಲಿದ್ದಾರೆ. ಆದಕಾರಣ ಶಾಲಾ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಅವಕಾಶ ಕಲ್ಪಿಸಿದೆ. ಕ್ರೀಡೆ ಎಂಬುವದು ಜಾತಿ, ಮತ, ಪಂಥ, ಧರ್ಮ ಎಲ್ಲವನ್ನು ಮೀರಿದ್ದಾಗಿದೆ ಎಂದರು .
ರಾಜ್ಯಮಟ್ಟದಲ್ಲಿ ಜಿಲ್ಲೆಯ ಪಿಯು ವಿಭಾಗದ ಫಲಿತಾಂಶ ಕೊನೆಯ ಸ್ಥಾನದಲ್ಲಿರುವುದು ನೋವಿನ ಸಂಗತಿಯಾಗಿದೆ. ಶಿಕ್ಷಣ ವ್ಯವಸ್ಥೆಯ ಹಾಗೂ ಫಲಿತಾಂಶದ ಸುಧಾರಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಡಿಡಿಪಿಯು, ಅಧಿಕಾರಿಗಳು ಹಾಗೂ ಉಪನ್ಯಾಸಕರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಉತ್ತಮ ಶಾರೀರಕ್ಕೆ ಹಾಗೂ ಆರೋಗ್ಯಯುತ ಜೀವನಕ್ಕೆ ಬೌದ್ಧಿಕ ಸಾಮರ್ಥ್ಯದ ಜೊತೆಗೆ ದೈಹಿಕ ಸಾಮರ್ಥ್ಯ ಅವಶ್ಯಕವಾಗಿದೆ. ದೈಹಿಕ ಚಟುವಟಿಕೆಗಳು ಇಲ್ಲದಿದ್ದರೆ ಜನರು ರೋಗಿಗಳಾಗುತ್ತಾರೆ. ಗಾಡಿ ಚಲಾವಣೆ ಇಲ್ಲದೆ ಒಂದೇಕಡೆ ಇದ್ದರೆ ಜಂಗು ಹಿಡಿದು ಹಾಳಾಗುತ್ತದೆ ಆದರೆ ಗಾಡಿ ಬದಲಾವಣೆ ಮಾಡಬಹುದು ಆದರೆ ಬಾಡಿಗೆ ದೈಹಿಕ ಚಟುವಟಿಕೆಯಿಲ್ಲದೆ ನಿಂತರೆ ರೋಗ ಎಂಬ ಜಂಗು ಹಿಡಿದಾಗ ಬದಲಾವಣೆ ಮಾಡಲು ಬರುವುದಿಲ್ಲ. ಅದಕ್ಕಾಗಿ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು. ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡೆಯನ್ನು ಸ್ವೀಕಾರ ಮಾಡಬೇಕು. ಸೋಲು ಗೆಲುವನ್ನು ಸಮಾನವಾಗಿ ಪಡೆದು ಗೌರವಿಸಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಗದಗ ಜಿಲ್ಲಾ ಉಪನಿರ್ದೇಶಕ ಜಿ. ಎನ್. ಕುರ್ತಕೋಟಿ ಮಾತನಾಡಿ, ನಮ್ಮ ಗದಗ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಈಗಾಗಲೇ ಅನೇಕ ರೂಪರೇಷಗಳನ್ನು ಅಳವಡಿಸಿ ಪಾಲನೆ ಮಾಡಲಾಗುತ್ತಿದೆ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಸಾಂಘಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗಜೇಂದ್ರಗಡ ತಾಲ್ಲೂಕಿನ 14 ಪಿಯು ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ತರಬೇತುದಾರರು, 20ಕ್ಕೂ ಹೆಚ್ಚು ನಿರ್ಣಾಯಕರು ಭಾಗವಹಿಸಿದ್ದರು. ಶಾಸಕರು ಕ್ರೀಡಾಜ್ಯೋತಿ ಸ್ವೀಕಾರ ಮಾಡಿದರೆ ಡಿಡಿಪಿಯು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ನಂತರ ಧ್ವಜಾಗೌರವ ಸಲ್ಲಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ವೇಳೆ ಪಿಯು ಕಾಲೇಜ್ ಆಡಳಿತ ಮಂಡಳಿ ಚೇರಮನ್ನ ವಿ. ವಿ. ವಸ್ತ್ರದ, ಶೈಕ್ಷಣಿಕ ಸಲಹೆಗಾರ ಬಿ. ಎಸ್. ಗೌಡರ, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಸಿದ್ದಣ್ಣ ಬಂಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವೀರಣ್ಣ ಶೆಟ್ಟರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹುಲಿಗವ್ವ ಸಣ್ಣಕ್ಕಿ, ಶಶಿಧರ ಹೂಗಾರ, ಪಿಎಸ್ಐ ಸೋಮನಗೌಡ ಗೌಡ್ರ, ಪ್ರಾಚಾರ್ಯರಾದ ವಸಂತರಾವ ಗಾರಗಿ, ವೈ. ಸಿ. ಪಾಟೀಲ, ಎ. ಪಿ. ಗಾಣಗೇರ, ಬಿ. ಎಸ್. ಹಿರೇಮಠ, ಆರ್. ಎಸ್. ಮರಾಠಿ ಇದ್ದರು.
ವರದಿ : ಸುರೇಶ ಬಂಡಾರಿ.