ಕ್ರೀಡೆ ಮಾನಸಿಕವಾಗಿ ದೈಹಿಕವಾಗಿ ಸದೃಡಗೊಳಿಸಲು ಪ್ರೇರಣಾದಾಯಕ ಶಕ್ತಿ:-ಯಂಕಣ್ಣ ಯರಾಸಿ.
ಕುಕನೂರ ಪದವಿ ಪೂರ್ವ ಕಾಲೇಜಿನ ತಾಲೂಕಾ ಮಟ್ಟದ ಕ್ರೀಡಾಕೂಟ
ಕ್ರೀಡೆ ಮಾನಸಿಕವಾಗಿ ದೈಹಿಕವಾಗಿ ಸದೃಡಗೊಳಿಸಲು ಪ್ರೇರಣಾದಾಯಕ ಶಕ್ತಿ:-ಯಂಕಣ್ಣ ಯರಾಸಿ.
ಕುಕನೂರ : ಸತ್ಯಮಿಥ್ಯ (ಸ -09)
ಕ್ರೀಡೆ ಮಾನಸಿಕವಾಗಿ ದೈಹಿಕವಾಗಿ ಸದೃಡಗೊಳಿಸಲು ಪ್ರೇರಣಾದಾಯಕ ಶಕ್ತಿ ಹೊಂದಿವೆ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಸ್ಥಾನಿಕ ಆಡಳಿತ ಮಂಡಳಿ ಕೆ.ಎಲ್.ಇ. ಕಾಲೇಜು ಸದಸ್ಯರಾದ ಯಂಕಣ್ಣ ಯರಾಸಿ ಅವರು ಹೇಳಿದರು.
ಕೆ.ಎಲ್.ಇ. ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯ ಕುಕನೂರು ತಾಲೂಕು ಮಟ್ಟದ ಕಾಲೇಜುಗಳ ಕ್ರೀಡಾಕೂಟ ಜ್ಯೋತಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅವರು ಕ್ರೀಡೆಯಲ್ಲಿ ಗೆದ್ದೆ ಎಂಬ ಅಹಂಭಾವ ಬೇಡ ಸೋತೆ ಎಂಬ ಮಾನಸಿಕತೆ ಬೇಡ ಎಲ್ಲವನ್ನು ಸಮಾನವಾಗಿ ತೆಗೆದುಕೊಂಡು ಸೋಲೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಮುಂದೋಂದು ದಿನ ಉಜ್ವಲ ಭವಿಷ್ಯ ಕ್ರೀಡೆಯಲ್ಲಿ ಸಿಗಲಿದೆ ಕ್ರೀಡೆಯನ್ನು ಕ್ರೀಡೆಯನ್ನಾಗಿ ಆಡಬೇಕು ಅದರಲ್ಲಿ ಯಾವುದೇ ರೀತಿ ಬೇಧ ಭಾವವೆಂಬುದು ಇರಬಾರದು ಬೇರೆ ಬೇರೆ ಶಾಲೆಯವರು ಇದ್ದರೂ ಕೂಡಾ ಎಲ್ಲರೂ ಮುಂದೊಂದು ದಿನ ಸ್ನೇಹಿತರಾಗಿ ಬಾಳಲಿದ್ದೀರಿ ಉತ್ತಮವಾಗಿ ಕ್ರೀಡೆಯನ್ನು ಆಡುವ ಮೂಲಕ ತಮ್ಮ ಆತ್ಮ ವಿಶ್ವಾಸ ಹಾಗೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಮತ್ತು ಕ್ರೀಡೆ ಒಂದು ನಾಣ್ಯದ ಎರಡು ಮುಖಗಳಿಂದ್ದಂತೆ ಶಿಕ್ಷಣ ಬೌದ್ಧಿಕ ಶಿಕ್ಷಣಕ್ಕೆ ಪೂರಕವಾಗಿದ್ದರೆ ದೈಹಿಕ ಶಿಕ್ಷಣವು ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕತೆಯನ್ನು ದೂರಿಕರಿಸಲಿದೆ ಎಂದರು.
ನಂತರದಲ್ಲಿ ತಾಲೂಕ ಪದವಿಪೂರ್ವ ಕಾಲೇಜಿನ ಪ್ರಚಾರ ಸಂಘದ ತಾಲೂಕ ಅಧ್ಯಕ್ಷರಾದ ಡಾ . ಪಕೀರಪ್ಪ ವಜ್ರಬಂಡಿ ಮಾತನಾಡುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಸದೃಢ ದೇಹದೊಂದಿಗೆ ಕ್ರೀಡೆ ಆರೋಗ್ಯವನ್ನು ಬೆಳೆಸುವುದರಿಂದ ಜೀವನದಲ್ಲಿ ಸುಖಮಯವಾಗಿ ಬದುಕಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಶೈಕ್ಷಣಿಕ ವಿಚಾರದೊಂದಿಗೆ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದ ಕ್ರೀಡಾಕೂಟಕ್ಕೆ ಚಾಲನೆಯನ್ನು ವಿದ್ಯಾನಂದ ಗುರುಕುಲ ಶಿಕ್ಷಣ ವಿಶ್ವಸ್ಥ ಮಂಡಳಿ ಕಾರ್ಯದರ್ಶಿಗಳಾದ ಜಿ.ವಿ. ಜಹಗೀರದಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷರಾದ ಲಲಿತಮ್ಮ ಯಡಿಯಾಪೂರ,ಪಂ.ಪಂ. ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ,ಕೆ.ಎಲ್.ಇ ಸಂಸ್ಥೆಯ ಪ್ರಾಚಾರ್ಯ ಅರುಣ ಕುಮಾರ್ ಹಿರೇಮಠ , ಮಾರುತಿ ಲಕಮಾಪೂರ, ಉಮೇಶ ಕಂಬಳಿ, ಪೀರ ಸಾಬ ದಪೇದಾರ, ಎಫ್. ಜಿ. ಅಂಗಡಿ, ಶರಣಪ್ಪ ವೀರಾಪೂರ , ಎನ್. ಪಾಂಡುರಂಗ ಪ್ರಾಚಾರ್ಯರು, ನರೇಂದ್ರ ರಾಠೋಡ, ದೈಹಿಕ ಶಿಕ್ಷಕರಾದ ಎಸ್. ಎಂ. ಹಿರೇಮಠ, ಚಂದ್ರಶೇಖರ್ ರಾಜೂರ, ಆರ್. ಡಿ. ರಾಠೋಡ, ಇತರ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಇತರರು ಇದ್ದರು.
ವರದಿ : ಚನ್ನಯ್ಯ ಹಿರೇಮಠ.