
ಅದ್ದೂರಿಯಾಗಿ ಜರುಗಿದ ಮಾರ್ಕಂಡೇಶ್ವರ ಉತ್ಸವ.
ಗಜೇಂದ್ರಗಡ-ಸತ್ಯಮಿಥ್ಯ (ಆ-10).
ನಗರದ ಪದ್ಮಶಾಲಿ ಸಮಾಜದ ವತಿಯಿಂದ ಮಾರ್ಕಂಡೇಶ್ವರ ಉತ್ಸವ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ 6 ಗಂಟೆಗೆ ಮಾರ್ಕಂಡೇಶ್ವರ ಮೂರ್ತಿಗೆ ರುದ್ರಾಭಿಷೇಕ ಜರುಗಿತು.ನಂತರ ಸಮಾಜದ ಹಿರಿಯರಿಂದ ಜನಿವಾರದಾರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪದ್ಮಸಲ್ಲಿ ಸಮಾಜದ ಸಮಾಜ ಶಕ್ತಿ ಟ್ರಸ್ಟ್ (ರಿ) ಬೆಂಗಳೂರು ಇವರ ಆಶ್ರಯದಲ್ಲಿ ನಡೆದ ಕರ್ನಾಟಕ ಸೇವಾರಥ ಪ್ರಶಸ್ತಿ 2025 ಪ್ರಶಸ್ತಿ ಪಡೆದ ಸಮಾಜದ ಅಧ್ಯಕ್ಷರಾದ ಕೊಟ್ರೇಶ್ ಚಿಲಕರವರಿಗೆ, ಉತ್ತರ ಕರ್ನಾಟಕ ಪ್ರಾಂತೀಯ ಪದ್ಮಶಾಲಿ ಸಂಘಕೆ ಆಯ್ಕೆ ಆದ ಸಮಾಜದ ಹಿರಿಯರಾದ ಹನುಮಂತ ಚುಂಚಾ ಹಾಗೂ ರತ್ನಪ್ಪ ವಾಸಿಯವರಿಗೆ.ಗದಗ ಜಿಲ್ಲಾ ಪದ್ಮಶಾಲಿ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ರೇಣುಕಾ ಏವೂರರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೊಟ್ರೇಶ ಚಿಲಕಾ. ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರು ಸಂಘಟಿತರಾಗುವ ಅವಶ್ಯಕತೆ ಇದೆ. ಉತ್ಸವಗಳು ಸಮಾಜದ ಜನತೆಯ ಪರಸ್ಪರ ಸಮಾಗಮಕ್ಕೆ ನಾಂದಿ ಹಾಡುತ್ತವೆ ಆದ್ದರಿಂದ ಪ್ರತಿಯೊಬ್ಬ ಸಮಾಜದ ವ್ಯಕ್ತಿಯು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ಗದಗ ಜಿಲ್ಲಾ ಪದ್ಮಶಾಲಿ ಮಹಿಳಾ ಅಧ್ಯಕ್ಷರಾದ ರೇಣುಕಾ ಏವೂರ ಮಾತನಾಡಿ. ಮಹಿಳೆಯರು ವಿಭಿನ್ನ ರೀತಿಯ ಕೌಶಲ್ಯವನ್ನು ಹೊಂದಿದ್ದು ಅವರಿಗೆ ವೇದಿಕೆಯ ಕೊರತೆ ಕಾಡುತ್ತಿದೆ. ಮಹಿಳೆಯರು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಕಾರ್ಯಕ್ರಮದಲ್ಲಿ ಜವಾಬ್ದಾರಿಗಳನ್ನು ತೆಗೆದುಕೊಂಡು ನಿರೀಕ್ಷಿತ ರೀತಿಯಲ್ಲಿ ನಿಭಾಯಿಸುವ ಮೂಲಕ ಮಹಿಳೆ ಸಬಲಳಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹನುಮಂತ ಚುಂಚಾ. ಈಗಾಗಲೇ ಗಜೇಂದ್ರಗಡ ಪದ್ಮಶಾಲಿ ಸಮಾಜ ದೇವಸ್ಥಾನ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಅನೇಕ ಮೈಲುಗಲ್ಲುಗಳನ್ನು ಸಾಧಿಸಿದ್ದು. ನಾವು ರಾಜಕೀಯ ವಾಗಿ, ಔದ್ಯೋಗಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲರಾಗುವ ಅವಶ್ಯಕತೆ ಇದೆ ಆ ನಿಟ್ಟಿನಲ್ಲಿ ಸಮಾಜ ಬಾಂಧವರು ಶ್ರಮ ವಹಿಸುವುದು ಅಗತ್ಯ ಎಂದರು.
ನಂತರ ಸಕಲವಾದ್ಯದೊಂದಿಗೆ ಮಾರ್ಕಂಡೇಶ್ವರ ಪಾಲಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಮಾರ್ಕಂಡೇಶ್ವರ ದೇವಸ್ಥಾನಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಮಾರ್ಕಂಡಪ್ಪ ದೇವರೆಡ್ಡಿ, ಸುರೇಶ್ ಗಾಯಕವಾಡ, ಗಣೇಶ್ ದೇವರೆಡ್ಡಿ, ತರುಣ ಸಂಘದ ಅಧ್ಯಕ್ಷರಾದ ಪ್ರಕಾಶ ಪಲಮಾರಿ, ಶ್ರೀನಿವಾಸ್ ದೇವರಡ್ಡಿ, ಸುಭಾಷ್ ನರಾಲ, ರಾಘವೇಂದ್ರ ಕ್ಯಾಮಾ, ಶಂಕರ ಬಂಡಾರಿ,ಅಜ್ಜಪ್ಪ ನೀಲಿ,ವಿಠ್ಠಪ್ಪ ಗಾಯಕವಾಡ, ನಾರಾಯಣಪ್ಪ ಶೀಲವೇರಿ,ಪದ್ಮಾವತಿ ಮಹಿಳಾ ಮಂಡಳ ಅಧ್ಯಕ್ಷರಾದ ವಿಮಲಾ ಶಿಲವೇರಿ, ಮೀನಾಕ್ಷಿ ಚುಂಚಾ, ಹೇಮಾ ಚಿಲಕ, ಸರಸ್ವತಿ ಗಾಯಕವಾಡ, ರತ್ನಮ್ಮ ದೇವರೆಡ್ಡಿ, ಗಂಗಮ್ಮ ದೇವರೆಡ್ಡಿ, ಕಳಕಪ್ಪ ಕೆಂಚಿ, ನವೀನ ದೇವರೆಡ್ಡಿ,ಹನಮಂತ ಕೆಂಚಿ,ಸಿದ್ದು ಚಿಲಕಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಸುರೇಶ ಬಂಡಾರಿ.