
ಸೂಡಿ ಗ್ರಾಮ ಪಂಚಾಯತ್ – ಕಾಂಗ್ರೆಸ್ ಸದಸ್ಯ ಮತ್ತು ಮುಖಂಡನ ನಡುವೆ ಅವಾಚ್ಯ ಶಬ್ದಗಳ ನಿಂದನೆ.
ಸಂದರ್ಭಿಕ ಚಿತ್ರ: ಸೂಡಿ ಗ್ರಾಮ ಪಂಚಾಯತ್
ಗಜೇಂದ್ರಗಡ: ಸತ್ಯ ಮಿಥ್ಯ ( ಜು – 30)
ಕೆಲವು ದಿನಗಳ ಹಿಂದೆ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ್ದ ಕಾಂಗ್ರೇಸ್ ಪಕ್ಷ. ನಿನ್ನೆ ತಮ್ಮದೇ ಪಕ್ಷದ ಸದಸ್ಯ ಮತ್ತು ಮುಖಂಡನ ನಡುವೆ ಅವಾಚ್ಯ ಶಬ್ದಗಳ ಮಾತಿನ ಚಕಮಕಿ ಮತ್ತೊಮ್ಮೆ ಮುಜುಗರಕ್ಕಿಡಾಗಿದೆ.
ಘಟನೆ ವಿವರ : ಕೆಲವು ದಿನಗಳ ಹಿಂದೆ ನಡೆದ ಸೂಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೇ ಯಲ್ಲಿ. 11 ಜನ ಸಂಖ್ಯಾ ಬಲ ಹೊಂದಿದ್ದ ಕಾಂಗ್ರೇಸ್ ಸುಲಭವಾಗಿ ಅಧಿಕಾರ ಚುಕ್ಕಾಣಿ ಹಿಡಿಯುವದು ಎಂದು ಬಹುತೇಕರ ಅಭಿಪ್ರಾಯವಾಗಿತ್ತು ಅದರೆ ಕಾಂಗ್ರೇಸ್ ಪಕ್ಷದ 3 ಜನ ಸದಸ್ಯರು ಅಡ್ಡ ಮತದಾನ ಮಾಡಿದ್ದರಿಂದ ಕೇವಲ 6 ಜನ ಸದಸ್ಯ ಬಲ ಹೊಂದಿರುವ ಬಿಜೆಪಿ ಪಕ್ಷದ ಆಯಶಾ ಬೇಗಂ ಮೂಕಾಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದರಿಂದ ಬಹಳಷ್ಟು ಮುಜುಗರಕ್ಕೆ ಇಡಾಗಿದ್ದ ಸ್ಥಳೀಯ ಕಾಂಗ್ರೇಸ್ ಮುಖಂಡರು. ಸೂಡಿ ಗ್ರಾಮ ಪಂಚಾಯತಿಯ ಕಾಂಗ್ರೇಸ್ಸಿನ ಎಲ್ಲ ಸದಸ್ಯರನ್ನು ರಾಜೀನಾಮೆ ಕೊಡಿಸಿ ಪಕ್ಷ ಒಗ್ಗಟ್ಟಾಗಿದೆ ಎಂಬುವದನ್ನು ಬಿಂಬಿಸಿದ್ದರು.
ನಿನ್ನೆ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಾಂಗ್ರೇಸ್ ಬೆಂಬಲಿತ ಸದಸ್ಯ ಬೀರಪ್ಪ ಮಾರಣಬಸರಿ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಅರ್ಜಿಯೊಂದಿಗೆ ಗ್ರಾಮ ಪಂಚಾಯತಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೇಸ್ಸಿನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಪರಾಬವಗೊಂಡಿದ್ದ ಗಂಗಮ್ಮ ಗೊರವರರವರ ಪತಿ ಶರಣಪ್ಪ ಗೊರವರ ಅಲ್ಲೇ ಇದ್ದು. ಬೀರಪ್ಪನವರ ಕೈಯಲ್ಲಿದ್ದ ರಾಜೀನಾಮೆ ಹಿಂಪಡೆಯುವ ಪತ್ರ ಕಂಡು ಕೋಪಗೊಂಡಿದ್ದಾರೆ. ಈ ಸಂದರ್ಭದಲ್ಲಿ ಶರಣಪ್ಪ ಮತ್ತು ಬೀರಪ್ಪನವರ ನಡುವೆ ಮಾತಿನ ಚಕಮಕಿ ಮಡಿದು ಇಬ್ಬರೂ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬೀರಪ್ಪ ಶಾಸಕ ಜಿ. ಎಸ್. ಪಾಟೀಲ ಮತ್ತು ಮಿಥುನ್ ಪಾಟೀಲರಿಗೆ ದೂರವಾಣಿ ಕರೆ ಮಾಡಿ ಘಟನೆ ವಿವರ ತಿಳಿಸಿದ್ದಾರೆ. ಇದರಿಂದ ರಾಜೀನಾಮೆ ಕೊಡಿಸಲು ಕಾರಣವಾಗಿದ್ದ ಕಾಂಗ್ರೇಸ್ ಮುಖಂಡರಿಗೆ ಮುಜುಗರವಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ನಮ್ಮ ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡಿದ ಬೀರಪ್ಪ. ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದು ನಿಜ. ಆದರೆ ನನ್ನನ್ನು ಆಯ್ಕೆ ಮಾಡಿದ ಜನತೆ ಅಭಿಪ್ರಾಯದಂತೆ ನನ್ನ ಅಧಿಕಾರ ಅವಧಿ ಕೆಲವೇ ತಿಂಗಳಿದ್ದು ರಾಜೀನಾಮೆ ಕೊಡುವುದು ಬೇಡ ಎಂದಿದ್ದಾರೆ. ಆದ್ದರಿಂದ ನಾನು ರಾಜೀನಾಮೆ ಹಿಂಪಡೆಯಲು ಹೋಗಿದ್ದೆ.ಆ ಸಂದರ್ಭದಲ್ಲಿ ಶರಣಪ್ಪ ಗೊರವರ ನನ್ನ ಕೈಯಲ್ಲಿದ್ದ ಅರ್ಜಿ ಕಸಿದುಕೊಂಡು ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ಸತ್ಯ. ಆದರೆ ಶರಣಪ್ಪ ಗೊರವರ ಗ್ರಾಮ ಪಂಚಾಯತ್ ಸದಸ್ಯನೇ ಅಲ್ಲಾ ಅವರ ಹೆಂಡತಿ ಉಪಾಧ್ಯಕ್ಷರು ಇರುವ ಕಾರಣಕ್ಕೆ
ಈ ರೀತಿ ಮಾಡಿದ್ದಾರೆ. ಮತ್ತೆ ಸಾಯಂಕಾಲ ಅವರ ಮಕ್ಕಳು ನಮ್ಮ ಮನೆಗೆ ಬಂದು ಓದರಾಡಿ ಹೋಗಿದ್ದಾರೆ. ರಾಜೀನಾಮೆ ಹಿಂಪಡೆಯುವ ನಿರ್ಧಾರವನ್ನು ಇಂದು ನಿರ್ಧರಿಸುತ್ತೇನೆ ಎಂದರು.
ಈ ಕುರಿತು ಶರಣಪ್ಪ ಗೊರವರವರನ್ನು ಸಂಪರ್ಕಿಸಲು ಅನೇಕ ಬಾರಿ ದೂರವಾಣಿ ಕರೆ ಮಾಡಿದರು ಸಂಪರ್ಕಕ್ಕೆ ಸಿಗುತ್ತಿಲ್ಲ.
ವರದಿ:ಚನ್ನು. ಎಸ್.