ಸ್ಥಳೀಯ ಸುದ್ದಿಗಳು

ಬನ್ನಿಕೊಪ್ಪದಲ್ಲಿ ನವಜಾತ ಗಂಡು ಶಿಶು ಶವವಾಗಿ ಪತ್ತೆ.

Share News

ಬನ್ನಿಕೊಪ್ಪದಲ್ಲಿ ನವಜಾತ ಗಂಡು ಶಿಶು ಶವವಾಗಿ ಪತ್ತೆ.

 

Oplus_0

ಕೊಪ್ಪಳ :ಸತ್ಯಮಿಥ್ಯ(ಸ -13)

ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ವಾಲ್ಮೀಕಿ ಸಮುದಾಯ ಭವನದ ಹತ್ತಿರದಲ್ಲಿ 7 ತಿಂಗಳ ನವಜಾತ ಶಿಶುವನ್ನು ಶುಕ್ರವಾರದಂದು ಬೆಳಗ್ಗೆ ಸುಮಾರು 7.20ರಿಂದ 8 ಗಂಟೆಯ ಒಳಗೆ ತಿಪ್ಪೆಯಲ್ಲಿ ಬಿಸಾಡಿ ಹೋಗಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಷಯವು ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ತಡವಾಗಿ ಬೆಳಕಿಗೆ ಬಂದಿದ್ದು, ನವಜಾತ ಶಿಶು ಗಂಡು ಮಗುವಾಗಿದ್ದು ಅನೈತಿಕತೆಯಿಂದ ಹುಟ್ಟಿದ ಮಗುವಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ಈ ಕುರಿತಂತೆ ಕುಕನೂರು ಠಾಣೆಯ ಪೋಲಿಸ್ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿದರು ಎಂದು ತಿಳಿದು ಬಂದಿದ್ದು, ಬನ್ನಿಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸುರೇಶ ರಾಠೋಡ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗಿದೆ.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!