
ದೇಶದ ಜನತೆ ಸುಭದ್ರತೆಯಿಂದ ಜೀವನ ಸಾಗಿಸಲು ಸಂವಿಧಾನವೇ ಕಾರಣ – ಮಾಜಿ ಸಚಿವ ಕೆಜಿಬಿ ಅಭಿಮತ.
ಗಜೇಂದ್ರಗಡ : ಸತ್ಯಮಿಥ್ಯ (ಜ -25)
ದೇಶದ ಜನತೆ ಸುಭದ್ರತೆಯಿಂದ ಜೀವನ ಸಾಗಿಸಲು ಸಂವಿಧಾನವೇ ಕಾರಣ. ದೇಶದಲ್ಲಿ ಸಂವಿಧಾನಾತ್ಮಕವಾಗಿ ಆಡಳಿತ ನಡೆಯುತ್ತಿರುವುದರಿಂದಲೇ ದೇಶದ ಜನತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ನುಡಿದರು.
ಅವರು ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ವತಿಯುಂದ ಗಜೇಂದ್ರಗಡ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ದೇಶದ ಸಂವಿಧಾನ ರಚನೆಗೊಂಡು 75 ವರ್ಷ ತುಂಬಿದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಭಾರತದ ಹೆಮ್ಮಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ. ಆರ್ ಅಂಬೇಡ್ಕರವರ ಜೀವನಕ್ಕೆ ಸಂಬಂಧಿಸಿದ ಐದು ಸ್ಥಳಗಳನ್ನು ಪಂಚ ತೀರ್ಥ ಸ್ಥಳಗಳನ್ನಾಗಿ ಅಭಿವೃದ್ದಿ ಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ ಕುಲಕರ್ಣಿ,ರಮೇಶ ಸಜ್ಜಗಾರ,ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಮಂಜನಾಥ ಮುಳಗುಂದ ,ಮುತ್ತಣ್ಣ ಕಡಗದ,ಆರ್ ಕೆ ಚವ್ಹಾಣ,ಉಮೇಶ ಮಲ್ಲಾಪುರ,ಎಚ್ ಕೆ ಹಟ್ಟಿಮನಿ,ಕನಕಪ್ಪ ಅರಳಿಗಿಡದ,ಮಲ್ಲು ಮಾದರ,ಭೀಮಪ್ಪ ಮಾದರ ಡಿ.ಜಿ.ಕಟ್ಟಿಮನಿ,ಬುಡ್ಡಪ್ಪ ಮೂಲಿಮನಿ ಮುಂತಾದವರಿದ್ದರು.
ವರದಿ : ಚನ್ನು. ಎಸ್.