ನೂತನ ಶಿಕ್ಷಣ ನೀತಿ ಜಾರಿಯಿಂದ ಮಕ್ಕಳ ಭವಿಷ್ಯ ಉಜ್ವಲ: ಬಸವರಾಜ ಬೊಮ್ಮಾಯಿ
ಪ್ರತಿಭೆಗಳನ್ನು ಗುರುತಿಸುವ ಹಾಗೂ ಸನ್ಮಾನಿಸುವ ಕೆಲಸ ಅತ್ಯಂತ ಮಹತ್ವದ ಕೆಲಸ.

*ನೂತನ ಶಿಕ್ಷಣ ನೀತಿ ಜಾರಿಯಿಂದ ಮಕ್ಕಳ ಭವಿಷ್ಯ ಉಜ್ವಲ: ಬಸವರಾಜ ಬೊಮ್ಮಾಯಿ*
ಗದಗ:ಸತ್ಯಮಿಥ್ಯ (ಜುಲೈ -14)
ಪ್ರಧಾನ ಮಂತ್ರಿ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿ ಜಾರಿಗೆ ಬಂದರೆ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಗದಗ ಪಟ್ಟಣದ ಜೆ.ಟಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಧಾರವಾಡ, ಜಿಲ್ಲಾ ಘಟಕ ಗದಗ ಮತ್ತು ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ ಹುಬ್ಬಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಭೆಗಳನ್ನು ಗುರುತಿಸುವ ಹಾಗೂ ಸನ್ಮಾನಿಸುವ ಕೆಲಸ ಅತ್ಯಂತ ಮಹತ್ವದ ಕೆಲಸ. ಆ ಕೆಲಸವನ್ನು ಅತ್ಯಂತ ಅಚ್ಷುಕಟ್ಟಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಸಮಾಜಕ್ಕೆ ಒಳ್ಳೆಯದನ್ನು ಮಾಡಿದರೆ ಸಮಾಜ ಅದನ್ನು ಮೆಚ್ಚಿಕೊಂಡರೆ ಅದಕ್ಕಿಂತ ಒಳ್ಳೆಯ ಕೆಲಸ ಇನ್ನೊಂದಿಲ್ಲ. ಒಬ್ಬ ಮುದುಕಿಯನ್ನು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿಸಿನೋಡಿ ಅದರಿಂದ ಸಿಗುವ ಸಂತೃಪ್ತಿಯೇ ಬೇರೆ. ಅದು ಇನ್ನಷ್ಟು ದೊಡ್ಡ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಒಬ್ಬ ಪಾಶ್ಚಿಮಾತ್ಯ ತತ್ವಜ್ಞಾನಿ ನಿನ್ನ ಜೀವನದ ಅತ್ಯಂತ ಮಹತ್ವದ ಘಳಿಗೆ ಯಾವುದೆಂದರೆ ನಾನು ನನಗಾಗಿ ಕಳೆದ ಸಮಯವೇ ನನಗೆ ಅತ್ಯಂತ ಮಹತ್ವದ ಗಳಿಗೆ, ಎಲ್ಲರಕ್ಕಿಂತ ದೊಡ್ಡ ಗೆಳೆಯ ನಮ್ಮೊಳಗೆ ಇದ್ದಾನೆ ಎಂದರು.
ಜನರ ಸಮಸ್ಯೆಗಳನ್ನು ಬಗೆಹರಿಸಲು ಹಲವಾರು ಮಾರ್ಗಗಳಿಗೆ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸುವುದು ಹೇಗೆ, ಅದನ್ನು ಯಶಸ್ಸು ಗೊಳಿಸುವವರು ಹಾಗೂ ವಿಫಲಗೊಳಿಸುವವರೂ ನಾವೆ, ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಬೇಕು. ಯಾಕೆ, ಏನು ಎಂಬ ಪ್ರಶ್ನೆ ಮಾಡುವ ಮನೋಭಾವನೆ ಬೆಳೆದರೆ ಜಗತ್ತು ತಾನಾಗಿಯೇ ಅರ್ಥವಾಗುತ್ತದೆ. ಯಾವುದು ಕಠಿಣ ಇದೆಯೋ ಅದನ್ನು ತಿಳಿದುಕೊಳ್ಳುವುದು ಒಂದು ಭಾಗ, ಅದನ್ನು ಇನ್ನೊಬ್ಬರಿಗೆ ತಿಳಿಸಿವುದು ಇನ್ನೊಂದು ಭಾಗ. ಪರೀಕ್ಷೆಯಲ್ಲಿ ಪಾಸ್ ಆಗುವುದು ಬೇರೆ, ಜ್ಞಾನ ಬೆಳೆಸಿಕೊಳ್ಳುವುದು ಬೇರೆ. ಯಾವುದೇ ಮಕ್ಕಳನ್ನು ಕೇಳಿದರೂ ಐಎಎಸ್ ಆಗಬೇಕು ಎನ್ನುತ್ತಾರೆ. ಎಲ್ಲವನ್ನೂ ಬಾಯಿಪಾಠ ಮಾಡುವುದೇ ಜೀವನ ಆಗಿದೆ. ನನ್ನ ಪ್ರಕಾರ ಯುಪಿಎಸ್ಸಿ ಪರೀಕ್ಷಾ ಪದ್ದತಿ ಬದಲಾಗಬೇಕು. ಜಗತ್ತಿನ ಎಲ್ಲ ಇತಿಹಾಸವನ್ನು ಬಾಯಿಪಾಠ ಮಾಡಬೇಕು. ಇವತ್ತಿನ ಬದುಕು, ಜನ ಕಲ್ಯಾಣ ಹೇಗೆ ಆಗಬೇಕು, ಈಗಿನ ತಂತ್ರಜ್ಞಾನ. ಬದಲಾಗಿದೆ ಅದರ ಮೂಲಕ ಹೇಗೆ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಪ್ರಶ್ನೆಗಳು ಇರಬೇಕು. ನಾನು ಸಾಕಷ್ಟು ಐಎಎಸ್ ಅಧಿಕಾರಿಗಳನ್ನು ನೋಡಿದ್ದೇನೆ. ಆಳುವುದು ಬೇರೆ, ಆಡಳಿತ ಮಾಡುವುದೇ ಬೇರೆ, ಈಗ ಆಳುವವರು ಆಡಳಿತ ಮಾಡಲು ಹೊರಟಿದ್ದಾರೆ ಎಂದರು.
ಒಮ್ಮೆ ವಿದ್ಯಾರ್ಥಿಯಾದರೆ ಸಾಯುವವರೆಗೂ ವಿದ್ಯಾರ್ಥಿಯಾಗಿರುತ್ತಾನೆ. ಶಾಲೆಯಲ್ಲಿ ಮೊದಲು ಒಠ್ಯ ಕಲಿತು ನಂತರ ಪರೀಕ್ಷೆ ಬರೆಯಬೇಕು. ಜೀವನದಲ್ಲಿ ಮೊದಲು ಪರೀಕ್ಷೆ ಬರೆದು ಪಾಠ ಕಲಿಬೇಕು. ಹೀಗಾಗಿ ಎರಡು ಥರದ ಕಲಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಧಕರಿಗೆ ಹಾಗೂ ಯಶಸ್ವಿಗೆ ಇರುವ ವ್ಯತ್ಯಾಸವೇನೆಂದರೆ ನಿರಂತರ ಯಶಸ್ಸಿನಿಂದ ಸಮಾಜಕ್ಕೆ ಒಳ್ಳೆಯದಾದರೆ ಅವನು ಸಾಧಕನಾಗುತ್ತಾನೆ. ನಮ್ಮಲ್ಲಿರುವ ಶಿಕ್ಷಣ ಪದ್ದತಿಯಲ್ಲಿ ಡಿಗ್ರಿಗೆ ಮಹತ್ವ ಕೊಡುತ್ತೇವೆ. ಇಂತಹ ಕೆಲಸವನ್ನು ಇಂತಹ ಡಿಗ್ರಿ ಓದಿದವರು ಮಾಡಬೇಕೆಂಬ ನಿಯಮ ಮಾಡಿಕೊಂಡಿದ್ದೇವೆ. ಆರ್ಟ್ಸ್ ಕಲಿತವರು ಆರ್ಟ್ಸ್ ಟೀಚರ್ ಆಗಬೇಕು, ಕಾಮರ್ಸ್ ಕಲಿತವರು ಬ್ಯಾಂಕ್ ಉದ್ಯೋಗಿ ಆಗಬೇಕು ಎನ್ನುವ ನಿಯಮ ಹಾಕಿಕೊಂಡಿದ್ದೇವೆ. ನಮ್ಮ ಪ್ರಧಾನ ಮಂತ್ರಿಗಳು ನೂತನ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಆರ್ಟ್ಸ್ ಓದುತ್ತ ಕಾಮರ್ಸ್ ಓದಬಹುದು ಇದು ಈಗಾಗಲೇ ವಿದೇಶದಲ್ಲಿದೆ, ಇದೇನು ಹೊಸದಲ್ಲ. ಅತ್ಯಂತ ಬುದ್ದಿವಂತ ಮಕ್ಕಳಿರುವುದು ಭಾರತದಲ್ಲಿ ಇದ್ದಾರೆ ಎಂದರು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಸೇರಿದಂತೆ ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಮುತ್ತು.