
ಮದ್ದೂರಿನ ಘಟನೆ ಖಂಡನೀಯ – ಮುತ್ತಣ್ಣ ಕಡಗದ.
ರೋಣ – ಸತ್ಯಮಿಥ್ಯ (ಸೆ-08).
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಗಣೇಶ ವಿಸರ್ಜನೆ ವೇಳೆ ರಾಜ್ಯದ ವಿವಿಧೆಡೆ ಸಂಭವಿಸಿರುವ ಕೋಮು ಗಲಭೆಗಳೇ ಇದಕ್ಕೆ ಸಾಕ್ಷಿ.
ಮಂಡ್ಯದ ಮದ್ದೂರಿನಲ್ಲಿ ಶಾಂತಿಯುತವಾಗಿ ಸಾಗಿದ್ದ ಗಣೇಶನ ಮೆರವಣಿಗೆಯ ಮೇಲೆ ಕೆಲವರು ಸಂಚು ರೂಪಿಸಿ ಕಲ್ಲೆಸಿದಿದ್ದಾರೆ. ಕುಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಿದವರ ಮೇಲೆ ಮಹಿಳೆ ಎನ್ನುವುದನ್ನೂ ಪರಿಗಣಿಸದೇ ಲಾಠಿಚಾರ್ಜ್ ಮಾಡಿರುವುದು ಅಕ್ಷಮ್ಯ ಅಪರಾಧ.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ತುಷ್ಟೀಕರಣ ನೀತಿ, ಓಲೈಕೆ ರಾಜಕಾರಣಕ್ಕಾಗಿ ಬಹುಸಂಖ್ಯಾತ ಹಿಂದೂಗಳ ಹಿತಾಸಕ್ತಿ ಬಲಿಕೊಟ್ಟಿರುವುದಂತೂ ಸತ್ಯ. ಗಣೇಶೋತ್ಸವದ ಮೆರವಣಿಗೆ ಮೇಲೆ ಕಲ್ಲು ತೂರಿದವರಿಗೆ ರಕ್ಷಣೆ ನೀಡಿ, ಅವರ ಕುಕೃತ್ಯ ಖಂಡಿಸಿ ಪ್ರತಿಭಟಿಸಿದ ಹಿಂದೂ ಮಹಿಳೆಯರ ಮೇಲೆ ಲಾಠಿಚಾರ್ಜ್ ಮಾಡಿಸಿರುವುದು ಖಂಡನೀಯ ಎಂದು ರೋಣ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.