ಸಾಹಿತ್ಯ ಚಿಂತನಾ ಗೋಷ್ಠಿಯಲ್ಲಿ ಎಚ್.ಎಸ್.ವೆಂಕಟೇಶಮೂರ್ತಿ ಭಾವಗೀತೆ ಗುಣಗಾನ.
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ- ಎಚ್ಎಸ್ವಿ ರಚನೆ

ಸಾಹಿತ್ಯ ಚಿಂತನಾ ಗೋಷ್ಠಿಯಲ್ಲಿ ಎಚ್.ಎಸ್.ವೆಂಕಟೇಶಮೂರ್ತಿ ಭಾವಗೀತೆ ಗುಣಗಾನ.
ಗಜೇಂದ್ರಗಡ : ಸತ್ಯಮಿಥ್ಯ ( ಜೂ -26)
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿಯ ಗಜೇಂದ್ರಗಡ ತಾಲೂಕಾ ಘಟಕದ ವತಿಯಿಂದ ಸಾಹಿತ್ಯ ಚಿಂತನಾ ಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.
ಹೆಚ್. ಎಸ್. ವೆಂಕಟೇಶಮೂರ್ತಿಯವರ ಜೀವನ ಮತ್ತು ಅವರ ಸಾಹಿತ್ಯಕ ಕೊಡುಗೆಗಳನ್ನು ಕುರಿತು ಪ್ರದೀಪ್ ಹುಲ್ಲೂರು ಉಪನ್ಯಾಸ ನೀಡಿದರು.ಹೆಚ್ ಎಸ್ ವಿ ಯವರು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.ಅನೇಕ ಕವನ ಸಂಕಲನ ಕಥೆ ಕಾದಂಬರಿ ನಾಟಕಗಳನ್ನು ರಚಿಸಿ ಎಲ್ಲಾ ಪ್ರಕಾರದ ಸಾಹಿತ್ಯ ಕೃಷಿ ಮಾಡಿದ ಕವಿ ಅವರು ರಚಿಸಿದ ಭಾವಗೀತೆಗಳು ಅಪಾರ ಜನಮನ್ನಣೆ ಪಡೆದಿವೆ
“ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ”
“ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ”
“ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವ”
ಇನ್ನೂ ಮುಂತಾದ ಭಾವಗೀತೆಗಳು ಓದುಗನ ಮತ್ತು ಕೇಳುಗರ ಮನವನ್ನು ತಣಿಸುತ್ತವೆ .
ಎಚ್ ಎಸ್ ವೆಂಕಟೇಶ್ ಮೂರ್ತಿಯವರು ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ಸಂದ ಪುರಸ್ಕಾರಗಳು ಅಪಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಬೇವಿನಕಟ್ಟಿಯವರು ಹೆಚ್ ಎಸ್ ವಿ ಯವರ ಕವನ ವಾಚನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್.ಆರ್. ಭಜಂತ್ರಿಯವರು ಸುಶ್ರಾವ್ಯವಾಗಿ ಭಾವಗೀತೆಗಳನ್ನು ಹಾಡುತ್ತಾ ಸಾಹಿತ್ಯ ವಿಮರ್ಶೆ ಮಾಡಿದರು.
ಎಮ್.ಎಮ್. ಅರಳಿಗಿಡದ ನಿರೂಪಿಸಿದರೆ.ಎಸ್ ಎಸ್ ನರೇಗಲ್ ರವರು ಸ್ವಾಗತಿಸಿದರು.ಶ್ರೀಯುತ ಬಿ.ವಿ.ಮುನವಳ್ಳಿ.ಶಂಕರ ಕಲ್ಲಿಗನೂರ.ಎ,ಜಿ ಬೂದಿಹಾಳ.ನೀಲಕಂಠ ಸವನೂರ.ಮಹಾಂತೇಶ ಅಂಗಡಿ.ದುರಗಪ್ಪ ಬಂಕದ.ಗಣೇಶ ಗಂಜಿ.ಶರಣಪ್ಪ ಬೇವಿನಕಟ್ಟಿ ಡಿ ಆರ್ ಮ್ಯಾಗೇರಿ ಉಪಸ್ಥಿತರಿದ್ದರು.
ವರದಿ:ಸುರೇಶ ಬಂಡಾರಿ.