
ಬಡವರ ಆರೋಗ್ಯ “ಸಂಜೀವಿನಿ” ಕ್ಲಿನಿಕ್ಕಿಗ 26 ರ ಸಂಭ್ರಮ.
ಡಾ. ಶಿವಯ್ಯ ಎ. ರೋಣದ
ನರೇಗಲ್:ಸತ್ಯಮಿಥ್ಯ (ಆ-14).
ಪಟ್ಟಣದ ಹಾಗೂ ಹೋಬಳಿಯ ಬಡ ಜನರ ಪಾಲಿಗೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಡಾ. ಶಿವಯ್ಯ ಎ. ರೋಣದ ಅವರ ʼಸಂಜೀವಿನಿ ಕ್ಲಿನಿಕ್ʼ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆ ಮತ್ತು ರಜಾ ದಿನಗಳಲ್ಲಿ ವೈದ್ಯಕೀಯ ಸೇವೆಗೆ ಲಭ್ಯವಿರುವ ಈ ಕ್ಲಿನಿಕ್ ಮೇಲೆ ಕೂಲಿ ಕಾರ್ಮಿಕರು, ಶ್ರಮಿಕರು, ಕೃಷಿಕರು, ಬಡವರು ಸೇರಿದಂತೆ ಇತರೇ ಎಲ್ಲಾ ವರ್ಗದ ಜನರು ಅವಲಂಬಿತರಾಗಿದ್ದಾರೆ.
ಕ್ಲಿನಿಕ್‌ಗೆ ಬರುವ ರೋಗಿಗಳನ್ನು ಪ್ರೀತಿಯಿಂದ ಕಾಣುವ ವೈದ್ಯ ಡಾ. ಶಿವಯ್ಯ ಎ. ರೋಣದ ಅವರು ರೋಗಿಗಳನ್ನು ಉಪಚರಿಸುವ ಜೊತೆಗೆ ಅವರನ್ನು ಗೌರವದಿಂದ ಕಾಣುತ್ತಾರೆ. ಪ್ರತಿಯೊಬ್ಬರಿಗೂ ಆತ್ಮಸ್ಥೈರ್ಯ ತುಂಬಿ, ಭಯಪಡದಂತೆ ಹಾಗೂ ಯಾವುದೇ ರೋಗವನ್ನು ನಿರ್ಲಕ್ಷಿಸದಂತೆ ಮಾಹಿತಿ ನೀಡುತ್ತಾರೆ. ನಂತರ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ ಗುಣಮುಖರಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ನರೇಗಲ್ ಪಟ್ಟಣದ ಜನತೆಗೆ ʼಶಿವು ಡಾಕ್ಟರ್ʼ ಎಂದೇ ಚಿರಪರಿಚಿತಾರಿದ್ದಾರೆ.
ಜನರಿಗೆ ವೈದ್ಯಕೀಯ ಸೇವೆ ನೀಡಬೇಕು ಎನ್ನುವ ಸದುದ್ದೇಶದೊಂದಿಗೆ ಹಾಗೂ ನೋವಿನಿಂದ ಬರುವ ಜನರಿಗೆ ಸಂಜೀವಿನಿ ಆಗಬೇಕು ಎನ್ನುವ ಉದ್ದೇಶದೊಂದಿಗೆ ಆರಂಭವಾದ ಕ್ಲಿನಿಕ್ ಸೇವೆ ಆಗಸ್ಟ್-15ಕ್ಕೆ ಯಶಸ್ವಿಯಾಗಿ 25 ವಸಂತಗಳನ್ನು ಪೂರೈಸಿ, 26ನೇ ವಸಂತಕ್ಕೆ ಕಾಲಿಡುತ್ತಿದೆ.
ಕೋವಿಡ್-19 ಸಂದರ್ಭದಲ್ಲೂ ವೈದ್ಯ ಡಾ. ಶಿವಯ್ಯ ಎ. ರೋಣದ ಅವರು ಜನರಿಗೆ ಜಾಗೃತಿ ಮೂಡಿಸಿದರು. ಕೋವಿಡ್‌ನ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಜನರು ಭಯಪಡದಂತೆ ಧೈರ್ಯ ತುಂಬಿದರು. ಅಂತಹ ಕಠಿಣ ಸಂದರ್ಭದಲ್ಲೂ ಜನರಿಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಿದರು. ಹೀಗೆ ಉಪಯುಕ್ತವಾದ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.
ಡಾ. ಶಿವಯ್ಯ ಎ. ರೋಣದ ಅವರು ನರೇಗಲ್ ಪಟ್ಟಣದಲ್ಲಿ ಕ್ಲಿನಿಕ್ ಸೇವೆ ಒದಗಿಸುವ ಜೊತೆಗೆ ರೋಣ ನಗರದ ರಾಜೀವಗಾಂಧಿ ಆರ್ಯುವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ದ್ರವ್ಯಗುಣ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕರಾಗಿಯೂ ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ.
ಅಲ್ಲಿನ ಸ್ನಾತಕೋತರ ಹಾಗೂ ಸ್ನಾತಕ ಹಂತದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಧಾರೆಯೆರೆಯುತ್ತಿದ್ದಾರೆ. ಒಂದೆಡೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಇನ್ನೊಂದೆಡೆ ಜನರಿಗೆ ವೈದ್ಯಕೀಯ ಸೇವೆ ಮಾಡುವ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದಾರೆ.
ಜನರು ತಮ್ಮ ಜೀವನಕ್ಕೆ ಬೇಕಾಗುವ ಏನೆಲ್ಲ ವಸ್ತುಗಳನ್ನು ಖರೀದಿ ಮಾಡಬಹುದು ಆದರೆ ಆರೋಗ್ಯವನ್ನು ಖರೀದಿಸುವುದು ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯಕ್ಕೆ ಮಹತ್ವ ನೀಡಬೇಕು. ಒತ್ತಡದ ಜೀವನದ ನಡುವೆ ಆರೋಗ್ಯಯುತ ಬದುಕಿಗೆ ಸಮಯ ನೀಡಬೇಕು ಎನ್ನುವುದು ಅವರ ಸಲಹೆಯಾಗಿದೆ. ರೋಗಗಿಳು ನಮ್ಮ ಬಳಿ ಅನಾರೋಗ್ಯದಿಂದ ಬಂದಾಗ ಆತ್ಮೀಯರಂತೆ ಸ್ಪಂದಿಸುತ್ತೇನೆ. ತಾಳ್ಮೆಯಿಂದ ಮಾತನಾಡಿಸಿ ಮಾನಸಿಕ ದೈರ್ಯವನ್ನು ನೀಡುವುದರ ಜೊತೆಗೆ ಸೂಕ್ತ ಚಿಕಿತ್ಸೆಗೆ ಮುಂದಾಗುತ್ತೇನೆ. ಅದೇ ಕಾಯಕವನ್ನು ಕೊನೆವೆರೆಗೂ ಮಾಡುತ್ತೇನೆ. ಜನರು ನಮ್ಮ ಮೇಲಿಟ್ಟಿರುವ ನಂಬಿಕೆ ಹಾಗೂ ಗೌರವನ್ನು ಕಾಪಾಡಿಕೊಳ್ಳುವೆ. ಯಾವತ್ತೂ ಈ ಭಾಗದ ಜನರಿಗೆ ವೈದ್ಯಕೀಯ ಸೇವೆಯನ್ನು ಮುಂದೊರೆಸುವೆ ಎಂದು ಸಂಜೀವಿನಿ ಕ್ಲಿನಿಕ್‌ನ ವೈದ್ಯರಾದ ಡಾ. ಶಿವಯ್ಯ ಎ. ರೋಣದ ಹೇಳಿದರು.
ವರದಿ : ಚನ್ನು. ಎಸ್.