ಬೆಳೆಗೆ ಔಷಧಿ ಸಿಂಪಡಣೆಗೆ ಡ್ರೋನ್ ಬಳಕೆ-ಕೃಷಿ ಜಮೀನಿನಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಕೊರತೆ.
ಗದಗ:ಸತ್ಯಮಿಥ್ಯ ( ಜುಲೈ -20)
ಕೃಷಿ ಜಮೀನಿನಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಕೊರತೆ ಆಗುತ್ತಿದೆ.ಇದನ್ನು ಸರಿದೂಗಿಸಲು ನಾನಾ ರೀತಿಯ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ. ಅದರಂತೆ ಬೆಳೆಗೆ ಔಷಧಿ ಸಿಂಪಡಣೆ ಮಾಡಲು ಡ್ರೋನ್ ಬಳಕೆ ಮಾಡುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಭೂಮಿಯನ್ನು ಹೆಚ್ಚು ಹೊಂದಿರುತ್ತಾರೆ. ಜಮೀನಿನಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಗ್ರಾಮೀಣ ಜನರು ನಗರ ಪ್ರದೇಶದತ್ತ ಮುಖ ಮಾಡುತ್ತಿದ್ದಾರೆ. ಇವೆಲ್ಲ ಸವಾಲುಗಳ ನಡುವೆ ರೈತರು ಹೊಸ ತಂತ್ರಜ್ಞಾನ ಬಳಕೆ ಮಾಡಿ ಕೃಷಿ ಚಟುವಟಿಕೆಗೆ ಮುಂದಾಗುತ್ತಿದ್ದಾರೆ.
ಡ್ರೋನ್ ಮೂಲಕ ಔಷಧಿ ಸಿಂಪಡಣೆಗೆ ಪ್ರತಿ ಎಕರೆಗೆ ರೂ 200/- ದಂತೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಧಾರವಾಡ ದಿ. ಕೆ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಇದರ ಉಪಾಧ್ಯಕ್ಷರು ಆದ ಶಿವಕುಮಾರಗೌಡ ಎಸ್ ಪಾಟೀಲ ರವರು ಮುಂಡರಗಿ ತಾಲೂಕಿನಲ್ಲಿ ಇಫ್ಕೋ ಸಂಸ್ಥೆ ವತಿಯಿಂದ 6 ಜನ ಪೈಲೆಟ್ ಗಳಿಗೆ ತರಬೇತಿ ಕೊಡಿಸಿ 6 ಡ್ರೋನ್ ಗಳನ್ನು ನೀಡಿರುತ್ತಾರೆ.
ಇಂದು ಕಲಕೇರಿ ಗ್ರಾಮದ ಶ್ರೀ ಶಿವಲಿಂಗಯ್ಯ ಗುರುವಿನ ಇವರ ಹೊಲದಲ್ಲಿ ಬೆಳೆದ ಮೆಕ್ಕೆ ಜೋಳಕ್ಕೆ ನ್ಯಾನೊ ಯೂರಿಯಾ ಮತ್ತು ನ್ಯಾನೋ ಡೀಎಪಿ ಹಾಗೂ ಸಾಗರಿಕಾ ಔಷಧಿಯನ್ನು ಡ್ರೋನ್ ಮೂಲಕ ಸಿಂಪಾದಿಸಲಾಯಿತು. ಮತ್ತು ರೈತರಿಗೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಹಾಗೂ ಸಾಗರೀಕ ಔಷಧಿಯ ಬಗ್ಗೆ ಮಾಹಿತಿ ನೀಡಲಾಯಿತು. ಡ್ರೋನ್ ಕಡಿಮೆ ಕೂಲಿ ಆಳುಗಳನ್ನು ಬಳಸಿ ಅತಿ ವೇಗವಾಗಿ ಔಷಧಿ ಸಿಂಪಡಣೆ ಮಾಡುತ್ತದೆ. ಅದಲ್ಲದೆ ಅತಿ ಮಳೆಯಾಗಿ ಜಮೀನಲ್ಲಿ ಮಳೆ ಆಗಿ ಹೋಗದೆ ಇರುವ ಸಂದರ್ಭದಲ್ಲಿ ಇದರ ಉಪಯೋಗ ಪಡೆಯಬಹುದಾಗಿದೆ. ಇದು ಬ್ಯಾಟರಿ ಚಾಲಿತ ಡ್ರೋನ್ ಇದು 11 ಲೀಟರ್ ಟ್ಯಾಂಕ್ ಸಾಮರ್ಥ್ಯ ಹೊಂದಿದೆ. ಇದು ಜಿಪಿಎಸ್ ಸಹಾಯದಿಂದ ಜಮೀನಲ್ಲಿ ಔಷಧಿ ಸಿಂಪಡಣೆ ಮಾಡುತ್ತದೆ. ಹಾಗೂ ವೈ ಪೈ ಮೂಲಕ ರಿಮೋಟ್ ಕಂಟ್ರೋಲ್ ಮಾಡಲಾಗುತ್ತದೆ.
ಹೈಮಾಸ್ಕ ವಿದ್ಯುತ್ ತಂತಿ ಇರುವ ಜಮೀನಲ್ಲಿ ಸಿಂಪಡಣೆ ಮಾಡಲಾಗುವುದಿಲ್ಲ.
ಡ್ರೋನ್ ಪೈಲೆಟ್ ಗಳ ಹೆಸರು
1) ಶ್ರೀ ಎಂ ಬಿ ಬಳಿಗೇರ್*
2) ಶ್ರೀ ಎಫ್ ಏಚ್ ಹರ್ಲಾಪೂರ
3) ಶ್ರೀ ದುರಗಪ್ಪ ಕೋಳಿ
4) ಶ್ರೀ ಬಸವರಾಜ ನುಚ್ಚಬ್ಲಿ
5) ಶ್ರೀ ಬಸವರಾಜ್ ಸಂಶಿ
6) ಶ್ರೀ ಶರಣಪ್ಪ ಉಳ್ಳಾಗಡ್ಡಿ
ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ ಎಂ.ಎಸ್ ನ ವ್ಯವಸ್ಥಾಪಕರು ಆದ ಸಿದ್ದಪ್ಪ ಮು ತಳಕಲ ಹಾಗೂ ಸಿಬ್ಬಂದಿ ಎಚ್ ಕೆ ಬೆಳಗಟ್ಟ ಹಾಗೂ ರಿಲಾಯನ್ಸ್ ಪೌಂಡೇಶನ್ ನ ಸಿಬ್ಬಂದಿಯಾದ ಈರಣ್ಣ ಬಳಿಗೇರ್ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.
ವರದಿ : ಮುತ್ತು.