ಯೋಗದಿಂದ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ.
ಸರ್ವರಿಗೂ ಆರೋಗ್ಯದ ಭಾಗ್ಯ ನೀಡುವ ಯೋಗ ನಮ್ಮ ಸನಾತನ ಧರ್ಮದ ಕೊಡುಗೆ.

ಮೂಡಲಗಿ : ಸತ್ಯ ಮಿಥ್ಯ ( ಜೂ -21)
ಮನುಕುಲಕ್ಕೆ ಯೋಗ ಎಂಬುದು ಪತಂಜಲಿ ಮಹರ್ಷಿಗಳಿಂದ ಬಳುವಳಿಯಾಗಿ ಬಂದಿದೆ ಇಡಿ ವಿಶ್ವವೇ ಭಾರತದಂತ ತಿರುಗಿ ನೋಡುತ್ತಿದೆ ಸರ್ವರಿಗೂ ಆರೋಗ್ಯದ ಭಾಗ್ಯ ನೀಡುವ ಯೋಗ ನಮ್ಮ ಸನಾತನ ಧರ್ಮದಿಂದ ಬಂದಿದ್ದು ಭಾರತ ಈಗ ವಿಶ್ವಕ್ಕೆ ಗುರುಸ್ಥಾನವಹಿಸಿಕೊಳ್ಳುತ್ತಿದೆ ಎಂದು ಶ್ರೀ ಕೃಷ್ಣ ಧ್ಯಾನ ಯೋಗ ಪೀಠದ ಸಂಸ್ಥಾಪಕ ದಯಾನಂದ ಸವದಿ ಹೇಳಿದರು,
ಶುಕ್ರವಾರ ಮೂಡಲಗಿ ತಹಶೀಲ್ದಾರ ಕಛೇರಿಯಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಯೋಗ ಶಿಬಿರ ನಡೆಸಿಕೊಟ್ಟು ಮತ್ತು ಯೋಗ ಉಪನ್ಯಾಸ ನೀಡಿ ಮಾತನಾಡಿದರು,
ವಿಶ್ವದ ಜನ ನಮ್ಮ ಯೋಗ ವಿಧ್ಯೆಗೆ ಮಾರುಹೋಗಿದ್ದಾರೆ ಮತು ಅನುಸರಿಸುತಿದ್ದಾರೆ ವಿಜ್ಞಾನವನ್ನು ಮೀರಿದ ಅಗಾದವಾದ ಶಕ್ತಿ ನಮ್ಮ ಯೋಗದಲ್ಲಿದೆ ಯೋಗದಿಂದ ಆರೋಗ್ಯ ಅಷ್ಟೆ ಅಲ್ಲಾ ಎಲ್ಲವನ್ನು ಗೆಲ್ಲುವ ಆತ್ಮಶಕ್ತಿ ಜಾಗೃತಗೊಳ್ಳುತ್ತದೆ ಎಂದರು,
ತಹಸೀಲ್ದಾರ ಮಹಾದೇವ ಸನ್ನಮೂರಿ ಸಸಿಗೆ ನೀರುರಿಸುವ ಮೂಲಕ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿ, ಎಲ್ಲರು ಮುಕ್ತವಾಗಿ ಯೋಗವನ್ನು ಮಾಡಬೇಕು ಇವತು ವಿಶ್ವದೆಲ್ಲಡೆ ಯೋಗ ದಿನಾಚರಣೆಯ ಆಚರಿಸಲಾಗುತಿದೆ ಆರೋಗ್ಯಕ್ಕೆ ಯೋಗ ವಂದೆ ದಿವ್ಯೌಷಧ ಆಯುಷ್ಯ ವೃದ್ದಿಯ ಜೊತೆಗೆ ಅಧ್ಯಾತ್ಮದ ಅರಿವು ಮೋಕ್ಷದ ಕಲ್ಪನೆಯು ಮೂಡಿ ಮಾನವನ ಬದುಕಿಗೆ ಪರಿಪೂರ್ಣ ಅರ್ಥ ನೀಡುತ್ತದೆ
ವರದಿ : ಶಿವಾನಂದ ಮುಧೋಳ್.