ತಾಲೂಕು

ಮುಖ್ಯಮಂತ್ರಿ ಸೇವಾ ಪದಕ ಪಡೆದ ಯಲಬುರ್ಗಾ ಠಾಣಾ ಸಿ ಪಿ ಐ ಮೌನೇಶ್ವರ ಮಾಲಿಪಾಟೀಲ್.

Share News

ಮುಖ್ಯಮಂತ್ರಿ ಸೇವಾ ಪದಕ ಪಡೆದ ಯಲಬುರ್ಗಾ ಠಾಣಾ ಸಿ ಪಿ ಐ ಮೌನೇಶ್ವರ ಮಾಲಿಪಾಟೀಲ್.

ಕೊಪ್ಪಳ (ಯಲಬುರ್ಗಾ) – ಸತ್ಯಮಿಥ್ಯ (ಆಗಸ್ಟ್ 19)

ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಯಲಬುರ್ಗಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಅವರಿಗೆ ಮುಖ್ಯಮಂತ್ರಿ ವಿಶಿಷ್ಟ ಸೇವಾ ಪದಕ ಲಭಿಸಿದೆ.

78ನೇ ಸ್ವಾತಂತ್ರ್ಯ ಸಂಭ್ರಮದ ನಿಮಿತ್ತ 2024 -25 ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಇಲ್ಲಿ ಯಲಬುರ್ಗಾ ಸರ್ಕಲ್ ಇನ್ಸಪೆಕ್ಟರ್ ಮೌನೇಶ್ವರ ಮಾಲಿಪಾಟೀಲ್ ಅವರು ಪಡೆದಿದ್ದಾರೆ.

ಮೂಲತಃ ರಾಯಚೂರ ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಲೂರ ಗ್ರಾಮದವರಾದ ಇವರು 2005 ರಲ್ಲಿ ಮೈಸೂರಿನಲ್ಲಿ ಪಿಎಸ್ಐ ತರಬೇತಿ ಪಡೆದು ಮೊದಲ ಬಾರಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಗೆ ಪೊಲೀಸ್ ಇನ್ಸಪೆಕ್ಟರ್ ಆಗಿ ನೇಮಕಗೊಂಡರು.‌

ನಂತರ 2016 ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಕೊಪ್ಪಳ ಇಲ್ಲಿಗೆ ಸರ್ಕಲ್ಇನ್ಸಪೆಕ್ಟರ್ ಆಗಿ ಮುಂಬಡ್ತಿ ಪಡೆದರು. 2023 ರ ಆಗಷ್ಟ ನಲ್ಲಿ ಯಲಬುರ್ಗಾ ಪೊಲೀಸ್ ಠಾಣೆಗೆ ಸಿಪಿಐ ಆಗಿ ನೇಮಕಗೊಂಡರು.

ಅಕ್ರಮ ಮದ್ಯಪಾನ, ಅಕ್ರಮ ಮರಳು, ಇಸ್ಪೀಟ್, ಜೂಜಾಟ ಹಲವಾರು ಕಳ್ಳತನ ಹಾಗೂ ಇತರ ಕ್ಲಿಷ್ಟಕರ ಪ್ರಕರಣಗಳನ್ನು ಬೇಧಿಸಿದ್ದಾರೆ.

ಇವರಿಗೆ ವಿಶೇಷ ಸೇವೆಗೆ ಹಾಗೂ ಸಾಧನೆಗೆ ಮುಖ್ಯಮಂತ್ರಿಗಳ ಸೇವಾ ಪದಕ ಲಭಿಸಿದ್ದಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕುಕನೂರು, ಯಲಬುರ್ಗಾ ಪೊಲೀಸ್ ಠಾಣೆಯ ಎಲ್ಲ ಅಧಿಕಾರಿಗಳು, ಹಲವಾರು ಜನಪ್ರತಿನಿಧಿಗಳು ಇವರಿಗೆ ಅಭಿನಂದನೆಗಳನ್ನು ತಿಳಿದ್ದಾರೆ.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!