
ನೋಡುಗರ ಮನಸಳೆಯುತ್ತಿರು ಅಂಬಾಭವಾನಿ (ತುಳಜಾ ಭವಾನಿ) ಮಹಾತ್ಮೆ.
ಗೊಂಬೆಗಳ ದೃಶ್ಯಾವಳಿ.
ಗದಗ : ಸತ್ಯಮಿಥ್ಯ (ಸೆ-04).
ಅವಳಿ ನಗರದ ಪ್ರಸಿದ್ಧ ಗಜಾನನ ಮಂಡಳಿಯಾದ ಶ್ರೀ ಸಾರ್ವಜನಿಕ ಗಜಾನನ ಮಂಡಳಿ ಪಾಲಾ ಬಾದಾಮಿ ರಸ್ತೆ ಮಲ್ಲಿಕಾರ್ಜುನ ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಸುವರ್ಣ ಗಣೇಶೋತ್ಸವದಲ್ಲಿ ಸಾರ್ವಜನಿಕರ ಮನೋರಂಜನೆಗಾಗಿ ಪೌರಾಣಿಕ ಭಕ್ತಿ ಪ್ರಧಾನವಾದ ಗೊಂಬೆಗಳ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದ್ದು ಈ ವರ್ಷದ ಗೊಂಬೆಗಳ ದೃಶ್ಯಾವಳಿಯಾದ (ತುಳಜಾ ಭವಾನಿ) ಅಂಬಾಭವಾನಿಯ ಮಹಿಮೆಯನ್ನು ತೋರಿಸುವ ದೃಶ್ಯಾವಳಿ ನೋಡುಗರ ಮನಸಳೆಯುವಂತೆ ಗೊಂಬೆಗಳ ದೃಶ್ಯಾವಳಿಗಳನ್ನು ಮಾಡಿದ್ದಾರೆ.
ಗೊಂಬೆಗಳ ದೃಶ್ಯಾವಳಿಗಳ ಬಗ್ಗೆ ವಿವರಣೆ : ಅನುಭೂತಿಯ ಪತಿಯೂ ಅಕಾಲಿಕ ಮರಣವನ್ನು ಹೊಂದಿದಾಗ ಪತಿಯ ಚಿತ್ತೆಯ ಮುಂದೆ ಅನುಭೂತಿಯು ನಾನಾ ಪರ್ಯಾಯವಾಗಿ ನಾನು ನಿಮ್ಮೊಡನೆ ಬರುತ್ತೇನೆಂದು ಹೇಳಿದಾಗ ದೇವಿಯು ಬಂದು ನೀನು ಈಗ ಗರ್ಭಿಣಿ ಒಂದು ಜೀವಕ್ಕೆ ಜೀವ ನೀಡುವ ತಾಯಿ ನೀನು ಅಂದಮೇಲೆ ಅದಕ್ಕಾದರೂ ನೀನು ಬದುಕಬೇಕು ಎಂದು ಹೇಳುತ್ತಾಳೆ ಆಗ ರಾಕ್ಷಸ ಕುಕುರನ್ನು ಬಂದು ಅವಳ ಸೌಂದರ್ಯವನ್ನು ನೋಡಿ ನಾನು ನಿನ್ನನ್ನು ಒರೆಸುತ್ತೇನೆ ನೀನು ನನ್ನೊಡನೆ ಬಂದರೆ ನನ್ನ ರಾಜ್ಯದ ರಾಣಿಯನ್ನಾಗಿ ಮಾಡುವೆ ಎಂದು ಹೇಳುತ್ತಾನೆ ಅನುಭೂತಿ ನಾನು ಈಗ ಗರ್ಭಿಣಿ ಎಂದರೂ ಕೇಳದೆ ರಾಕ್ಷಸ ಕುಕುರನ್ನು ಅನುಭೂತಿಯನ್ನು ಹಿಂಸೆಯನ್ನು ನೀಡುತ್ತಿರುವಾಗ ದೇವಿ ತುಳಜಾಭವಾನಿಯನ್ನು ನೆನೆದು ನನ್ನನ್ನು ರಕ್ಷಿಸು ಎಂದು ಕೇಳಿಕೊಳ್ಳುತ್ತಾಳೆ ಆಗ ತುಳಜಾ ಭವಾನಿ ಪ್ರತ್ಯಕ್ಷವಾಗಿ ರಾಕ್ಷಸ ಕುಕುರನಿಗೆ ಈ ರೀತಿ ಮಾಡುವುದು ಸರಿಯಲ್ಲ ಆದ್ದರಿಂದ ಹಿಂದೆ ಹೋಗು ಎಂದು ಹೇಳುತ್ತಾಳೆ ಅದನ್ನು ಕೇಳದೆ ರಾಕ್ಷಸ ಕುಕುರನ್ನು ತ್ರಿಶೂಲದಿಂದ ಕೊಲ್ಲುವ ದೃಶ್ಯವು ಅದ್ಭುತವಾಗಿ ಮಾಡಿದ್ದಾರೆ.
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯದಲ್ಲಿ ಅಶಾಂತಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆಯನ್ನು ಸದೆಬಡೆಯಲು ಚಿಂತೆಗೀಡಾದಾಗ ತಾಯಿ ಜೀಜಾಬಾಯಿ ಶಿವಾಜಿ ಮಹಾರಾಜರಿಗೆ ಅಂಬಾಭವಾನಿಯನ್ನು ನೆನೆದರೆ ನಿನ್ನ ಎಲ್ಲಾ ಕಷ್ಟಗಳನ್ನು ಕಳೆಯುತ್ತಾಳೆ ಎಂದು ಹೇಳಿದಾಗ ಶಿವಾಜಿ ಮಹಾರಾಜರು ದೇವಿ ಅಂಬಾಭವಾನಿಯನ್ನು ಭಕ್ತಿಯಿಂದ ನೆನೆದಾಗ ಅವನ ಭಕ್ತಿಗೆ ಒಲೆದು ದುಷ್ಟರನ್ನು ಸದೆಬಡೆಯಲು ಖಡ್ಗವನ್ನು ನೀಡುವಂತಹ ದೃಶ್ಯವು ಆಶ್ಚರ್ಯ ಅದ್ಭುತವಾಗಿ ಮೂಡಿ ಬಂದಿದ್ದು ಗೊಂಬೆಗಳ ದೃಶ್ಯಾವಳಿಗಳು ನೋಡುಗರ ಮನಸಳೆಯುವಂತೆ ಗೊಂಬೆಗಳ ದೃಶ್ಯಾವಳಿಯನ್ನು ಮಾಡುತ್ತಿದ್ದಾರೆ.
ಗೊಂಬೆಗಳಾ ದೃಶ್ಯಾವಳಿಯಲ್ಲಿ ಪ್ರಕಾಶ ಹನುಮಂತ ರಾಮು ಪ್ರಕಾಶ ಪ್ರವೀಣ್ ಕಿರಣ ಚಂದ್ರು ಅಮರ ಪ್ರೀತಮ ಅಕುಲ ಪ್ರವೀಣ್ ಮಹಾದೇವ, ಮಹಾಲಿಂಗ, ಮುತ್ತು ಈಶ್ವರ್ ಶಿವಾನಂದ ಮಂಜುನಾಥ ಸೇರಿದಂತೆ ಹಲವು ಯುವಕರು ಗೊಂಬೆಗಳ ದೃಶ್ಯಾವಳಿಗಳನ್ನು ಮಾಡುತ್ತಿದ್ದಾರೆ.
ಗೊಂಬೆಗಳ ದೃಶ್ಯಾವಳಿಯಲ್ಲಿ ಆಕರ್ಷಕವಾಗಿ ಲೈಟಿಂಗ್ ಅನ್ನು ರಾಜು,ಉಮೇಶ, ಅವರು ಮಾಡುತ್ತಿದ್ದಾರೆ. ಗೊಂಬೆಗಳ ದೃಶ್ಯಾವಳಿಗಳಿಗೆ ಗೊಂಬೆಗಳ ಚಾಲಕರ ಗುರುಗಳಾಗಿ ಈರಣ್ಣ ಗಂಜಿಯವರು ಮಾಡುತ್ತಿದ್ದಾರೆ.
ಗೊಂಬೆಗಳ ದೃಶ್ಯಾವಳಿಗಳನ್ನು ನೋಡುಗರ ಮನಸಳೆಯುವಂತೆ ಮಾಡಲು ಗಜಾನನ ಮಂಡಳಿಯ ಅಧ್ಯಕ್ಷರಾದ ಉದಯ ವರ್ಣೇಕರ ಹಾಗೂ ಪರಶುರಾಮ ಕಟ್ಟಿಮನಿಯವರು ಮಾಡಿದ್ದಾರೆ.
ಪ್ರತಿವರ್ಷವೂ ಗಣೇಶೋತ್ಸವದಲ್ಲಿ ಪೌರಾಣಿಕ ವಾದಂತಹ ಭಕ್ತಿ ಪ್ರಧಾನವಾದ ಗೊಂಬೆಗಳ ದೃಶ್ಯಾವಳಿಗಳಿಗೆ ಪ್ರಸಿದ್ಧವಾದ ಗಜಾನನ ಮಂಡಳಿಯಾಗಿದೆ
ವರದಿ: ಮುತ್ತು ಗೋಸಲ.