
ಬುಡಕಟ್ಟು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ದೀಪಾವಳಿ ಸಂಭ್ರಮ.

ಶ್ರೀ ಕೃಷ್ಣ ಪ್ರೇಮ ಫೌಂಡೇಶನ್ ಕಾರ್ಯ ಮೆಚ್ಚುಗೆ.
ಗಜೇಂದ್ರಗಡ/ಸತ್ಯಮಿಥ್ಯ (ಅ-24).
ನಗರದ ಶ್ರೀ ಕೃಷ್ಣ ಪ್ರೇಮ ಫೌಂಡೇಶನ್ ವತಿಯಿಂದ ಜೋಪಡಿಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಆಹಾರ ಕಿಟ್ಟ ವಿತರಿಸುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಆಹಾರ ಕಿಟ್ ವಿತರಿಸಿ ಮಾತನಾಡಿದ ಯುವ ಸಮಾಜಸೇವಕ ಕೇಶವ ರಾಯಬಾಗಿ.ಉಳ್ಳವರು ಬಡವರಿಗೆ ಸಹಾಯ ಸಹಕಾರ ನೀಡುವ ಮೂಲಕ ಬಡವರ ಬದುಕಿನ ಜ್ಯೋತಿ ಬೆಳಗಲು ನೆರವಾಗಬೇಕು. ಈ ನಿಟ್ಟಿನಲ್ಲಿ ಶ್ರೀ ಕೃಷ್ಣ ಪ್ರೇಮ ಪೌಂಡೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ನಾವೂ ನೀಡುವ ಸಹಾಯದಿಂದ ಬಡವರ ಮೊಗದಲ್ಲಿ ಮೂಡುವ ನಗುವಿನಲ್ಲಿ ಭಗವಂತನನ್ನು ಕಾಣುತ್ತೇವೆ ಎಂದರು.

ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ ಎನ್ನುವ ಘೋಷವಾಕ್ಯದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಬಗ್ಗೆ.ದೀಪಾವಳಿಯ ಹೊಸ್ತಿಲಲ್ಲಿ ಇಡಿ ಜಗತ್ತೆ ಪಟಾಕಿ,ಸಿಡಿಮದ್ದುಗಳನ್ನು ಸಿಡಿಸಿ ಸಂರ್ಭಮಾಚರಣೆ ಆಚರಿಸುತ್ತಿರುವ ಸಂಧರ್ಭದಲ್ಲಿ ಶ್ರೀ ಕೃಷ್ಣ ಪ್ರೇಮ ಫೌಂಡೇಶನ್ ದೀಪಾವಳಿಯ ಸಂಭ್ರಮವನ್ನು ಬಡ ಕುಟುಂಬಗಳೊಂದಿಗೆ ಆರ್ಥಗರ್ಭಿತವಾಗಿ ಆ ಬಡ ಕುಟುಂಬಗಳಿಗೆ ಆಹಾರದ ದಿನಸಿ ಕಿಟ್ಗಳನ್ನು ನಿಡುವ ಮೂಲಕ ಆಚರಿಸಿದ್ದು ಜನಮೆಚ್ಚುಗೆಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರು ಆದ ವಿರಾಟ ರಾಯಬಾಗಿ,ವೆಂಕಟೇಶ ರಾಯಬಾಗಿ,ವಿನಾಯಕ ಜಾಧವ, ಆನಂದ ಪವಾರ, ಜಗ್ಗು ರಾಜೋಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಸುರೇಶ ಬಂಡಾರಿ.




