
ಗಜೇಂದ್ರಗಡ : ನಾಳೆ ಒಳಮೀಸಲಾತಿ ವಿರೋಧಿಸಿ ಹೋರಾಟಕ್ಕೆ ಕರೆ.
ಗಜೇಂದ್ರಗಡ : ಸತ್ಯಮಿಥ್ಯ (ಆ-20).
ರಾಜ್ಯಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ವಿರೋಧಿಸಿ ತಾಲೂಕಿನ 63 ಸಮಾಜದವರಿಂದ ನಾಳೆ ಗಜೇಂದ್ರಗಡದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ.
ಗುರುವಾರ ಬೆಳಿಗ್ಗೆ 11 ಗಂಟೆಗೆ ನಗರದ ಹಿರೇದುರ್ಗಾದೇವಿ ದೇವಸ್ಥಾನದಿಂದ ಪುರಸಭೆ ಮಾರ್ಗವಾಗಿ ಮೈಸೂರುಮಠ ಬಸವೇಶ್ವರ ಸರ್ಕಲ್ ನಿಂದ ದುರ್ಗಾ ಸರ್ಕಲ್, ಅಂಬೇಡ್ಕರ್ ವೃತ್ತ ಕಾಲಕಾಲೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವದು ಎನ್ನುವ ವಿಚಾರವನ್ನು ತಹಸೀಲ್ದಾರ ಕಿರಣಕುಮಾರ ಕುಲಕರ್ಣಿಯವರಿಗೆ ಮನವಿ ಮೂಲಕ 63 ಸಮಾಜದ ಮುಖಂಡರು ತಿಳಿಸಿದ್ದಾರೆ.
ವರದಿ : ಚನ್ನು. ಎಸ್.