
ಬಿಜೆಪಿಯಿಂದ ಹರ್ ಗರ್ ತಿರಂಗ ಅಭಿಯಾನ.

ಗಜೇಂದ್ರಗಡ:ಸತ್ಯಮಿಥ್ಯ (ಆ-14).
ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ಯುವ ಮೋರ್ಚಾ ವತಿಯಿಂದ ನಗರದಲ್ಲಿಂದು ಹರ್ ಗರ್ ತಿರಂಗ ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವರಾದ ಕಳಕಪ್ಪ ಬಂಡಿ. ಅನೇಕ ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನಗಳ ಪ್ರತೀಕ ನಮಗೆ ಸ್ವಾತಂತ್ರ್ಯ ದೊರತಿದೆ. ಅಂದಿನ ಹೋರಾಟದ ಘಟನೆಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡುವುದು ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ್ ಮಲ್ಲಾಪುರ, ಪ್ರದಾನ ಕಾರ್ಯದರ್ಶಿಗಳಾದ ರಮೇಶ ವಕ್ಕರ್, ಬಾಲಾಜಿ ರಾವ್ ಭೋಸ್ಲೆ, ಮುಖಂಡರಾದ ಅಶೋಕ ನವಲಗುಂದ, ಅಶೋಕ ವನ್ನಾಲ, ಬುಡ್ಡಪ್ಪ ಮೂಲಿಮನಿ, ನಗರ ಘಟಕದ ಅಧ್ಯಕ್ಷರಾದ ರಾಜೇಂದ್ರ ಘೋರ್ಪಡೆ,ವೀರಪ್ಪ ಪಟ್ಟಣಶೆಟ್ಟಿ, ದಾನು ರಾಠೋಡ್, ಯುವ ಮೋರ್ಚಾ ಅಧ್ಯಕ್ಷ ಹುಲ್ಲಪ್ಪ ಕೆಂಗಾರ, ಶಂಕರ್ ಇಟಗಿ, ರಂಗನಾಥ ಮೇಟಿ, ಮಾಂತೇಶ ಪೂಜಾರ, ಸುಗುರೇಶ ಕಾಜಗಾರ, ಬದ್ರಿ ಜೋಶಿ, ಯು.ಆರ್. ಚನ್ನಮ್ಮನವರ, ದುರ್ಗಪ್ಪ ಕಟ್ಟಿಮನಿ, ಶಿವಕುಮಾರ ಜಾದವ, ಮುದಿಯಪ್ಪ ಮುಧೋಳ, ಭೀಮಪ್ಪ ಮಾದರ, ಸಲೀಂ ಕಲಾದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.