ಸುಗ್ನಳ್ಳಿ ಗ್ರಾಮದಲ್ಲಿ ಸೀಗೆ ಹುಣ್ಣಿಮೆಯ ನಿಮಿತ್ತ ಭೂಮಿ ತಾಯಿಗೆ ಪೂಜೆ ಸಲ್ಲಿಸುವುದರೊಂದಿಗೆ ಚರಗಾ ಚೆಲ್ಲಿ ಸಂಭ್ರಮ.
ಸುಗ್ನಳ್ಳಿ ಗ್ರಾಮದಲ್ಲಿ ಸೀಗೆ ಹುಣ್ಣಿಮೆಯ ನಿಮಿತ್ತ ಭೂಮಿ ತಾಯಿಗೆ ಪೂಜೆ ಸಲ್ಲಿಸುವುದರೊಂದಿಗೆ ಚರಗಾ ಚೆಲ್ಲಿ ಸಂಭ್ರಮ.
ಸುಗ್ನಳ್ಳಿ: ಸತ್ಯಮಿಥ್ಯ(ಅ -17).
ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಹಬ್ಬದ ನಿಮಿತ್ತ ಗ್ರಾಮದ ಎಲ್ಲ ರೈತರು ಸೇರಿದಂತೆ ಕುಟುಂಬ ಪರಿವಾರದೊಂದಿಗೆ ಹೊಲಗಳಿಗೆ ತೆರಳಿ ಭೂಮಿತಾಯಿಗೆ ವಿಶೇಷ ಪೂಜೆಯನ್ನು ಸಲ್ಲಿಸುವದರೊಂದಿಗೆ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಮಹಾನವಮಿ ನಂತರ ಬರುವ ಸೀಗೆ ಹುಣ್ಣಿಮೆಗೆ ಗ್ರಾಮದಲ್ಲಿ ಭೂತಾಯಿಯ ಹಬ್ಬ, ರೈತರ ಹಬ್ಬ, ಭೂತಾಯಿ ಸೀಮಂತ, ಭೂತಾಯಿ ಬಯಕೆ ಹಬ್ಬ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತಾರೆ
ಗ್ರಾಮದಲ್ಲಿ ರೈತರ ಮನೆಗಳಲ್ಲಿ ಮಹಿಳೆಯರು ಹಸುವಿನ ಸಗಣಿಯಿಂದ ನೆಲ್ಲಕ್ಕಿ ಹೊಯ್ದು, ಎತ್ತುಗಳನ್ನು ಮೈತೋಳೆದು, ಮಡಿನೀರು ತಂದು ನೈವೇದ್ಯ ಮಾಡಿ ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನವೇ ಭೂತಾಯಿಗೆ ಚರಗ ಚೆಲ್ಲಿದರು.
ಗ್ರಾಮದಲ್ಲಿ ಭೂತಾಯಿಗೆ ಸೀಮಂತ ಮಾಡುವಂತೆ ಪಂಚ ಕಲ್ಲುಗಳಿಗೆ ಸುಣ್ಣ ಬಳಿದು, ಕುಂಕುಮ, ಹೂವುಗಳಿಂದ ಸಿಂಗರಿಸಿ, ಪೂಜೆ ಮಾಡಿ, ನೈವೇದ್ಯ ಅರ್ಪಿಸಿ ಪಂಚ ಕಲ್ಲುಗಳು ಪಾಂಡವರನ್ನು ಪ್ರತಿನಿಧಿಸಿ ಮಹಿಳೆಯರಿಗೆ ಉಡಿ ತುಂಬಿ, ಉತ್ತಮ ಬೆಳೆಗಾಗಿ ಪ್ರಾರ್ಥಸಿದರು
ಭೂ ತಾಯಿಗೆ ನೈವೇದ್ಯದ ರೂಪದಲ್ಲಿ ಮಡಿಕೆಯಲ್ಲಿ ಒಂಬತ್ತು ಧಾನ್ಯಗಳನ್ನು ನೆನಸಿ, ಹಸಿ ಎಣ್ಣೆ ಮಿಶ್ರಣ ಮಾಡಿ, ವಿವಿಧ ಹಸಿ ತರಕಾರಿಗಳಿಂದ ಪಲ್ಯ ಹಾಗೂ ಸಜ್ಜಿಧಾನ್ಯದಿಂದ ಕಡುಬು ತಯಾರಿಸಲಾಗುತ್ತದೆ. ‘ಹೂಲಿಗೋ ಹೂಲಿಗೋ ಹೂಲಿಗೋ’ ಎನ್ನುತ್ತಾ ಜಮೀನಿನ ಎಲ್ಲ ದಿಕ್ಕುಗಳತ್ತ ಚರಗ ಚೆಲ್ಲುವುದು ವಿಶೇಷ.
ಚರಗದ ನಂತರ ಉಳಿದ ನೈವೇದ್ಯ ಭೂತಾಯಿ ಮಡಿಲಲ್ಲಿ ಅರ್ಪಿಸಿ, ಉತ್ತಮ ಫಸಲು ಬರಲಿ, ಕಿಟಕಿಗಳಿಂದ ರಕ್ಷಣೆ ಸಿಗಲಿ, ನಷ್ಟ ಸಂಭವಿಸದಿರಲಿ ಎಂದು ಪ್ರಾರ್ಥಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸೀಗೆ ಹುಣ್ಣಿಮೆಯ ನಿಮಿತ ಗ್ರಾಮದಲ್ಲಿ ಭೂಮಿತಾಯಿಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರೊಂದಿಗೆ ಭೂಮಿತಾಯಿಗೆ ಉಡಿಯನ್ನು ತುಂಬಿ ಭೂಮಿತಾಯಿಗೆ ಸೀಮಂತ ಕಾರ್ಯವನ್ನು ಮಾಡಿ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಿದೆವು.
ಗ್ರಾಮಸ್ಥ ಮಹಿಳೆಯಾದ: ಚೈತ್ರ ಗೋಸಲ್.
ವರದಿ: ಮುತ್ತು.