“ಕಡಲೂರ ಕಣ್ಮಣಿ” ತೆರೆಗೆ ಸಿದ್ದ.
ಸಿಟಿಯ ಹುಡುಗ ಮತ್ತು ಕಡಲ ತೀರದ ಹುಡುಗಿಯ ನಡುವಿನ ಪ್ರೇಮ ಕಥೆ .
“ಕಡಲೂರ ಕಣ್ಮಣಿ” ತೆರೆಗೆ ಸಿದ್ದ.
ಸಿಟಿಯ ಹುಡುಗ ಮತ್ತು ಕಡಲ ತೀರದ ಹುಡುಗಿಯ ನಡುವಿನ ಪ್ರೇಮ ಕಥೆ .
ಬೆಂಗಳೂರು : ಸತ್ಯ ಮಿಥ್ಯ ( ಜೂ -26).
ಯುವ ಮನಸುಗಳ ಪ್ರೀತಿ ಪ್ರೇಮ ಪ್ರಣಯ ಹೀಗೆ ಹತ್ತು ಹಲವು ಆಯಾಮಗಳನ್ನು ಒಳಗೊಂಡಿರುವ ” ಕಡಲೂರ ಕಣ್ಮಣಿ ” ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಸಿಟಿಯ ಹುಡುಗ ಕಡಲ ತೀರದ ಹುಡುಗಿಯ ನಡುವೆ ನಡೆಯುವ ಪ್ರೀತಿಯನ್ನು ಒಳಗೊಂಡ ಚಿತ್ರದ ಚಿತ್ರೀಕರಣ ಉಡುಪಿ, ಮಂಗಳೂರು, ಹೊನ್ನಾವರ, ಮಂಕಿ,ಮುರುಡೇಶ್ವರದಲ್ಲಿ ಬಹುತೇಕ ಚಿತ್ರೀಕರಣ ನಡೆದಿದ್ದು. ಸುತ್ತಮುತ್ತಲಿನ ಹಚ್ಚ ಹಸಿರಿನ ಪ್ರಕೃತಿಯೊಂದಿಗೆ ತುಂತುರು ಮಳೆ, ಚಿಲಿಪಿಲಿ ಗುಟ್ಟುವ ಪಕ್ಷಿಗಳ ಕಲರವ, ಅನೇಕ ರಮಣೀಯ ತಾಣಗಳಲ್ಲಿ ಕ್ಯಾಮರಾ ಕೆಲಸ ಮಾಡಿದೆ.
ಕಡಲೂರ ಕಣ್ಮಣಿ ಎಂದರೆ “ವಜ್ರ” ಎಂದರ್ಥ ಯುವ ಪ್ರೇಮಿಗಳ ಮನಸ್ಸಿನ ತುಮಲದ ಜೊತೆಗೆ ಮುಂದುವರೆಯುವ ಈ ಚಲನಚಿತ್ರದ ಕ್ಲೈಮಾಕ್ಸ್ ನೋಡಿದರೆ ಕಣ್ಣಲ್ಲಿ ನೀರು ಬಾರದೆ ಇರದು. ಪ್ರೇಕ್ಷಕರು ಕಥಾ ಹಂದಿರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗಬೇಕು.
ರಾಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಂಡ ಕಡಲೂರ ಕಣ್ಮಣಿಗೆ ಕೊಳಾ ಶೈಲೇಶ್ ಆರ್ ಪೂಜಾರ್ ನಿರ್ಮಾಪಕರಾಗಿದ್ದಾರೆ. ಬಸವರಾಜ ಗಚ್ಚಿ ಸಹ ನಿರ್ಮಾಪಕ ವಿನೋದ್ ರಾಮ್, ಹೊಳೆನರಸಿಪುರ, ಮತ್ತು ಮಹೇಶ್ ಕುಮಾರ್ ಎಂ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದೆ.
ಯುವ ಪ್ರತಿಭೆ ರಾಮ್ ಪ್ರಸಾದ್ ಹುಣಸೂರ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದು. ಹೀರೋ ಮತ್ತು ಹೀರೋಯಿನ್ ಕ್ರಮವಾಗಿ ಅರ್ಜುನ್ ನಗರ್ಕರ್ ಮತ್ತು ನಿಶಾ ಶಾಲಿನಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದ್ದು. ನಿತೀಶ್ ಕುಮಾರ್ ಸಂಕಲನ ಫೈಟ್ ಮಾಸ್ಟರ್ ಆಗಿ ಬಂಡೆ ಚಂದ್ರು ತುಂಬಾ ಚನ್ನಾಗಿ ಕೆಲಸ ಮಾಡಿದ್ದಾರೆ.
ಚಿತ್ರವನ್ನು ಡಿಎಸ್‌ಕೆ ಸಿನಿಮಾ ಸಂಸ್ಥೆಯ ಡಾ. ಸುನೀಲ ಕುಂಬಾರ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದ್ದಾರೆ.
ವರದಿ : ರವೀಶ್.