ಮೋದಿ 3.0 – ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ (NSA) ರಾಗಿ ಅಜಿತ್ ದೋವಲ್ ಮುಂದುವರಿಕೆ.
ಪ್ರಮುಖ ಖಾತೆ ಮತ್ತು ದಕ್ಷ ಹುದ್ದೆಗಳಿಗೆ ಆಪ್ತರ ನೇಮಕ - ಮೋದಿ ಮೈಲುಗೈ.
ದೆಹಲಿ – ಸತ್ಯ ಮಿಥ್ಯ ( ಜು -14).
ಭಾರತೀಯ ಜೇಮ್ಸ್ ಬಾಂಡ್ ಅಜಿತ್ ಡೋವಲ್.ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ( NSA) ಆಗಿ ಮೋದಿ 3.0 ದಲ್ಲಿ ಕಾರ್ಯ ಮುಂದುವರೆಸಿದ್ದಾರೆ.
ಎನ್ ಡಿ ಎ ಮೈತ್ರಿ ಕೂಟ ನರೇಂದ್ರ ಮೋದಿ ನೇತೃತ್ವದಲ್ಲಿ 3 ನೇ ಭಾರಿ ಸರ್ಕಾರ ರಚನೆ ಮಾಡಿದ ಮೇಲೆ ಸಾಕಷ್ಟು ಬದಲಾವಣೆಗಳಾಗುತ್ತವೆ ಎಂಬ ವಾತಾವರಣ ಸೃಷ್ಟಿಯಾಗಿತ್ತು ಆದರೆ ನರೇಂದ್ರ ಮೋದಿ ಪ್ರಮುಖ ಸಚಿವ ಸ್ಥಾನ ಮತ್ತು ದಕ್ಷ ಅಧಿಕಾರಿಗಳಿಗೆ ಸಮರ್ಥ ಹುದ್ದೆಗಳಲ್ಲಿ ಮುಂದುವರೆಸುವ ಮೂಲಕ ಮೈತ್ರಿಯಲ್ಲಿ ಮೇಲುಗೈ ಸಾಧಿಸಿ ವಿರೋಧಿಗಳಿಗೆ ಟಕ್ಕರ್ ನೀಡಿದ್ದಾರೆ.
ಅಲ್ಲದೇ ಪ್ರಧಾನ ಮಂತ್ರಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ಪಿ. ಕೆ. ಮಿಶ್ರಾರವರನ್ನು ಮುಂದುವರೆಸಲಾಗಿದೆ.
ಭಾರತ ಪ್ರಸ್ತುತ ಸಂದರ್ಭದಲ್ಲಿ ಎದುರಿಸುತ್ತಿರುವ ಭಯೋತ್ಪದನೆ ಮತ್ತು ಭದ್ರತಾ ಸವಾಲುಗಳಿಗೆ ಅಜಿತ್ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ.
ಜನತೆ ಅಜಿತ್ ದೋವಲ್ ಆಯ್ಕೆ ಕುರಿತು ಎಕ್ಷ ಖಾತೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಿತ್ರರಾಷ್ಟ್ರಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವ ಅಜಿತ್ ಯಾವುದೇ ರೀತಿಯ ಕಾರ್ಯಾಚರಣೆಗಳಿಗೆ ಪರಸ್ಪರ ಒಪ್ಪಂದಗಳನ್ನು ಸ್ಥಾಪಿಸುವದು ಕಷ್ಟ ಸಾಧ್ಯ ಆದರೆ ಅಜಿತ್ ತಮ್ಮ ಕಾರ್ಯದಲ್ಲಿ ಶ್ರದ್ದೆ ಮತ್ತು ನಿಖರತೆಯೊಂದಿಗೆ ಯಶಸ್ವಿಯಾಗಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖರಾಗಿದ್ದಾರೆ ಎನ್ನಲಾಗುತ್ತಿದೆ.
ವರದಿ : ಚನ್ನು. ಎಸ್.