
ನ್ಯೂಜಿಲ್ಯಾಂಡ್ ಕೈಚೆಲ್ಲಿದ ಕ್ಯಾಚ್ – ಭಾರತ ಮುಡಿಗೆ ಮ್ಯಾಚ್.
ಸತ್ಯಮಿಥ್ಯ ನ್ಯೂಸ್ – (ಮಾ-09)
ಭಾರತ ಮೂರನೇ ಭಾರಿ ICC ಟ್ರೋಫಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾದ ದಾಖಲೆಯನ್ನು ಮುರಿದಿದೆ. ಇಂದು ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ ನಡುವೆ ನಡೆದ ಪದ್ಯದಲ್ಲಿ. ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ ತಂಡ 251 ರನ್ ಗಳಿಸಿತು. ಗೆಲುವಿನ ಕಡೆ ನೋಟ ಬೀರಿದ ಭಾರತ ತಂಡಕ್ಕೆ ಮೊದಲ ವಿಕೆಟ್ ನೂರು ರನ್ ದಾಟಿ ಬಿತ್ತಾದರೂ. ಆ ನಂತರ ಬಂದ ವಿರಾಟ್ ಕೊಹ್ಲಿ ಬೇಗನೆ ಫೇವಲಿಯನ್ ತೆರಳುವ ಮೂಲಕ ಆತಂಕ ಮೂಡಿಸಿದ್ದರು. ಜಡೇಜಾ, ಕೆ. ಎಲ್. ರಾಹುಲ್ ಇನ್ನಿತರ ಉತ್ತಮ ಆಟದಿಂದ ಭಾರತ ಗೆಲುವಿನ ನಗೆ ಬೀರಿತು. ಈ ನಡುವೆ ನ್ಯೂಜಿಲ್ಯಾಂಡ ತಂಡದ ಆಟಗಾರರು ಅನೇಕ ಕ್ಯಾಚ್ ಗಳನ್ನು ಕೈ ಚೆಲ್ಲುವ ಮೂಲಕ ಭಾರತದ ಮಡಿಲಿಗೆ ಮ್ಯಾಚ್ ಹಾಕಿದ ಹಾಗಾಯ್ತು.
ಅಂತಿಮವಾಗಿ 49 ನೇ ಓವರ್ 254 ರನ್ ಪೇರಿಸುವ ಮೂಲಕ ಭಾರತ 4 ವಿಕೆಟ್ ಗಳೊಂದಿಗೆ ಗೆಲುವಿನ ನಗೆ ಬೀರಿದೆ.
ವರದಿ : ಚನ್ನು. ಎಸ್.