ಟ್ರೆಂಡಿಂಗ್ ಸುದ್ದಿಗಳು

ವೈಭವದಿಂದ ಜರುಗಿದ ನೀಲಕಂಠೇಶ್ವರ ಉತ್ಸವ.

Share News

ವೈಭವದಿಂದ ಜರುಗಿದ ನೀಲಕಂಠೇಶ್ವರ ಉತ್ಸವ.

ಪಂಚ ಸೂತ್ರಗಳನ್ನು ಅಳವಡಿಸಿಕೊಂಡು ಯಶಸ್ವಿ ಜೀವನ ನಡೆಸಿ : ಡಾ. ಸಿ.ವಿ.ಮಾಳಗಿ.

ಸಮಾಜದಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯುವದು ವಿದ್ಯಾರ್ಥಿಗಳಿಗೆ ಸಹಕಾರಿ – ಸಿದ್ದಣ್ಣ ಬಂಡಿ.

ಗಜೇಂದ್ರಗಡ:ಸತ್ಯಮಿಥ್ಯ(ಆ-12).

ಸಮಾಜ ಏಳಿಗೆಯಾಗಬೇಕಾದರೆ ಪಂಚಶೀಲಗಳ ಅವಶ್ಯಕತೆ ಇದೆ. ಮಕ್ಕಳನ್ನು ಚಿಕ್ಕಂದಿನಿಂದಲೇ ಸಂಸ್ಕಾರವಂತರನ್ನಾಗಿ ಬೆಳೆಸಿ, ಮಕ್ಕಳ ಪ್ರೌಢಾವಸ್ಥೆಯಲ್ಲಿ ಪಾಲಕರು ಅವರ ಸರಿ ತಪ್ಪುಗಳನ್ನು ಗೆಳೆಯನಂತೆ ತಿದ್ದಿ ತೀಡಿ ಮಾರ್ಗದರ್ಶನ ಮಾಡುವುದು ಅವಶ್ಯ. ಯೌವ್ವನಾವಸ್ಥೆಯಲ್ಲಿ ವೃತ್ತಿ ಮತ್ತು ಸಂಸಾರದ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಕಲಿಸುವದು ಸಮಾಜದ ಹಿರಿಯರ ಕರ್ತವ್ಯ. ನಂತರದಲ್ಲಿ ವೃತ್ತಿ,ಸಂಸಾರ ಜೊತೆ ಜೊತೆಗೆ ಸಮಾಜದ ಆಗುಹೋಗುಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಸೇವೆ ಮಾಡಲು ಅಣಿಯಾಗಿ.ನಂತರ ಬರುವ ವೃದ್ಧಾಪ್ಯದಲ್ಲಿ ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಮೂಲಕ ನಾವು ಜವಾಬ್ದಾರಿಯುತ ಹಿರಿತನವನ್ನು ಮೆರೆಯಬೇಕಾಗಿದೆ ಎಂದು ಡಾ. ಸಿ ವಿ ಮಾಳಗಿ ನುಡಿದರು.

ನಗರದಲ್ಲಿ ಸೋಮವಾರ ನಡೆದ 15ನೇ ನೀಲಕಂಠೇಶ್ವರ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಕಲಿಕೆಯಲ್ಲಿ ಪಾಲಕರು ಆಸಕ್ತಿ ಮೂಡಿಸಬೇಕು ಎಂದರು.

ವೀರಶೈವ ಸಮಾಜದ ಅಧ್ಯಕ್ಷರಾದ ಸಿದ್ದಣ್ಣ ಬಂಡಿ ಮಾತನಾಡಿ. ಹರಿದು ಹಂಚಿ ಹೋಗಿದ್ದ ಸಮಾಜವನ್ನು ಒಗ್ಗಟ್ಟಾಗಿಸಿದ ನಿಮ್ಮ ಹಿರಿಯರ ಶ್ರಮ ಸಾರ್ಥಕ. ಹಿರಿಯರ ಮಾರ್ಗದರ್ಶನದಿಂದ ಇಂದು 15 ನೇ ವರ್ಷದ ನೀಲಕಂಠೇಶ್ವರನ ಉತ್ಸವ ಮಾಡುತ್ತಿರುವದು ಮತ್ತು ನಿಮ್ಮ ಸಮಾಜದ ಒಗ್ಗಟ್ಟನ್ನು ನೋಡಿ ಬಹಳಷ್ಟು ಸಂತೋಷವಾಗುತ್ತದೆ. ಸಮಾಜದ ಉತ್ತಮರು ಸೇರಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ ಎಂದರು.

ಸಮಾಜ ಸೇವಕಿ ಲಕ್ಷ್ಮಿ ಗೌಡರ ಮಾತನಾಡಿ. ಮಹಿಳೆಯರು ಸಾವಲಂಬಿ ಜೀವನಕ್ಕಾಗಿ ತಮ್ಮಲ್ಲಿರುವ ಕೌಶಲ್ಯಗಳನ್ನು ಸಮಾಜದ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾ. ಮಹಿಳಾ ಮಂಡಳಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಉಪನ್ಯಾಸಕಿ ಸುಧಾ ಬನಿಕಲ್ ಮಾತನಾಡಿ.ವ್ಯಕ್ತಿಗಿಂತ ಸಮಾಜ ದೊಡ್ಡದು. ಸಮಾಜದ ಪ್ರಜ್ಞಾವಂತರು, ಸುಶೀಕ್ಷಿತರು ಸಮಾಜದ ಜನತೆಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದರು.

ನೇಕಾರ ಸೊಸೈಟಿಯ ಅಧ್ಯಕ್ಷ ಅಶೋಕ ವನ್ನಾಲ ಮಾತನಾಡಿ.ಇಂದಿನ ಯುವಕರಿಗೆ ಸಮಾಜದ ಹಿರಿಯರು ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಯುವಕರಲ್ಲಿ ಸಮಾಜ ಸೇವೆಗೆ ಅಣಿಗೊಳಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಶಿವಬಸಪ್ಪ ಡೊಳ್ಳಿನ.ಗಜೇಂದ್ರಗಡ ಕುರುಹಿನಶೆಟ್ಟಿ ಸಮಾಜ ನೀಲಕಂಠೇಶ್ವರ ಉತ್ಸವದ ಮೂಲಕ ಒಗ್ಗಟ್ಟಿನ ಶಕ್ತಿ ಪ್ರದರ್ಶನಕ್ಕೆ ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಸಮಾಜವನ್ನು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ ಹೊಂದಲಿದೆ ಎಂದರು

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಗುರುಶಾಂತಪ್ಪ ದಂಡಿ, ಸಿದ್ದಲಿಂಗಪ್ಪ ಕನಕೇರಿ, ಡಾ. ಸುನೀಲಕುಮಾರ ಸಂಗನಾಳ,ಡಾ. ಚೇತನ್ ಕುಮಾರ ಶಿರೋಳ, ಮೋಹನ ಸಾಗರ್, ವೀರೇಶ ಬಾಗೋಡಿ, ನಿಂಗಪ್ಪ ಸಮಗಂಡಿ ಜಗದೀಶ ಕವಡಿಮಟ್ಟಿ, ದೇವೇಂದ್ರಪ್ಪ ಬನಿಕಲ್, ಮುದುಕಪ್ಪ ಬುಟ್ಟಾ, ರುದ್ರಪ್ಪ ಸೂಡಿ,ಮೋಹನ್ ಕನಕೇರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಹಿರಿಯ ನೇಕಾರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಾಸ್ತಾವಿಕವಾಗಿ ಅರವಿಂದ ಕವಡಿಮಟ್ಟಿ, ಸ್ವಾಗತ ಚನ್ನು ಸಮಗಂಡಿ, ಕಾರ್ಯಕ್ರಮ ನಿರೂಪಣೆ ಮಾರುತಿ ಬುಟ್ಟಾ ಮತ್ತು ಪ್ರಶಾಂತ ನೆಲ್ಲೂರ್ ನೆರವೇರಿಸಿದರು.

ವರದಿ : ಸುರೇಶ್ ಭಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!