
ಜಗದಂಬಾ ಕೋ-ಆಫ್ ಕ್ರೆಡಿಟ್ ಸೊಸಾಯಿಟಿಗೆ – 50 ರ ಸಂಭ್ರಮ.
ಗಜೇಂದ್ರಗಡ : ಸತ್ಯಮಿಥ್ಯ (ಡಿ-28).
ನಗರದ ಜಗದಂಬಾ ಕೋ-ಆಫ್ ಕ್ರೆಡಿಟ್ ಸೊಸೈಟಿ ನಾಳೆ ರವಿವಾರ ಡಿಸೇಂಬರ್ 29 ರಂದು 50ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ಈ ಕುರಿತು ಜಗದಂಬಾ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ ಅಧ್ಯಕ್ಷರಾದ ವಿಶ್ವನಾಥಸಾ ಮೇಘರಾಜ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ. 1974 ರಲ್ಲಿ ದಿ. ವೆಂಕೂಸಾ ತುಳಜಣಸಾ ಭಾಂಡಗೆಯವರು ನಮ್ಮ ಬ್ಯಾಂಕನ್ನು ಸ್ಥಾಪಿಸಿದರು. 50 ವರ್ಷಗಳ ಹಿಂದೆ 24125 ರೂಪಾಯಿ ಷೇರು ಬಂಡವಾಳದಲ್ಲಿ ಬ್ಯಾಂಕಿನ ವ್ಯವಹಾರ ಪ್ರಾರಂಭಿಸಿ ಇಂದಿಗೆ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿರುವುದು ಹೆಮ್ಮೆಯ ವಿಷಯ.ಈ ಬ್ಯಾಂಕನಲ್ಲಿ ಅನೇಕ ಮಹನೀಯರು ಆಡಳಿತ ನಡೆಸಿದ್ದಾರೆ. ಅವರೆಲ್ಲರ ತಾಳ್ಮೆ, ಜಾಣತನ ಹಾಗೂ ಗ್ರಹಕರೊಂದಿಗಿನ ಅವಿನಾಭಾವ ಸಂಬಂಧ ಇಂದು ಬ್ಯಾಂಕಿನ 50ನೇ ವರ್ಷದ ಸಂಭ್ರಮಾಚರಣೆಗೆ ನಾವೆಲ್ಲ ಸಾಕ್ಷಿಕರಿಸುತ್ತಿದ್ದೇವೆ. ನಾಳೆಯ ಕಾರ್ಯಕ್ರಮಕ್ಕೆ ಸಹೃದಯಿಗಳೆಲ್ಲರೂ ಬಂದು ಸಂಭ್ರಮಾಚರಣೆಯಲ್ಲಿ ಭಾವಹಿಸಲು ಕೋರಿಕೊಂಡರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಪ.ಪೂ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸಿಕೊಳ್ಳಲಿದ್ದಾರೆ. ವಿಶ್ವನಾಥಸಾ ಮೇಘರಾಜರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ರೋಣ ಮತಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲ್ ನೆರವೇರಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಮಾಜಿ ಸಚಿವರಾದ ಕಳಕಪ್ಪ ಬಂಡಿ, ದಿ.ಲಕ್ಷ್ಮಿ ಅರ್ಬನ್ ಕೋ-ಆಫ್ ಬ್ಯಾಂಕಿನ ಅಧ್ಯಕ್ಷರಾದ ಸುಹಾಸಕುಮಾರ ಪಟ್ಟೇದ, ಎಸ್ ಎಸ್ ಕಬಾಡೆ,ಅರವಿಂದ ನಾಗಜ್ಜನವರ, ವಿಠ್ಠಲ ಲದ್ವಾ. ಅತಿಥಿಗಳಾಗಿ ಶ್ರೀಮತಿ ಪುಷ್ಪಾ ಕಡಿವಾಳ, ಪ್ರಶಾಂತ ಮುಧೋಳ, ಕುಬೇಂದ್ರಸಾ ಭಾಂಡಗೆ, ಎನ್. ಆರ್. ಭಾಂಡಗೆ, ಶ್ರೀಧರ ಬಾಕಳೆ ಸೇರಿದಂತೆ ಬ್ಯಾಂಕಿನ ನಿರ್ದೇಶಕರೆಲ್ಲರೂ ಭಾಗವಹಿಸಲಿದ್ದಾರೆ.
ಇದೆ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಮಂಡಳಿ ನಿರ್ದೇಶಕರಾದ ಸುರೇಂದ್ರಸಾ ರಾಯಬಾಗಿ . ಜಗದಂಬಾ ಬ್ಯಾಂಕ್ ಮಧ್ಯಮ ವರ್ಗದ ಜನರ ಆಶಾಕಿರಣವಾಗಿದೆ. ಅನೇಕ ಸಣ್ಣ ಪುಟ್ಟ ಉದ್ಯಮಿಗಳಿಗೆ ಆಸರೆಯಾಗಿ ಸಾವಿರಾರು ಜನ ತಮ್ಮ ಬದುಕನ್ನು ನಮ್ಮ ಬ್ಯಾಂಕಿನ ಸಹಕಾರದಿಂದ ರೂಪಿಸಿಕೊಳ್ಳುತ್ತಿದ್ದಾರೆ .ಬ್ಯಾಂಕ ಕೆಲವು ಭಾರಿ ಸಂಧಿಗ್ದ ಪರಿಸ್ಥಿತಿಯನ್ನು ಅನುಭವಿಸಿದರು ಅದಕ್ಕೆ ಆಸ್ಪದ ನೀಡದೆ ಆಡಳಿತ ಮಂಡಳಿ ನಿರ್ದೇಶಕರೆಲ್ಲರು ಸೇರಿ ಬ್ಯಾಂಕನ್ನು ಸುಭದ್ರ ಪಡಿಸಲು ಶ್ರಮವಹಿಸಿದ್ದಾರೆ. ನಾಳೆಯ 50ನೇ ಸಂಭ್ರಮಾಚರಣೆಗೆ ಬ್ಯಾಂಕಿನ ಸರ್ವಸದಸ್ಯರು, ಹಿತೈಷಿಗಳು ಆಗಮಿಸಿ ಸಹಕರಿಸಲು ಕೋರಿಕೊಂಡರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೆ.ವ್ಹಿ. ಭಾಂಡಗೆ,ಎಮ್. ಎ. ನಾವಡೆ, ಜಿ. ಎಸ್. ಪವಾರ, ಎಸ್. ಸಿ. ಚೆನ್ನಿ, ಶ್ರೀಮತಿ ಆರ್.ಎ.ಭಾಂಡಗೆ, ಶ್ರೀಮತಿ ವ್ಹಿ.ಎಸ್.ರಾಯಬಾಗಿ, ಬ್ಯಾಂಕಿನ ಮುಖ್ಯನಿರ್ವಾಹಕರಾದ ಬಿ.ಎ.ಶಿಂಗ್ರಿ, ಸೇರಿದಂತೆ ಎಲ್ಲ ಸಿಬ್ಬಂದಿವರ್ಗದವರು ಹಾಜರಿದ್ದರು.
ವರದಿ : ಚನ್ನು. ಎಸ್.