ಬಾಲಕರ ಹಾಸ್ಟೆಲ್ ಪ್ರಾರಂಭಿಸಲು ಎಸ್ಎಫ್ಐ ಒತ್ತಾಯ – ಬೇಡಿಕೆ ಈಡೇರಿಸುವ ಭರವಸೆ ನೀಡಿದ ಶಾಸಕ ಜಿ. ಎಸ್. ಪಾಟೀಲ್
ಇದೇ ವರ್ಷ ಬಾಲಕರ ಹಾಸ್ಟೆಲ್ ಪ್ರಾರಂಭಿಸಲು ಎಸ್ ಎಫ್ ಐ ಒತ್ತಾಯ.

ಬಾಲಕರ ಹಾಸ್ಟೆಲ್ ಪ್ರಾರಂಭಿಸಲು ಎಸ್ಎಫ್ಐ ಒತ್ತಾಯ – ಬೇಡಿಕೆ ಈಡೇರಿಸುವ ಭರವಸೆ ನೀಡಿದ ಶಾಸಕ ಜಿ. ಎಸ್. ಪಾಟೀಲ್
ಇದೇ ವರ್ಷ ಬಾಲಕರ ಹಾಸ್ಟೆಲ್ ಪ್ರಾರಂಭಿಸಲು ಎಸ್ ಎಫ್ ಐ ಒತ್ತಾಯ.
ಗಜೇಂದ್ರಗಡ:ಸತ್ಯಮಿಥ್ಯ (ಜೂಲೈ -10)
ನಗರದ ಬಿಎಸ್ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಶಾಸಕರಾದ ಜಿ ಎಸ್ ಪಾಟೀಲ್ ಅವರಿಗೆ ಎಸ್ ಎಫ್ ಐ ನಿಯೋಗ ಮನವಿ ಸಲ್ಲಿಸಿತು.
ಗಜೇಂದ್ರಗಡ ನಗರವು ಶೈಕ್ಷಣಿಕವಾಗಿ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿಯ ತನಕ ಇಲ್ಲಿ ಒಂದು ಕೂಡಾ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಇಲ್ಲ ಎಂಬುದು ಖೇದಕರವಾದ ಸಂಗತಿ ಹಾಗಾಗಿ ಮಾನ್ಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಇದೇ ವರ್ಷ ಹಾಸ್ಟೆಲ್ ತರಬೇಕು ಎಂದು ಒತ್ತಾಯಿಸಿ ಶಾಸಕ ಜಿ, ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.
ಅದರ ಜೊತೆಗೆ ಡಿಗ್ರಿ ಕಾಲೇಜಿನಲ್ಲಿ ಖಾಲಿ ಇರುವ ಅಧ್ಯಾಪಕರ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿ ಮತ್ತು ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಬಿಸಿ. ಪ್ರಯೋಗಾಲಯಗಳಿಗೆ ಅನುದಾನ ನೀಡಿ, ಶಾಸಕರ ಅನುದಾನದಲ್ಲಿ ಕಾಲೇಜಿನ ಅಭಿವೃದ್ಧಿಗೆ ಹೆಚ್ಚು ಹಣ ನೀಡಿ ಹೀಗೆ ಹತ್ತು ಹಲವಾರು ಬೇಡಿಕೆಗಳ ಪಟ್ಟಿಯನ್ನು ಮಾನ್ಯ ಶಾಸಕರಿಗೆ ಮತ್ತು ಶಾಸಕರ ಮೂಲಕ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಮಾನ್ಯ ಶಾಸಕರು ಹಾಸ್ಟೆಲ್ ವಿಚಾರವಾಗಿ ಈಗಾಗಲೇ ಮಾನ್ಯ ಮುಖ್ಯಮಂತ್ರಿ ಮತ್ತು ಸಚಿವರಿಗೆ ಪ್ರಸ್ತಾವನೆ ಕಳುಹಿಸಿದ್ದೇನೆ ಈ ವರ್ಷ ಅಲ್ಲದಿದ್ದರೆ ಮುಂದಿನ ವರ್ಷ ಹಾಸ್ಟೆಲ್ ತರುತ್ತೇವೆ ಮತ್ತು ಶಾಸಕರ ಅನುದಾನದಲ್ಲಿ ಸುಮಾರು 25 ಲಕ್ಷ ಹಣವನ್ನು ಕಾಲೇಜಿನ ಅಭಿವೃದ್ಧಿಗೆ ನೀಡುತ್ತೇನೆ ಎಂದರು.
ಶಾಸಕರು ಮುಂದಿನ ವರ್ಷ ಹಾಸ್ಟೆಲ್ ತರುವ ಬದಲಾಗಿ ಇದೇ ವರ್ಷ ಹಾಸ್ಟೆಲ್ ಪ್ರಾರಂಭಕ್ಕೆ ಪ್ರಯತ್ನಿಸಬೇಕೆಂದು ಎಸ್ ಎಫ್ ಐ ಮುಖಂಡರು ಶಾಸಕರನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ರಾಜ್ಯ ಪದಾಧಿಕಾರಿಗಳಾದ ಗಣೇಶ ರಾಠೋಡ್, ಎಸ್ ಎಫ್ ಐ ಜಿಲ್ಲಾ ಮುಖಂಡರಾದ ಚಂದ್ರು ರಾಠೋಡ್, ವಿದ್ಯಾರ್ಥಿಗಳಾದ ಅನೀಲ್, ಬಸವರಾಜ, ಸುನೀಲ್ ಡಿಗ್ರಿ ಕಾಲೇಜು ವಿದ್ಯಾರ್ಥಿಗಳು ಮತ್ತು ಇತರರು ಹಾಜರಿದ್ದರು.
ವರದಿ : ಸುರೇಶ ಬಂಡಾರಿ.