
ನಾಡ ಕಛೇರಿಯಲ್ಲಿ ಎಜೆಂಟರ ಹಾವಳಿ ತಡೆಗೆ ಕರವೇ ಒತ್ತಾಯ
ಖಾಸಗಿ ಸಿಬ್ಬಂದಿಯಿಂದ ಹಣ ವಸೂಲಿ
ಮೂಡಲಗಿ :ಸತ್ಯ ಮಿಥ್ಯ ( ಜೂ – 25)
ಅರಭಾಂವಿಯ ನಾಡ ಕಛೇರಿಗೆ ಬರುವ ಸಾರ್ವಜನಿಕರಿಗೆ ಎಜೆಂಟರಿಂದ ನಿತ್ಯ ಕಿರುಕುಳವಾಗುತ್ತಿದ್ದು ಹಣ ನೀಡಿದರೆ ಶೀಘ್ರವಾಗಿ ಕೆಲಸ. ಹಣವಿಲ್ಲದಿದ್ದರೆ ಯಾವ ಕೆಲಸಗಳು ಆಗುವದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ತಹಸೀಲ್ದಾರವರು ಪರಿಶೀಲಿಸಿ ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕು ಇರದಲ್ಲಿ ಶಾಮಿಲಾಗಿರುವ ಖಾಸಗಿ ಸಿಬ್ಬಂದಿ ವರ್ಗವನ್ನು ತೆಗೆದು ಹಾಕಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಿದ್ದು ಕಂಕನವಾಡಿ ಆಗ್ರಹಿಸಿದರು,
ಮಂಗಳವಾರ ಮೂಡಲಗಿ ತಾಲೂಕಾ ದಂಡಾಧಿಕಾರಿಗಳ ಕಛೇರಿಯಲ್ಲಿ ಕರುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜಿನ ಮರಕುಂಬಿ ನೇತೃತ್ವದಲ್ಲಿ ತಹಶೀಲ್ದಾರ ಮಹಾದೇವ ಸನಮೂರಿ ಅವರಿಗೆ ಮನವಿ ನೀಡಿ ಮಾತನಾಡಿದರು,
ರಾಜ್ಯ ಕಾರ್ಯದರ್ಶಿ ಮಂಜುನಾಥ ಜಲ್ಲಿ ಮನವಿ ಓದಿ ಈ ಕುರಿತು ತಹಶೀಲ್ದಾರ ಅವರು ಎಜೆಂಟರ ಮೇಲೆ ಹಾಗೂ ಖಾಸಗಿ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು,
ಏಜೆಂಟರೂ ಹಾಗೂ ಖಾಸಗಿ ಸಿಬ್ಬಂದಿಗಳು ಹಣದ ಹೊಂದಾಣಿಕೆ ಮಾಡಿಕೊಂಡು ಬೃಹತ್ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಾರ್ವಜನಿಕರಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದು, ಖಾಸಗಿ ಸಿಬ್ಬಂದಿಗಳು ಕಛೇರಿಯ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಅಸಭ್ಯವಾಗಿ ಮಾತನಾಡುತ್ತಾರೆ, ಏಜೆಂಟರಗಳು ಕಛೇರಿಯಲ್ಲಿ ಕಾಲ ಕಳೆಯುತ್ತಾರೆ ಇದಕ್ಕೆ ಕಡಿವಾಣ ಹಾಕಬೇಕು,ಇಲ್ಲದಿದ್ದರೆ ಕರುನಾಡ ರಕ್ಷಣಾ ವೇದಿಕೆಯಿಂದ ಬೃಹತ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ,
ಈ ಸಮಯದಲ್ಲಿ ಗೋಪಾಲ ಗೋಪಾಳಿ, ಲಕ್ಷ್ಮಣ ಪೂಜೇರಿ, ಬಸು ಮಲ್ಹಾರಿ, ವಿಠಲ ಪೂಜೇರಿ, ಆನಂದ ಕೋಳಿ, ಮುತ್ತಪ್ಪ ಪೂಜೇರಿ, ಹಣಮಂತ ಕಳ್ಯಾಗೋಳ, ಹಾಲಪ್ಪ ಪೂಜೇರಿ, ಲಕ್ಕಪ್ಪ ಪೂಜೇರಿ, ಬಸವರಾಜ ಪೂಜೇರಿ ಇದ್ದರೂ,
ವರದಿ : ಶಿವಾನಂದ ಮುಧೋಳ್.