ಸರ್ಕಾರಿ ಕಚೇರಿಯಲ್ಲಿಯೇ ನೇಣು ಹಾಕಿಕೊಳ್ಳಲು ಹೋದ ರೈತ – ಪರಿಹಾರ ಒದಗಿಸುವ ಭರವಸೆ.
ಬೆಳೆ ಪರಿಹಾರ ಸಿಗದ ಹಿನ್ನೆಲೆ ರೈತನೊಬ್ಬ ಇಲಾಖೆಯ ಕೊಠಡಿಯಲ್ಲೇ ನೇಣು ಬಿಗಿದುಕೊಳ್ಳಲು ಪ್ರಯತ್ನ.
ಸರ್ಕಾರಿ ಕಚೇರಿಯಲ್ಲಿಯೇ ನೇಣು ಹಾಕಿಕೊಳ್ಳಲು ಹೋದ ರೈತ – ಪರಿಹಾರ ಒದಗಿಸುವ ಭರವಸೆ.
ಬೆಳೆ ಪರಿಹಾರ ಸಿಗದ ಹಿನ್ನೆಲೆ ರೈತನೊಬ್ಬ ಇಲಾಖೆಯ ಕೊಠಡಿಯಲ್ಲೇ ನೇಣು ಬಿಗಿದುಕೊಳ್ಳಲು ಪ್ರಯತ್ನ.
ಗದಗ :ಸತ್ಯ ಮಿಥ್ಯ (ಜೂ -27).
ಬೆಳೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತನೊಬ್ಬ ಇಲಾಖೆಯ ಕೊಠಡಿಯಲ್ಲೇ ನೇಣು ಬಿಗಿದುಕೊಳ್ಳಲು ಮುಂದಾಗಿರುವ ಘಟನೆ ನಿನ್ನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿಯ ನೀರಾವರಿ ಇಲಾಖೆಯ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ರೈತ ಶಿವು ಕಚೇರಿಯಲ್ಲಿನ ಫ್ಯಾನ್ ಗೆ ನೇಣು ಬಿಗಿದುಕೊಳ್ಳಲು ಪ್ರಯತ್ನಿಸಿದ್ದಾನೆ.ತನಗೆ ಬೆಳೆ ಪರಿಹಾರ ಕೊಡದಿದ್ದಲ್ಲಿ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಿವು ಅಧಿಕಾರಿಗಳಿಗೆ ಎಚ್ಚರಿಸಿದ್ದಾನೆ.
ಈ ವೇಳೆ ಕಚೇರಿಯ ಸಿಬ್ಬಂದಿ ಆತನನ್ನು ರಕ್ಷಣೆ ಮಾಡಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ಸಂತೈಸಿದ್ದಾರೆ.
ಬೆಳೆ ಪರಿಹಾರ ಪಡೆಯಲು ಹಲವು ದಿನಗಳಿಂದ ರೈತ ಶಿವು ಕಚೇರಿಗೆ ಅಲೆದಾಡುತ್ತಿದ್ದ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತು ಇಂದು ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ.
ದೇಶದ ಬೆನ್ನೆಲುಬು ರೈತ ಎಂದು ಕೇವಲ ಭಾಷಣಗಳಲ್ಲಿ ಬೊಗಳೆ ಬಿಡುವ ರಾಜಕಾರಣಿಗಳಿಗೆ ರೈತ ಎನ್ನುವ ಪದ ಕೇವಲ ಚುನಾವಣೆ ಸರಕು. ಗೆದ್ದ ಮೇಲೆ ಅವನ ಬಗ್ಗೆ ಕಾಳಜಿ ವಹಿಸದಿರುವುದು ಯಾವ ಪಕ್ಷದ ರಾಜಕಾರಣಿಗಳಿಗೂ ಹೊರತ್ತಾಗಿಲ್ಲ ಎಂಬ ವಿಚಾರ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ವರದಿ : ಮುತ್ತು.