ಗಜೇಂದ್ರಗಡ : ಸಂಚಾರ ಸುರಕ್ಷತೆ – ಬೈಕ್ ಸಿಜ್ ಮಾಡಿ ದಂಡ ಹಾಕಿದ ಪೊಲೀಸ್.
ಇಂದು ಅಮಾವಾಸ್ಯೆಯಾಗಿದ್ದರಿಂದ ದೇವಸ್ಥಾನಕ್ಕೆ ತೆರಳುತ್ತಿದ್ದ ಸಾರ್ವಜನಿಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಪೊಲೀಸ್.
ಗಜೇಂದ್ರಗಡ : ಸಂಚಾರ ಸುರಕ್ಷತೆ – ಬೈಕ್ ಸಿಜ್ ಮಾಡಿ ದಂಡ ಹಾಕಿದ ಪೊಲೀಸ್.
ಗಜೇಂದ್ರಗಡ : ಸತ್ಯಮಿಥ್ಯ ( ಜೂಲೈ -05).
ಇತ್ತೀಚಿಗೆ ಬೈಕ್ ಸವಾರರು ಬೇಕಾ ಬಿಟ್ಟಿ ಸಂಚಾರಮಾಡುವದು ಹೆಚ್ಚಾಗಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಆ ಕಾರಣಕ್ಕೆ ನಗರದ ಕಾಲಕಾಲೇಶ್ವರ ರಸ್ತೆ, ಕುಷ್ಟಗಿ ರಸ್ತೆ ಮತ್ತು ಗದಗ ರಸ್ತೆ ಸೇರಿದಂತೆ ಸಂಚರಿಸುವ ವಾಹನಗಳನ್ನು ತಡೆದು ದಾಖಲಾತಿ ಪರಿಶೀಲಿಸಿ ಸರಿಯಾದ ದಾಖಲೆ ಇಲ್ಲದ ಅನೇಕ ವಾಹನಗಳನ್ನು ದಂಡ ಹಾಕಿ ಸಿಜ್ ಮಾಡಲಾಯಿತು.
ಹೆಲ್ಮೆಟ್ ಇಲ್ಲದೆ ಇರುವ ಬೈಕ್ ಸವಾರರಿಗೆ ಪೊಲೀಸರರಿಂದ ದಂಡ ನರಗುಂದ ವಲಯದ ಡಿ ವೈ ಎಸ್ ಪಿ ಇವರ ಮಾರ್ಗದರ್ಶನದಲಿ ಇಂದು ಗಜೇಂದ್ರಗಡದ ಪುರ್ತಗೇರಿ ಸರ್ಕಲ್ ನಲ್ಲಿ ಸುಮಾರು 86 ಕ್ಕೂ ಹೆಚ್ಚು ಬೈಕ್ ಸವಾರರಿಗೆ ಹೆಲ್ಮೆಟ್ ಹಾಕದೆ ಇರುವ ಕಾರಣಕ್ಕೆ ದಂಡ ಹಾಕುವ ಮುಖಾಂತರ, ಹಾಗೂ ಬೈಕ್ ಇನ್ಶೂರೆನ್ಸ್, ಆರ್ ಸಿ ಕಾರ್ಡ್ ಪರಿಶೀಲನೆ ನಡೆಸಿದರು.
ನರಗುಂದ ವಲಯದ DYSP ಪ್ರಭುಗೌಡ D ಕಿರಿದಳ್ಳಿ, ಹಾಗೂ ಗಜೇಂದ್ರಗಡ ಠಾಣೆಯ sub ಇನ್ಸ್ಪೆಕ್ಟರ್ ಸೋಮನಗೌಡ ಗೌಡರ ಹಾಗೂ ರೋಣ ವಲಯದ ಸಿಪಿಐ ಎಸ್. ಎಸ್.ಬೀಳಗಿ ಹಾಗೂ ಗಜೇಂದ್ರಗಡ ಪೊಲೀಸ್ ಸಿಬ್ಬಂದಿ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಒಟ್ಟಾರೆಯಾಗಿ 86 ಬೈಕ್ ಸವಾರರಿಗೆ ದಂಡ ಹಾಕಿ ಮುಂದೆ ಜರಗುವ ಅಪಘಾತದ ಬಗ್ಗೆ ಜಾಗ್ರತಿ ಮೂಡಿಸಿದರು.
ವರದಿ : ಸುರೇಶ ಬಂಡಾರಿ.