ಹಿಂದೂಗಳ ರಕ್ಷಣೆಗೆ ಬ್ರಿಟನ್ ನೂತನ ಸರ್ಕಾರ ಬದ್ದ – ನಿಯೋಜಿತ ಅಧ್ಯಕ್ಷ ಕೀರ್ ಸ್ಟಾರ್ಮರ್.
ಚುನಾವಣೆ ಸಂದರ್ಭದಲ್ಲಿ ನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ.
ಹಿಂದೂಗಳ ರಕ್ಷಣೆಗೆ ಬ್ರಿಟನ್ ನೂತನ ಸರ್ಕಾರ ಬದ್ದ – ನಿಯೋಜಿತ ಅಧ್ಯಕ್ಷ ಕೀರ್ ಸ್ಟಾರ್ಮರ್.
ನವದೆಹಲಿ – ಸತ್ಯಮಿಥ್ಯ ( ಜೂಲೈ -06).
ಇತ್ತೀಚೆಗೆ ಬ್ರಿಟನ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ತಮ್ಮ ಅಧಿಪತ್ಯ ಸಾಧಿಸುವ ಮೂಲಕ ಮುಂದಿನ ಅಧ್ಯಕ್ಷರಾಗುವ ಎಲ್ಲಾ ಲಕ್ಷಣಗಳು ಸನ್ನಿಹಿತವಾಗಿವೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು . ಬ್ರಿಟನ್ನಲ್ಲಿ ಹಿಂದೂ ಪೋಬಿಯಾ ( ಹಿಂದೂ ವಿರೋಧಿ ನೀತಿ )ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದರು.
ಚಾರ್ ಸೌ ಪಾರ್ ಸ್ಥಾನಗಳನ್ನು ಗಳಿಸುವ ಮೂಲಕ ರಿಷಿ ಸುನಕ್ ರವರ ಕನ್ಸರ್ವೇಟಿವ್ ಪಕ್ಷವನ್ನು 14 ವರ್ಷದ ಆಳ್ವಿಕೆಯಿಂದ ಮುಕ್ತಗೊಳಿಸಿದ್ದ ಕೀರ್ತಿ ಸ್ಟಾರ್ಮರ್ ದಾಗಿದೆ.
ಕೀರ್ ಸ್ಟಾರ್ಮರ್ ಚುನಾವಣೆ ಸಂದರ್ಭದಲ್ಲಿ ಉತ್ತರ ಲಂಡನ್ನಿನ ಕಿಂಗ್ಸ್ ಬರಿ ಯಲ್ಲಿರುವ ನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೆ ನಡೆದ ವಿದ್ವಾಂಸಕ ಕೃತ್ಯಗಳು ಮತ್ತು ಹಿಂದುಗಳ ಮೇಲಿನ ಆಕ್ರಮಣವನ್ನು ಸಹಿಸಿಕೊಳ್ಳುವುದಿಲ್ಲ ಎನ್ನುವ ಮಾತನ್ನಾಡಿದ್ದರು.
ಅಲ್ಲದೇ ” ನನ್ನ ಲೇಬರ್ ಪಕ್ಷದ ಸರ್ಕಾರವು ಭಾರತದೊಂದಿಗೆ ನಮ್ಮ ಹಂಚಿಕೆಯ ಮೌಲ್ಯಗಳ ಪ್ರಜಾಪ್ರಭುತ್ವ ಮತ್ತು ಆಕಾಂಕ್ಷೆಯ ಆಧಾರದ ಮೇಲೆ ಸಂಬಂಧವನ್ನು ಬಯಸುತ್ತದೆ. ನಾವೂ ಮುಕ್ತ ವ್ಯಾಪಾರ ಒಪ್ಪಂದವನ್ನು ಬಯಸುತ್ತೇವೆ ” ಎಂದಿದ್ದಾರೆ. ಭಾರತ ದೊಂದಿಗೆ ಆರ್ಥಿಕ, ಜಾಗತಿಕ,ಹವಾಮಾನ, ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಹಂಚಿಕೊಳ್ಳುತ್ತೇವೆ ಎಂದು ಹೇಳಿದರು.
ಬ್ರಿಟನ್ನ ಲೇಬರ್ ಪಕ್ಷ ಒಟ್ಟು 650 ಸ್ಥಾನಗಳಲ್ಲಿ ಸುಮಾರು 410 ಸ್ಥಾನಗಳನ್ನು ಗೆಲುವು ಸಾಧಿಸಿದೆ. ರಿಷಿ ಸುನಾಕ್ ರವರ ಕನ್ಸರ್ವೇಟಿವ್ ಪಕ್ಷ ಕೇವಲ 130 ಸ್ಥಾನಗಳನ್ನು ಗೆದ್ದು. ಮುಂದಿನ ಪ್ರಧಾನಿ ಸ್ಟಾರ್ಮರ್ ರವರನ್ನು ಅಭಿನಂದಿಸಿದೆ .
ಅದ್ಭುತ ಗೆಲುವು ಸಾಧಿಸಿದ ಕೀರ್ ಸ್ಟಾರ್ಮರ್ ಗೆ ಭಾರತ ಪ್ರಧಾನಿ ಅಭಿನಂದನೆ ಸಲ್ಲಿಸುವ ಮೂಲಕ ನಿಮ್ಮ ನಾಯಕತ್ವದಲ್ಲಿ ಬ್ರಿಟನ್ ನೊಂದಿಗೆ ಉತ್ತಮ ಸಂಬಂಧ ಹೊಂದಲು ಇಷ್ಟಪಡುತ್ತದೆ ಎಂದಿದ್ದಾರೆ.
– ಚನ್ನು. ಎಸ್.