
K2 ಚಿತ್ರದ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ.K2 ಚಿತ್ರದ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ.
ಗಜೇಂದ್ರಗಡ – ಸತ್ಯಮಿಥ್ಯ (ಫೆ -28).
ಬಹುನಿರೀಕ್ಷಿತ K2 ಚಲನಚಿತ್ರ ನಾಳೆ ಮಾರ್ಚ್ 01 ಶನಿವಾರ ಸಾಯಂಕಾಲ 7 ಗಂಟೆಗೆ Itsshowtime ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಚಿತ್ರದ ಕಥೆ ಮತ್ತು ನಿರ್ದೇಶನವನ್ನು ಸೋಹಿಲ್ ಕೊಲ್ಕರ್ ಮಾಡಿದ್ದಾರೆ. ಚಿತ್ರದಲ್ಲಿ ಗಜೇಂದ್ರಗಡ ನಗರಕ್ಕೆ ಅನ್ಯಗ್ರಹಿಯರ ದಾಳಿ ಮತ್ತು ಅದನ್ನು ಬಗ್ಗು ಬಡೆಯುವ ರೀತಿಯ ಬಗ್ಗೆ ಅತ್ಯಂತ ಕುತೂಹಲಕಾರಿಯಾಗಿ ಚಿತ್ರೀಕರಣ ಮಾಡಲಾಗಿದೆ.
ಚಿತ್ರದಲ್ಲಿ ಕೋಟೆನಾಡು ಗಜೇಂದ್ರಗಡದ ಕ್ರಿಯಾಶೀಲ ಯುವಕ ರಾಜೇಶ್ ರಾಮಜಿ, ವಿನಾಯಕ ಬಾಕಳೆ, ಎಂ. ಜೆ. ಉಪ್ಪಿ, ಶಿವಕುಮಾರ,ಹರೀಶ್ ಪವಾರ ಅದ್ಭುತವಾಗಿ ನಟಿಸಿದ್ದಾರೆ.
ಜಾಜ್ ಹೈನ್ಸ್, ಜೈನಿ ಮಾರೆಟೊ, ನರೇಂದ್ರ ಗುಪ್ತಾ, ವಿ ಎಫ್ ಎಕ್ಷ ತಂಡದಲ್ಲಿದ್ದಾರೆ.
ಚಿತ್ರ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ತ್ರಿಭಾಷೆಯಲ್ಲಿ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿದೆ.
ವರದಿ : ಚನ್ನು. ಎಸ್.