ಟ್ರೆಂಡಿಂಗ್ ಸುದ್ದಿಗಳು

ಲ್ಯಾಪ್ ಟ್ಯಾಪ್ ವಿತರಣೆಯಲ್ಲಿ ತಾರತಮ್ಯ – ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪಾಲಕರು.

ಆಯ್ಕೆಯಾದ 10 ವಿದ್ಯಾರ್ಥಿಗಳಲ್ಲಿ. 9 ಜನಕ್ಕೆ ಮಾತ್ರ ಲ್ಯಾಪ್ ಟ್ಯಾಪ್ ವಿತರಣೆ.

Share News

ಲ್ಯಾಪ್ ಟ್ಯಾಪ್ ವಿತರಣೆಯಲ್ಲಿ ತಾರತಮ್ಯ – ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ  ತರಾಟೆಗೆ ತೆಗೆದುಕೊಂಡ ಪಾಲಕರು.

ಗದಗ:ಸತ್ಯಮಿಥ್ಯ ( ಜೂಲೈ -11)

ಲ್ಯಾಪ್ ಟ್ಯಾಪ್ ವಿತರಣೆಯಲ್ಲಿ ತಾರತಮ್ಯ ಆರೋಪ ಹಿನ್ನೆಲೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಪಾಲಕರು ತರಾಟೆಗೆ ತೆಗೆದುಕೊಂಡ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್    ವಿತರಣೆ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆದಿದೆ.

10 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್​ಟಾಪ್ ವಿತರಣೆ ಮಾಡಲಾಗಿತ್ತು.ಓರ್ವ ವಿದ್ಯಾರ್ಥಿನಿಗೆ ಲ್ಯಾಪ್​ಟಾಪ್​ ಸಿಗದ ಹಿನ್ನೆಲೆ ಪೋಷಕರು ಕೋಪಗೊಂಡಿದ್ದಾರೆ.

ಕಾರ್ಮಿಕ‌ ಇಲಾಖೆ ವತಿಯಿಂದ ಕಟ್ಟಡ‌ ಕಾರ್ಮಿಕರ ಮಕ್ಕಳಿಗೆ ಇರುವ ಶೈಕ್ಷಣಿಕ ಸೌಲಭ್ಯದ ಯೋಜನೆ ಇದಾಗಿದ್ದು, ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಒಟ್ಟು 10 ವಿದ್ಯಾರ್ಥಿಗಳ ಫೈಕಿ ವಿದ್ಯಾರ್ಥಿನಿ ಸಿಮ್ರಾನ್​ ಹೆಸರು ಕೈಬಿಡಲಾಗಿದೆ. ಹೀಗಾಗಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಇದಕ್ಕೆ ಸ್ಪಷ್ಟನೇ ಕೊಡಬೇಕಾದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಕರೆ ಸ್ವೀಕರಿಸುತ್ತಿಲ್ಲ.

ವರದಿ : ಮುತ್ತು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!