ಶಾಸಕಾಂಗ ಪೂರ್ಣ ಪ್ರಮಾಣದಲ್ಲಿ ಬರ್ಬಾದ್. ನಾಚಿಕೆಗೆಟ್ಟ ರಾಜಕಾರಣಿಗಳು – ಸಾಹಿತಿ ಪ್ರೊ. ಬಿ ಎ ಕೆಂಚರೆಡ್ಡಿ ಕಳವಳ.
ಇಂದಿನ ರಾಜಕೀಯ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದೆ.

ಶಾಸಕಾಂಗ ಪೂರ್ಣ ಪ್ರಮಾಣದಲ್ಲಿ ಬರ್ಬಾದ್. ನಾಚಿಕೆಗೆಟ್ಟ ರಾಜಕಾರಣಿಗಳು – ಸಾಹಿತಿ ಪ್ರೊ. ಬಿ ಎ ಕೆಂಚರೆಡ್ಡಿ ಕಳವಳ.
ಇಂದಿನ ರಾಜಕೀಯ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದೆ.
ಗದಗ : ಸತ್ಯಮಿಥ್ಯ ( ಜುಲೈ -14).
ಪ್ರಜಾಪ್ರಭುತ್ವ ನಾಲ್ಕು ಅಂಗಗಳಲ್ಲಿ ಶಾಸಕಾಂಗ ಪೂರ್ಣ ಪ್ರಮಾಣದಲ್ಲಿ ಬರ್ಬಾದ ಆಗಿದೆ. ಪ್ರಸ್ತುತ ರಾಜಕೀಯ ವಾತಾವರಣ ಸಾರ್ವಜನಿಕರಲ್ಲಿ ಭಯವನ್ನು ಸೃಷ್ಟಿಸುತ್ತಿದೆ .ಒಳ್ಳೆಯ ವ್ಯಕ್ತಿಎಂದು ಆಯ್ಕೆ ಮಾಡಿ ಕಳುಹಿಸಿದವರು ಭ್ರಷ್ಟಾಚಾರದಲ್ಲಿ ತೊಡಗಿ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ.ಒಳ್ಳೆಯ ರಾಜಕೀಯ ಪಟುಗಳು ಇಲ್ಲವೇ ಇಲ್ಲ.ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆಯ ಮೂಲಕ ನಾಚಿಕೆ ಗೇಡಿನ ಕೆಲಸದಲ್ಲಿ ಇಂದಿನ ರಾಜಕೀಯ ನಾಯಕರು ತೊಡಗಿಕೊಂಡಿದ್ದಾರೆ ಎಂದು ಹಿರಿಯ ಸಾಹಿತಿ ಬಿ. ಎ. ಕೆಂಚರೆಡ್ಡಿ ಕಳವಳ ವ್ಯಕ್ತಪಡಿಸಿದರು
ಅವರು ಶನಿವಾರ ಗಜೇಂದ್ರಗಡದ ತಾಲೂಕಾ ಕಸಾಪ ವತಿಯಿಂದ ನಗರದ ಗವಿಮಠದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ.ಈ ಎಲ್ಲ ವ್ಯವಸ್ಥೆಯನ್ನು ಸರಿಪಡಿಸಲು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೆಗಳ ಪಾತ್ರ ದೊಡ್ಡದು.ಇಂದಿನ ಮುದ್ರಣ ಮಾಧ್ಯಮದ ಪರಿಸ್ಥಿತಿ ಬಹಳಷ್ಟು ಶೋಚನಿಯವಾಗಿದೆ.ಆದ್ದರಿಂದ ಮಾಧ್ಯಮಗಳು ಸದೃಢವಾಗಬೇಕಾಗಿದೆ. ಪತ್ರಿಕಾ ಮಾಧ್ಯಮ ಉಳಿಯಲು ಪತ್ರಿಕೆಗಳನ್ನು ಓದುವ ವರ್ಗ ಹೆಚ್ಚಾಗಬೇಕು ಮತ್ತು ಜಾಹಿರಾತುದಾರರು ಹಾಗೂ ಚಂದಾದಾರರು ಕೃಪೆ ಇದ್ದಾಗ ಮುದ್ರಣ ಮಾಧ್ಯಮ ಉಳಿಯಬಹುದು ಎಂದರು.
ವರದಿ : ಚನ್ನು. ಎಸ್.