ತಾಲೂಕು

ಅವ್ಯವಸ್ಥೆಯ ಆಗರವಾದ ಹಲಕರ್ಟಿ ಗ್ರಾಮ – ಅಧ್ಯಕ್ಷರ ನಿರ್ಲಕ್ಷ್ಯವೆ ಈ ದುರ್ಗತಿಗೆ ಕಾರಣ ಸದಸ್ಯರ ಆಕ್ರೋಶ.

Share News

ಅವ್ಯವಸ್ಥೆಯ ಆಗರವಾದ ಹಲಕರ್ಟಿ ಗ್ರಾಮ – ಅಧ್ಯಕ್ಷರ ನಿರ್ಲಕ್ಷ್ಯವೆ ಈ ದುರ್ಗತಿಗೆ ಕಾರಣ ಸದಸ್ಯರ ಆಕ್ರೋಶ.

ಚಿತ್ತಾಪುರ:ಸತ್ಯಮಿಥ್ಯ ( ಜುಲೈ -15).

ಈ ಗ್ರಾಮದಲ್ಲಿ ಒಟ್ಟು 12 ಜನ ಚುನಾಯಿತ ಪ್ರತಿನಿಧಿಗಳು ಇದ್ದರು ಸಹಿತ ಮೂಲಭೂತ ಸೌಕರ್ಯಗಳು ಸಿಗದೆ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದು ಗ್ರಾಮದಲ್ಲಿ ಅಭಿವೃದ್ಧಿ ಕಾಣದೆ ಇರುವುದಕ್ಕೆ ಪಂಚಾಯತಿ ಅಧ್ಯಕ್ಷರ ದಿವ್ಯ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಸುಕ್ಷೇತ್ರಗಳಲ್ಲಿ ಒಂದಾಗಿರುವ ಹಲಕರ್ಟಿ ಗ್ರಾಮದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ವಾಸಿಸೀತ್ತಾರೆ ಈ ಪಂಚಾಯತಿಯ ವ್ಯಾಪ್ತಿಯಲ್ಲಿ ಒಟ್ಟು 12 ಜನ ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು ಇದ್ದರು ಸಹಿತ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ,ಚರಂಡಿಗಳ ಸರಿಯಾದ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಗ್ರಾಮದ ಪ್ರತಿ ವಾರ್ಡಗಳಲ್ಲಿ ಉತ್ತಮ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿದು ಹೋಗುತ್ತಿದೆ ಇದರಿಂದ ರಸ್ತೆ ಯಾವುದು ಚರಂಡಿ ಯಾವುದು ಎಂಬುದು ಗ್ರಾಮಸ್ಥರಿಗೆ ತಿಳಿಯದಾಗಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗ್ಯೂ ಮಲೇರಿಯಾ ಗಳಂತಹ ರೋಗ ಬರುವ ಎಲ್ಲಾ ಲಕ್ಷಣಗಳು ಇವೆ ಎಂಬುದು ಗ್ರಾಮದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಅಲ್ಲದೆ ಎಲ್ಲಿ ಅಂದರಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಅಲ್ಲಲ್ಲಿ ಒಡೆದು ಹೋಗಿದ್ದು ಚರಂಡಿಯ ನೀರು ಕುಡಿಯುವ ನೀರಿನಲ್ಲಿ ಮಿಶ್ರಣಗೊಂಡು ಕುಡಿಯಲು ಯೋಗ್ಯವಲ್ಲದ ಅಶುದ್ದ ಕುಡಿಯುವ ನೀರು ಸರಬರಾಜು ಆಗುತ್ತಿದೆ ಚರಂಡಿ ನೀರು ಮಿಶ್ರಿತ ಕಲುಷಿತ ನೀರು ಕುಡಿಯುವುದು ಗ್ಅರಾಮಸ್ಥರಿಗೆ ಅನಿವಾರ್ಯವಾಗಿದೆ ಇದರ ಸಮಸ್ಯೆಗಳ ಬಗ್ಗೆ ಸದಸ್ಯರಿಗೆ, ಅಧ್ಯಕ್ಷರಿಗೆ ತಿಳಿಸಿದರು ಸಹಿತ ಯಾವುದೆ ಕಾರ್ಯಗಳು ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ರಸ್ತೆಯ ತುಂಬೆಲ್ಲ ಚರಂಡಿ ನೀರು ಹರಿಯುತ್ತಿರುವುದರಿಂದ ರಸ್ತೆಯ ಮೇಲೆ ನಡೆದಾಡುವ ಸಾರ್ವಜನಿಕರ ಪೈಕಿ ಸುಮಾರು ನಾಲ್ಕೈದು ಜನ ವೃದ್ಧೆಯರು ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗಾಳಾಗಿವೆ ಎಂದು ವೃದ್ದೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಗಳು ರಸ್ತೆಗಿಂತಲು ಎತ್ತರವಾಗಿ ಅವೈಜ್ಞಾನಿಕವಾಗಿ ಅಳವಡಿಸಿದರಿಂದ ಅನೇಕ ದ್ವಿಚಕ್ರ ವಾಹನ ಸವಾರರು ಸಹಿತ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ ಎನ್ನುತ್ತಾರೆ ಸವಾರರು.

*ಗ್ರಾಮ ಪಂಚಾಯಿತಿ ಅಧ್ಯಕ್ಷರ ದಿವ್ಯ ನಿರ್ಲಕ್ಷ್ಯ! ಸದಸ್ಯರ ಆರೋಪ* 

 

ಗ್ರಾಮದ ತುಂಬೆಲ್ಲ ಚರಂಡಿ ವ್ಯವಸ್ಥೆ,ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ವ್ಯವಸ್ತೆ ಇಲ್ಲದೆ ಗ್ರಾಮಸ್ಥರು ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಾದ ನಾವುಗಳೆ ಖುದ್ದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರು ಸಹಿತ ಅಧ್ಯಕ್ಷರು ಕಲಬುರ್ಗಿಯಲ್ಲಿ ಮನೆಮಾಡಿಕೊಂಡು ಪಂಚಾಯತಿಗೆ ಬಾರದೆ ನಾನು ಬಂದು ನೋಡುತ್ತೆನೆ,ಮಾಡಿಸುತ್ತೆನೆ ಎಂದು ಹೇಳುತ್ತಾರೆ ಹೋರತು ಇಲ್ಲಿಯವರೆ ಬಂದೇ ಇಲ್ಲ,ಹಿಗಿರುವಾಗ ಸದಸ್ಯರಾದ ನಾವುಗಳು ಅನುದಾನ ಇಲ್ಲದೆ ಗ್ರಾಮದ ಅಭಿವೃದ್ಧಿ ಮರಿಚಿಕೆ ಆಗಿದೆ,ಕಳೆದ ರಂಜಾನ್ ತಿಂಗಳಲ್ಲಿ ಕುಡಿಯುವ ನೀರು ಸರಬರಾಜು ಆಗದೆ ಇರುವುದರಿಂದ ಸದಸ್ಯರಾದ ಭಾಗ್ಯಲಕ್ಷ್ಮಿ ಕರೆಪ್ಪ ಪೂಜಾರಿ ಅವರು ತಮ್ಮ ಸ್ವಂತ ಹಣದಲ್ಲಿ ಟ್ಯಾಂಕ್ ಗಳ ಮೂಲಕ ಸುಮಾರು ಐವತ್ತಕ್ಕೂ ಬಾರಿ ನೀರು ತಂದು ನೀರಿನ ವ್ಯವಸ್ಥೆ ಮಾಡಿದ್ದಾರೆ.

ಗ್ರಾಮದ ಈ ಎಲ್ಲಾ ಸಮಸ್ಯೆಯೆಗಳಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರ ದಿವ್ಯ ನಿರ್ಲಕ್ಷ್ಯವೆ ಮುಖ್ಯ ಕಾರಣ ಎನ್ನುತ್ತಾರೆ ಗ್ರಾಮ ಪಂಚಾಯತಿಯ ಸದಸ್ಯ ವೀರೇಶ ಸ್ವಾಮಿ ಗ್ರಾಮದ ಮುಖಂಡರಾದ ಭೀಮಾಶಂಕರ ಮತ್ತು ಇನ್ನಿತರ ಸದಸ್ಯರ ಆರೋಪವಾಗಿದೆ.

 *ಮೂರು ಜನ ಅಭಿವೃದ್ಧಿ ಅಧಿಕಾರಿಗಳು ವರ್ಗಾವಣೆ* 

ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳ ಮದ್ಯೆ ಹೊಂದಾಣಿಕೆ ಇಲ್ಲದೆ ಇರುವುದರಿಂದ ಒಂದು ವರ್ಷದಲ್ಲಿ ಸುಮಾರು ಮೂರು ಜನ ಅಭಿವೃದ್ಧಿ ಅಧಿಕಾರಿಗಳು ನಮಗೆ ಈ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸಲು ಆಗುವುದಿಲ್ಲ ಈ ಪಂಚಾಯತಿ ನಿಮಗೆ ಬೇಡವೆ ಬೇಡ ಎಂದು ತಾಲೂಕಿನ ವಿವಿಧ ಗ್ರಾಮ ಪಚಾಯತಿಗಳಿಗೆ ವರ್ಗಾವಣೆ ಮಾಡಿಕೊಂಡು ಹೋಗಿದ್ದರಿಂದ ಈ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳೇ ಇಲ್ಲದಂತಾಗಿದೆ.

 *ಸಮಸ್ಯೆಗಳ ಬಗ್ಗೆ ದೂರು ಸಲ್ಲಿದರು ಕ್ರಮ ಕೈಗೊಳ್ಳದ ಅಧಿಕಾರಿಗಳು* 

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಗುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಪಂಚಾಯತಿ ಸದಸ್ಯರು ತಾಲೂಕ ಪಂಚಾಯತ ಅಧಿಕಾರಿಗಳಿಗೆ ತಿಳುಹಿಸಿದರು ಸಹಿತ ತಾಲೂಕ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ,ಇಂತಹ ಅಧಿಕಾರಿಗಳ ವಿರುದ್ದ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸದಸ್ಯರು ಮನವಿಯಾಗಿದೆ.

ವರದಿ : ಶಿವು ರಾಠೋಡ್ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!