ಕಳಪೆ ರಸ್ತೆ ಕಾಮಗಾರಿ ವಿರುದ್ಧ ಧ್ವನಿ ಎತ್ತಿದ ಕೆ ಆರ್ ಎಸ್ – ಜಿಲ್ಲಾಧಿಕಾರಿಗೆ ಮನವಿ.
ಗದಗ : ಸತ್ಯಮಿಥ್ಯ ( ಜುಲೈ -18).
ನರಗುಂದ ತಾಲೂಕಿನ ಬನಹಟ್ಟಿ ಮುಗನೂರ ಗ್ರಾಮಕ್ಕೆ ಸೇರುವ ರಸ್ತೆ ಕಾಮಗಾರಿ ನಡೆಯುತ್ತಿದೆ.ಈ ಕಾಮಗಾರಿ ಅವೈಜ್ಞಾನಿಕ ಮತ್ತು ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾಮಗಾರಿ ನಡೆಯುವ ಸ್ಥಳದಲ್ಲಿ ರೈತರ ಭೂ ವ್ಯಾಜ್ಯಗಳಿದ್ದು ಅವುಗಳನ್ನು ಸರಿಪಡಿಸಿ ರಸ್ತೆ ನಿರ್ಮಾಣ ಕಾರ್ಯ ಮಾಡಬೇಕಾಗಿದ್ದು. ಈ ಒಂದು ಕುಂಟು ನೆಪವೊಡ್ಡಿ. Pwd ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮಯ ಗತಿಸುತ್ತಿದ್ದಾರೆ. ಈ ರಸ್ತೆ ಕಾಮಗಾರಿಗಾಗಿ ಅಗೆದಿದ್ದರಿಂದ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡ ಘಟನೆಗಳು ಜರುಗುವುದು ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಬೇಕು ಮತ್ತು ಎಸ್ಟಿಮೇಟ್ ಪ್ರಕಾರ ಕಾಮಗಾರಿ ನಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ನೀಲಪ್ಪ ಕಟಗಿ, ಜಿಲ್ಲಾಧ್ಯಕ್ಷ ವೀರನಗೌಡ ಮುಗನೂರ, ಪಾರುಕ್ ಕಟ್ಟಿಮನಿ, ಖಾದರ್ ತೆಕ್ಕಲಕೋಟೆ, ಆರಿಫ್ ಮುಳಗುಂದ, ಜಾಫರ್ ಶಿರಹಟ್ಟಿ, ಮಲಿಕ್ ವಾಲಿಕಾರ, ಮೌಲಾಸಾಬ್ ಪೆಂಡಾರಿ.
ವರದಿ : ವಿರೂಪಾಕ್ಷ.