ಶಿಕ್ಷಣ ಕೇವಲ ನೌಕರಿಗಾಗಿ ಪಡೆಯದೆ ಬದುಕು ರೂಪಿಸಲು ಕಲಿಕೆ ಅವಶ್ಯ -ಸಾಹಿತಿ ಆರ್. ಪಿ ರಾಜೂರು.
ಕುಕನೂರ: ಸತ್ಯಮಿಥ್ಯ ( ಜುಲೈ -23).
ಶಿಕ್ಷಣ ಕೇವಲ ನೌಕರಿಗಾಗಿ ಪಡೆದುಕೊಳ್ಳಬೇಡಿ ನಿಮ್ಮ ಜೀವನ ಸುಂದರವಾಗಿಸಲು ಶಿಕ್ಷಣ ಪಡೆಯಿರಿ. ಒಳಿತನ್ನು ಕಲಿಯಿವ ಮೂಲಕ ಸಮಾಜಕ್ಕೆ ಮಾದರಿಯಾಗಿರಿ. ನಮ್ಮ ಸಂಸ್ಥೆ ಪ್ರಾಧ್ಯಾಪಕರ ಶ್ರಮ ಮತ್ತು ಉತ್ತಮ ಬೋಧನೆಯೊಂದಿಗೆ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿರುವುದರಿಂದ ಎಲ್ಲ ಸೀಟುಗಳು ಭರ್ತಿಯಾಗುತ್ತಿವೆ.ಇದರಿಂದ ಕಾಲೇಜಿಗೆ ಹೆಸರು ಬರುತ್ತಿದೆ ಹಿರಿಯ ಸಾಹಿತಿ ಆರ್. ಪಿ ರಾಜೂರು ಹೇಳಿದರು .
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೌಕರ್ಯಗಳಿಗೆ ತೊಡಕಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಾಧ್ಯಾಪಕರು ವಿದ್ಯಾರ್ಥಿಗಳ ಮಟ್ಟಕ್ಕಿಳಿದು ಪಾಠಗಳು ಮಾಡುತ್ತಿದ್ದಾರೆ.ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ವಿದ್ಯಾಭ್ಯಾಸ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಆರ್. ಎನ್ ಜನಾದ್ರಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯತ್ತ ಗಮನಹರಿಸಿ ಅತಿ ಹೆಚ್ಚು ಅಂಕವನ್ನು ಗಳಿಸಿ ಮುಂದಿನ ನಿಮ್ಮ ಜೀವನವನ್ನು ಬಂಗಾರ ಮಯಗೊಳಿಸಬೇಕಾದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸರಾವ್ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾಲಘಟ್ಟದಲ್ಲಿ ಉತ್ತಮ ಅಭ್ಯಾಸದ ಕಡೆ ಗಮನಹರಿಸಿ ಪಾಲಕರ ಹಾಗೂ ಸಮಾಜದ ಉತ್ತಮ ನಾಗರಿಕನಾಗಿ ಬೆಳೆಯಬೇಕಿದೆ ಎಂದರು.
ಪ್ರಾಚಾರ್ಯ ಈಶಪ್ಪ ಮಳಗಿ ಉದ್ಘಾಟನಾ ಭಾಷಣ ಮಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಮಂಜುನಾಥ್ ಅಂಗಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ರಫಿ ಹಿರೇಹಾಳ್, ನಿಂಗಪ್ಪ ಗೋರ್ಲೆಕೊಪ್ಪ ಬರಮಪ್ಪ ತಳವಾರ್, ವಿಜಯಲಕ್ಷ್ಮಿ, ಬಿನ್ನಾಳ್, ಚೆನ್ನಪ್ಪ ಕೊರ್ಲಹಳ್ಳಿ, ಸುರೇಶ್ ಬಿನ್ನಾಳ್ ಇದ್ದರು.
ವರದಿ : ಚನ್ನಯ್ಯ ಹಿರೇಮಠ