ಘಟಪ್ರಭಾ ನದಿಯ ಆರ್ಭಟ- ವಡೇರಹಟ್ಟಿ,ಹುಣಶ್ಯಾಳ,ಮುಸಗುಪ್ಪಿಯಲ್ಲಿ ಕಾಳಜಿ ಕೇಂದ್ರಗಳ ಸ್ಥಾಪನೆ
ಮೂಡಲಗಿ :ಸತ್ಯಮಿಥ್ಯ ( ಜುಲೈ -26)
ಸತತ ಮಳೆಯ ಪ್ರಭಾವದಿಂದ ನದಿ ಪಾತ್ರದ ಜನರ ತೆರವು ಕಾರ್ಯಾರಣೆ ಹಾಗೂ ಕಾಳಜಿ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ತಹಶೀಲ್ದಾರ ಮಹಾದೇವ ಸನಮೂರಿ ನೇತೃತ್ವದಲ್ಲಿ ತಾಲೂಕಾ ಪಂಚಾಯತ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾದಿಕಾರಿಗಳ ತಂಡ ಕಾರ್ಯ ಪ್ರವರ್ತರಾದರು,
ನದಿಯ ನೀರು ಬರುವ ಗ್ರಾಮಗಳ ತೋಟಗಳಲ್ಲಿ ವಾಸಿಸುತ್ತಿರುವ ಜನರಿಗೆ ಹುಣಶ್ಯಾಳ ಪಿ ಜಿ, ಹಾಗೂ ವಡೇರಹಟ್ಟಿಯ ಸರ್ಕಾರಿ ಪ್ರೌಡ ಶಾಲೆಯಲ್ಲಿ ಮತ್ತು ಮುಸಗುಪ್ಪಿಯಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಬಿಸಲಾಗಿದೆ, ಸದ್ಯ 60 ಜನರು ಕಾಳಜಿ ಕೇಂದ್ರಕ್ಕೆ ಬಂದಿದ್ದು ಇನ್ನಷ್ಟು ನೀರು ಹೆಚ್ಚಾಗುವ ಸಾಧ್ಯತೆ ಇದ್ದು ಸಾಧ್ಯವಾದಷ್ಟು ಜನರು ತಾಲೂಕಾಡಳಿತ ಅಧಿಕಾರಿಗಳ ಮನವಿಗೆ ಎತ್ತರದ ಪ್ರದೇಶಗಳಿಗೆ ಜಾನುವಾರಗಳ ಸಮೇತ ಸ್ಥಳಾಂತರವಾಗಬೇಕು ಎಂದು ತಾಲೂಕಾ ದಂಡಾಧಿಕಾರಿ ಮಹಾದೇವ ಸನಮೂರಿ ತಿಳಿಸಿದರು, ಶುಕ್ರವಾರ ಮತ್ತೆ ಹಿಡಕಲ್ ಜಲಾಶಯದಿಂದ 10 ಸಾವಿರ ಕ್ಯೂಸೆಕ್ಷ ನೀರು ಬಿಡುಗಡೆ ಮಾಡುವದರಿಂದ 40486 ಕ್ಯೂಸೆಕ್ಷ ನೀರು ಘಟಪ್ರಭಾ ನದಿಗೆ ಬರುತ್ತಿದ್ದು ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದರು,
ಈ ಸಮಯದಲ್ಲಿ ತಾಲೂಕಾ ಪಂಚಾಯತ ನರೇಗಾ ಅಧಿಕಾರಿ ಚಂದ್ರಶೇಖರ ಬಾರ್ಕಿ,ಕ್ಷೇತ್ರ ಶಿಕ್ಷಣಾದಿಕಾರಿ ಅಜೀತ ಮನ್ನಿಕೇರಿ, ಪಿ ಡಿ ಓ ಶಿವಾನಂದ ಗುಡಸಿ ಇದ್ದರು.
ವರದಿ : ಶಿವಾನಂದ ಮುಧೋಳ್.