ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರಿಂದ ಬಸವ ಪಂಚಮಿ ಆಚರಣೆ
ಲಿಂಗಸೂಗೂರ:ಸತ್ಯಮಿಥ್ಯ (ಆಗಸ್ಟ್ -09).
ತಾಲೂಕಿನ ಮುದಗಲ್ ಪಟ್ಟಣದ ಮಾನವ ಬಂಧುತ್ವ ವೇದಿಕೆಯ ಸಂಘಟನೆಯ ಕಾರ್ಯಕರ್ತರಿಂದ ನಾಗರ ಪಂಚಮಿ ಬದಲು ಬಸವ ಪಂಚಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ನಾಗರ ಪಂಚಮಿಯಂದು ಜನರು ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಯ ಮೌಢ್ಯತೆಯ ತೊಲಗಿಸಲು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಂದ ಬಡವರು,ಶ್ರಮಿಕರು,ಅಸಹಾಯಕರು,ಅಶಕ್ತರು,ರೋಗಿಗಳು ಮತ್ತು ಅನಾಥಾಶ್ರಮದಲ್ಲಿರುವ ವೃದ್ಧರಿಗೆ ಹಾಲು ಕುಡಿಸಿ ಜನರಿಗೆ ತಿಳುವಳಿಕೆ ಮೂಡಿಸಿದರು.
“ಕಲ್ಲು ನಾಗರ ಕಂಡರೆ ಹಾಲನೆರೆವರಯ್ಯ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ” ಎಂಬಂತೆ ಬಸವಣ್ಣ ನವರ ವಚನದಲ್ಲಿ ಮಾನವನ ಮನಸ್ಥಿತಿಗೆ ಹಿಡಿದ ಕನ್ನಡಿ.ಕೆಲವೊಮ್ಮೆ ಹಾವು ಹಾಲು ಕುಡಿಯುವುದೇ ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುವುದು ಸಂದೇಹಾಸ್ಪದ ಸಂಗತಿಯಾಗಿದೆ.ಇದರಿಂದ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತಿದೆ.ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ 40ಸಾವಿರಕ್ಕಿಂತ ಹೆಚ್ಚು ಮಕ್ಕಳು ಸಾವಿಗೀಡಾಗುತ್ತಿದ್ದಾರೆ.ನಾಗರಹಾವು ಮಾಂಸಾಹಾರಿ ಸರಿಸೃಪ.ಅದಕ್ಕೆ ಹಾಲು ಹಾಕುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ’ ಸಮಾಜದಲ್ಲಿ ಇಂತಹ ಮೌಢ್ಯತೆಯ ತೊಲಗಿಸಲು ಮುದಗಲ್ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ನಾಗರ ಪಂಚಮಿ ಎಂಬ ಹೆಸರು ಬದಲಿಸಿ ಬಸವ ಪಂಚಮಿ ಎಂದು ಹಬ್ಬವನ್ನು ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ಸಂಜೀವ್ ಮುದಗಲ್,ಗೌರವ ಸಂಚಾಲಕರಾದ ಸಂಗಮೇಶ ಸರಗಣಚಾರಿ,ಸಹ ಸಂಚಾಲಕರಾದ ಮೌನೇಶ ಶಿವನಗುತ್ತಿ,ನಾರಾಯಣ ಐಹೊಳೆ,ರಮೇಶ ದೇವರಮನಿ,ರಾಜಾಸಾಬ,ರವಿಕುಮಾರ, ಬಸವರಾಜ ದೊಡ್ಡಮನಿ,ಮಹಾಂತೇಶ ಚಲುವಾದಿ ಇನ್ನಿತರ ಉಪಸ್ಥಿತರಿದ್ದರು.
ವರದಿ : ರಮೇಶ ನಾಯಕ್.