ಐತಿಹಾಸಿಕ ಪರಂಪರೆಯುಳ್ಳ ಸಿದ್ನೇಕೊಪ್ಪ ಗ್ರಾಮದ ಸಿದ್ದೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ವಿಶೇಷ ಪೂಜೆ ಮತ್ತು ಭಜನೆ ಕಾರ್ಯಕ್ರಮ.
ಕೊಪ್ಪಳ: ಸತ್ಯಮಿಥ್ಯ (ಆಗಸ್ಟ್ -09)
ಜಿಲ್ಲೆಯ ಕುಕನೂರು ತಾಲೂಕಿನ ಸಿದ್ನೇಕೊಪ್ಪ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರನ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಒಂದು ತಿಂಗಳ ಪರಿಯಂತ ಪೂಜಾ ಕಾರ್ಯಕ್ರಮಗಳು ಹಾಗೂ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆ ನೆರವೇರುವುದು.
ಪ್ರತಿದಿನ ಪ್ರಾತಃಕಾಲದಲ್ಲಿ ಶ್ರೀ ಸಿದ್ದೇಶ್ವರನ ಮೂರ್ತಿಗೆ ಐದು ಗಂಟೆಗೆ ಮಹಾ ರುದ್ರಭಿಷೇಕ ಹಾಗೂ ವಿಶೇಷ ಪೂಜೆ ಕಾರ್ಯಕ್ರಮಗಳು ನೆರವೇರುತ್ತವೆ. ಗ್ರಾಮದ ಸಿದ್ಧೇಶ್ವರ ಭಜನ ಸಂಘದವರಿಂದ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನವನ್ನು ಮುಗಿಸಿ ದೇವಸ್ಥಾನದಿಂದ ಸಿದ್ದೇಶ್ವರನ ಭಾವಚಿತ್ರವಿರುವ ಫೋಟೋವನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಗಿಸಿ ನಂತರ ದೇವಸ್ಥಾನಕ್ಕೆ ಆಗಮಿಸುತ್ತಾರೆ ಗ್ರಾಮದ ಪ್ರತಿ ಭಕ್ಕನು ಸಹ ಪ್ರತಿದಿನ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಬಂದ ನಂತರ ಚಹಾ ಬಿಸಗೀತನ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಗ್ರಾಮದ ಸಂಗಯ್ಯ ಪೂಜಾರ್ ಅವರು ಮಾಧ್ಯಮಕ್ಕೆ ತಿಳಿಸಿದರು.
ಮೂರನೇ ಮಂಗಳವಾರ ಸಿದ್ಧೇಶ್ವರ ಮೂರ್ತಿಯ ಹಳ್ಳದಿಂದ ಕರೆದುಕೊಂಡು ಬರುವ ಕಾರ್ಯಕ್ರಮ ನೆರವೇರುವುದು. ಕಡೆಯ ಶ್ರಾವಣ ಸೋಮವಾರ ಭಜನಾ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಅವತ್ತಿನ ದಿವಸ ವಿಶೇಷವಾದ ಅಭಿಷೇಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಗುತ್ತದೆ ಮತ್ತು ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಲ್ಲಾ ಸದ್ಭಕ್ತರು ಪ್ರಸಾದವನ್ನು ಸ್ವೀಕರಿಸಿ ಶ್ರೀ ಸಿದ್ದೇಶ್ವರನ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.
ಒಂದು ತಿಂಗಳ ಪರಿಯಂತ ಸಿದ್ದೇಶ್ವರನ ಸ್ವಾಮಿಗೆ, ರುದ್ರಾಭಿಷೇಕ ಪೂಜಾ ಕಾರ್ಯಕ್ರಮಗಳನ್ನು ರುದ್ರಮುನಿ ಸ್ವಾಮಿ ಅರ್ಚಕರು, ವಿಶ್ವನಾಥ ಹಿರೇಮಠ ಅವರು ನೆರವೇರಿಸುವರು .
ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಭಜನಾ ಮಂಡಳಿಯ, ಸಿದ್ದಪ್ಪ ನೆರೆಗಲ್, ಶಿವಪ್ಪ ಮನಗೂಳಿ, ಸಂಗಪ್ಪ ಮನಗೂಳಿ, ಈರೇಶ್ ಮೇಟಿ, ಪರಪ್ಪ ತೊಂಡೆಯಾಳ, ಈಶಪ್ಪ ಹೊಸಳ್ಳಿ, ಹಾಗೂ ಗ್ರಾಮದ ಗುರುಹಿರಿಯರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.