
ಕುದರಿಮೋತಿ : ಸತ್ಯಮಿಥ್ಯ (ಅಗಷ್ಟ -23)
ಮನುಷ್ಯ ಒತ್ತಡದ ಬದುಕು ನಡೆಸುತ್ತಿರುವುದರಿಂದ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ವಿಹಾರದ ಜೊತೆಗೆ ಕ್ರೀಡೆ ಅವಶ್ಯಕ ಎಂದು ಅಲ್ಪಸಂಖ್ಯಾತರ ಮೊರಾರ್ಜಿ ಉನ್ನತೇಕರಿಸದ ವಸತಿ ಶಾಲೆಯ ಪ್ರಾಂಶುಪಾಲರಾದ ಮುತ್ತಣ್ಣ ಅಂಗಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಕುದುರಿಮೋತಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಉನ್ನತೀಕರಿಸಿದ ವಸತಿ ಶಾಲೆಯಲ್ಲಿ ಕುದುರಿಮೋತಿ-ಮಂಗಳೂರು ವಲಯಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ನಂತರ ದೈಹಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಗೌಡರು ಅಂಗಡಿ ಮಾತನಾಡುತ್ತಾ ಕ್ರೀಡೆಗೆ ವಯಸ್ಸಿನ ತಾರತಮ್ಯ ಬೇಡ. ಕ್ರೀಡೆ ನಮ್ಮನ್ನು ಸದಾ ಚಟುವಟಿಕೆಯಿಂದ ಇಡುವ ಜೊತೆಗೆ ಕ್ರಿಯಾಶೀಲರನ್ನಾಗಿ ಮಾಡುತ್ತದೆ.ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯವನ್ನು ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರೀದಾ ಬೇಗಂ ತಂಬಾಕದಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಹನುಮನ ಗೌಡ ಪೊಲೀಸ್ ಪಾಟೀಲ್ ದಳಪತಿಗಳು, ಬಾಬುಸಾಬ್ ಮುಖಂಡರ ಗ್ರಾ. ಪಂ. ಸದಸ್ಯರು, ಮಂಜುನಾಥ್ ಸಜ್ಜನ್, ಸತ್ಯನಾರಾಯಣ ರೆಡ್ಡಿ ಕೋಳಿ ಫಾರಂ,
ಶರಣಪ್ಪ ರಾವಣಕಿ ಶಿಕ್ಷಣ ಸಂಯೋಜಕರು , ದೇವೇಂದ್ರಪ್ಪ ಬಗನಾಳ ಸಿ ಆರ್ ಪಿ, ರವಿ ಡಿ ಮಳಗಿ , ಶರಣಪ್ಪ ತಾಲೂಕ ದೈಹಿಕ ಶಿಕ್ಷಣ ಅಧಿಕಾರಿಗಳು, ಇಸಿಓ ಸುರೇಶ್ ಮಾದನೂರು, ಬಿ ಆರ್ ಸಿ ಬಸವರಾಜ ಅಂಗಡಿ, ಶರಣಪ್ಪ ವೀರಾಪುರ್ ದೈಹಿಕ ಶಿಕ್ಷಕರ ಮುಖ್ಯಸ್ಥರು, ಹಾಗೂ ದೈಹಿಕ ಶಿಕ್ಷಕರಾದ ಎಸ್ ಎಮ್ ಹಿರೇಮಠ, ಉಮೇಶ್ ಕಂಬಳಿ, ಚಂದ್ರಶೇಖರ್ ರಾಜೂರ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.