ಅಗ್ನಿ ಅವಘಡಗಳ ಬಗ್ಗೆ ವಿದ್ಯಾರ್ಥಿಗಳು ಜ್ಞಾನ ಹೊಂದಿರಬೇಕು :- ಕೆ. ಜನಾರ್ಧನ್ ರಾವ್.
ಕುಕನೂರ : ಸತ್ಯಮಿಥ್ಯ (ಅಗಸ್ಟ್ -31).
ಅಗ್ನಿ ಅವಘಡಗಳಿಂದ ರಕ್ಷಿಸಿಕೊಳ್ಳಲು ತುರ್ತು ಪ್ರಕ್ರೀಯೆ,ಬೆಂಕಿ ಸಂಬಂಧಿಸಿದ ಘಟನೆಗಳು ಅಪಾಯಗಳನ್ನು ತಡೆಗಟ್ಟಲು, ತಗ್ಗಿಸಲು ಮತ್ತು ನಿರ್ವಹಿಸಲು ಅಗತ್ಯವಾದ ತಾಂತ್ರಿಕ ಕೌಶಲ್ಯಗಳ ಜ್ಞಾನ ಮತ್ತು ಪ್ರಾಯೋಗಿಕ ಅನುಭವದೊಂದಿಗೆ ವಿವಿಧ ಅಂಶಗಳನ್ನು ವಿದ್ಯಾರ್ಥಿಗಳು ಅರಿಯಬೇಕು. ತುರ್ತು ಪರಿಸ್ಥಿತಿಯಲ್ಲಿ ಅಗ್ನಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ಸಾಧನಗಳನ್ನು ಹೇಗೆ ಬಳಸಬೇಕು ಮತ್ತು ಬೆಂಕಿ ನಂದಿಸುವಲ್ಲಿ ಯಾವ ರೀತಿ ಯಶಸ್ವಿಯಾಗಬೇಕು ಎಂಬುದನ್ನು ಪ್ರಾಯೋಗಿಕವಾಗಿ ನೀಡಲಾಯಿತು. ಅಗ್ನಿ ಸಂಭಾವಿಸಿದಾಗ ತುರ್ತು ಪರಿಸ್ಥಿತಿ ಗಳಿಗಾಗಿ ದೂರವಾಣಿ ಸಂಖ್ಯೆಗಳಾದ 101 ಗೆ ಡಯಲ್ ಮಾಡುವ ಮೂಲಕ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲು ಸೂಚಿಸಲಾಯಿತು.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡಗಳ ಬಗ್ಗೆ ಅಣುಕು ಪ್ರದರ್ಶನವನ್ನು ನೀಡಲಾಯಿತು. ಅಗ್ನಿ ಅವಘಡಗಳ ಪ್ರದರ್ಶನದಲ್ಲಿ ಅಗ್ನಿಶಾಮಕ ಠಾಣೆ ಅಧಿಕಾರಿ ಕೆ. ಜನಾರ್ಧನ್ ರಾವ್, ಸಿಬ್ಬಂದಿಗಳಾದ ಯಮನೂರಪ್ಪ, ಸಂಗಮೇಶ, ಶರಣಯ್ಯ, ವಿನಯಕುಮಾರ, ನಾಗನಗೌಡ ಪೊಲೀಸ್ ಪಾಟೀಲ್, ದೇವಿಂದ್ರಪ್ಪ, ಶಿವಬಸವನಗೌಡ, ಸಿಬ್ಬಂದಿಗಳು ಬೆಂಕಿ ನಂದಿಸುವ ಸಾಧನೆಗಳ ಬಗ್ಗೆ ಮತ್ತು ಬೆಂಕಿ ನಂದಿಸುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಅಣುಕು ಪ್ರದರ್ಶನ ನೀಡಿದ ಅಗ್ನಿಶಾಮಕ ಠಾಣಾ ಅಧಿಕಾರಿಗಳಿಗೆ ನವೋದಯ ವಿದ್ಯಾಲಯದ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ, ಜಿ. ಜಯಾ, ಸಿಬ್ಬಂದಿ ವರ್ಗದವರಾದ ಫಾತೀಮಾ, ಅಂದಾನಯ್ಯ, ನಟರಾಜ್, ವೆಂಕಟೇಶ್ ಹಾಗೂ ನವೋದಯ ವಿದ್ಯಾಲಯದ ಸಿಬ್ಬಂದಿ ವರ್ಗದವರು ಅಗ್ನಿಶಾಮಕ ತಾಣ ಸಿಬ್ಬಂದಿ ವರ್ಗದವರು, ವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.