
ಮಂಗಳೂರು: ಗೌರಿ ಗಣೇಶ ಗೆಳೆಯರ ಬಳಗದಿಂದ ವೈಶಿಷ್ಟ್ಯ ಪೂರ್ಣ ಗಣೇಶ ವಿಸರ್ಜನೆ.
ಕೊಪ್ಪಳ :ಸತ್ಯಮಿಥ್ಯ (ಸ-15)
ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಮೋಚಿ ಸಮಾಜದ ಗೌರಿ ಗಣೇಶ ಗೆಳೆಯರ ಬಳಗ ವತಿಯಿಂದ ಶ್ರೀ ಗಣೇಶ ವಿಸರ್ಜನೆ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಗಣೇಶ ಪ್ರತಿಷ್ಠಾಪನೆಯನ್ನು ನೆರವೇರಿಸಿ ಪ್ರತಿದಿನ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿ ಶನಿವಾರ ದಿವಸ ವಿಸರ್ಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಅನ್ನ ಪ್ರಸಾದ ಸೇವೆಯನ್ನು ನೆರವೇರಿಸಲಾಯಿತು.
ಗೌರಿ ಗಣೇಶ ಗೆಳೆಯರ ಬಳಗದ ಸುಭಾಷ ಮದಕಟ್ಟಿ ಮಾತನಾಡಿ ಈಗ ಸತತವಾಗಿ ನಮ್ಮ ಮಂಗಳೂರು ಗ್ರಾಮದ ಮೋಚಿ ಸಮುದಾಯ ಭವನದಲ್ಲಿ , ಮೋಚಿ ಸಮಾಜದ ವತಿಯಿಂದ ಸತತವಾಗಿ 21 ವರ್ಷಗಳಿಂದ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸುತ್ತ ಬಂದಿದ್ದು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಣೇಶನ ಪ್ರತಿಷ್ಠಾಪನೆ ನೆರವೇರಿಸಿ 7 ದಿನಗಳ ಕಾಲ ಶ್ರೀ ವಿಘ್ನೇಶ್ವರನಿಗೆ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಶನಿವಾರ ದಿವಸ ವಿಶೇಷವಾಗಿ ಪೂಜೆಯನ್ನು ನೆರವೇರಿಸಿ ಅನ್ನ ಸಂತರ್ಪಣ ಕಾರ್ಯಕ್ರಮ ನೆರವೇರಿಸಿ ಸಾಯಂಕಾಲ ಏಳು ಗಂಟೆಗೆ ಗಣೇಶ ವಿಸರ್ಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಗ್ರಾಮದ ಗುರು ಹಿರಿಯರು ಹಾಗೂ ಮೋಚಿ ಸಮಾಜದವರ ಸಹಾಯ ಸಹಕಾರ ದೊಂದಿಗೆ ಶ್ರೀ ಗಣೇಶನ ವಿಸರ್ಜನೆ ಕಾರ್ಯಕ್ರಮ ನೆರವೇರುತ್ತಿದ್ದು ವಿಶೇಷವಾಗಿ ಗ್ರಾಮದ ಯುವಕರು ,ಗೆಳೆಯರು, ಮಕ್ಕಳು ನೃತ್ಯವನು ಮಾಡಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಸುಭಾಶ ಮದಕಟ್ಟಿ, ಆನಂದ ಬಂಡಿ, ರವಿ ಬಂಡಿ, ಮಂಗಳೇಶ ಮುಂಡರಗಿ, ಕುಮಾರ ರೋಣದ, ಸಂತೋಷ ಗುಡಸಲಮನಿ, ಇಂದ್ರಜ್ ರೋಣದ, ಶಿವಕುಮಾರ ಬಂಡಿ, ಉದಯ ಬಂಡಿ, ಗ್ರಾಮದ ಗುರು ಹಿರಿಯರು ಮತ್ತು ಗೆಳೆಯರ ಬಳಗದವರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.