ಅಭಿವೃದ್ಧಿಯೊಂದೆ ಅಜೆಂಡಾ – ಸುಭಾಸ ಮ್ಯಾಗೇರಿ.
ಗಜೇಂದ್ರಗಡ ಪುರಸಭೆಯಲ್ಲಿ ನೂತನ ಅಧ್ಯಕ್ಷ - ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ.
ಅಭಿವೃದ್ಧಿಯೊಂದೆ ಅಜೆಂಡಾ – ಸುಭಾಸ ಮ್ಯಾಗೇರಿ.
ಗಜೇಂದ್ರಗಡ ಪುರಸಭೆಯಲ್ಲಿ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ.
ಗಜೇಂದ್ರಗಡ:ಸತ್ಯಮಿಥ್ಯ (ಸ -14).
ಗಜೇಂದ್ರಗಡದ ಅಭಿವೃದ್ಧಿಯೊಂದೆ ನಮ್ಮ ಅಜೆಂಡಾ. ನಗರದಲ್ಲಿ ನೀರು, ಬೀದಿದೀಪ, ರಸ್ತೆ ನಿರ್ಮಾಣ, ಸ್ವಚ್ಛತೆ ಸೇರಿದಂತೆ ನಗರದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಗಜೇಂದ್ರಗಡ ಪುರಸಭೆ ನೂತನ ಅಧ್ಯಕ್ಷರಾದ ಸುಭಾಸ ಮ್ಯಾಗೇರಿ ನುಡಿದರು.
ಅವರು ನಿನ್ನೆ ನಡೆದ ಗಜೇಂದ್ರಗಡ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೆಪ್ಟೆಂಬರ್ 3 ರಂದು ನಡೆದ ಚುನಾವಣೆ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಇದೆ ಮೊದಲು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಸವಿತಾ ಬಿದರಳ್ಳಿಯವರು. ನಗರದಲ್ಲಿ ವರ್ಷದ ನಂತರ ಚುನಾಯಿತ ಪ್ರತಿನಿಧಿಗಳು ಆಡಳಿತದ ಚುಕ್ಕಾಣಿ ಹಿಡಿದಿದ್ದೇವೆ. ಜನಪ್ರಿಯ, ಜನೋಪಯೋಗಿ, ಅಭಿವೃದ್ಧಿ ಪರ ಆಡಳಿತ ನಮ್ಮ ಗುರಿ ಎಂದರು.
ಚಿತ್ರ:ಗಜೇಂದ್ರಗಡ ಪುರಸಭೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಸವಿತಾ ಶ್ರೀಧರ ಬಿದರಳ್ಳಿಯವರಿಗೆ ದೇವಾಂಗ ಸಮಾಜದ ಬಾಂಧವರಿಂದ ಸನ್ಮಾನಿಸಿದ ಕ್ಷಣ.
ಈ ಸಂದರ್ಭದಲ್ಲಿ ಶಿವರಾಜ ಘೋರ್ಪಡೆ, ಮುರ್ತುಜ ಡಾಲಾಯತ, ರಾಜು ಸಾಂಗ್ಲಿಕರ,ವೆಂಕಟೇಶ ಮುದಗಲ್, ಶ್ರೀಮತಿ ವಿಜಯಾ ಮಳಗಿ,ಶರಣಪ್ಪ ಉಪ್ಪಿನಬೆಟಗೇರಿ, ಲಕ್ಷ್ಮಿ ಮುಧೋಳ್, ಮುದಿಯಪ್ಪ ಮುಧೋಳ್, ದ್ರಾಕ್ಷಿಯಣಿ ಚೋಳಿನ,ಕೌಸರ್ ಬಾನು ಹುನಗುಂದ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ರಾಘವೇಂದ್ರ ಮಂತಾ, ಪಿ. ಎನ್ ದೊಡ್ಡಮನಿ, ಶ್ರೀಮತಿ ಕಾಳೆ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.