
ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ.
ಗಜೇಂದ್ರಗಡ:ಸತ್ಯಮಿಥ್ಯ (ಸ -15).
ನಗರದ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯ ಪ್ರಯುಕ್ತ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತ ನಾಡಗೀತೆ ಹಾಡುವುದರ ಮೂಲಕ ಸಂವಿಧಾನ ಪೀಠಿಕೆ ಓದಿ ನಂತರ ಮಾನವ ಸರಪಳಿ ನಿರ್ಮಾಣ ಮಾಡಿದರು .
ಸಂವಿಧಾನದ ಪೀಠಿಕೆಯನ್ನು ಕಾಲೇಜಿನ ಆಂಗ್ಲ ಮಾಧ್ಯಮ ಉಪನ್ಯಾಸಕರಾದ ಜಿ ಟಿ ರಾಯಬಾಗಿ ಅವರು ವಿದ್ಯಾರ್ಥಿಗಳಿಗೆ ಓದಿಸುವುದರ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವದ ಕುರಿತಂತೆ ಹಾಗೂ ಆಚರಣೆಯ ಕುರಿತಂತೆ ಸುದೀರ್ಘವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪಿಯು ಕಾಲೇಜುನ ಆಡಳಿತ ಸದಸ್ಯರಾದ ಡಾ. ಬಿ,ವಿ ಕಂಬಳ್ಯಾಳ ಅವರು ಮಾತನಾಡಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿಯ ಮೂಲಕ ಈ ವರ್ಷ ಆಚರಣೆ ಮಾಡುತ್ತಿದ್ದೇವೆ ಕಳೆದ ವರ್ಷ ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ಆಚರಣೆಯನ್ನು ಮಾಡಿದ್ದೇವೆ ಈ ವರ್ಷ ವಿಶಿಷ್ಟ ರೀತಿಯಲ್ಲಿ ನಾವೆಲ್ಲರೂ ಒಂದೇ ರೀತಿ ಎನ್ನುವ ಹಾಗೆ ಕೈ ಕೈ ಹಿಡಿದು ಮಾನವ ಸರಪಳಿಯ ಮೂಲಕ ಆಚರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ವಸಂತರಾವ್ ಗಾರಗಿ ಅವರು ಅಂತರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಮಾತನಾಡಿದ ಅವರು ಮಾನವ ಸರಪಳಿ ಮಾಡುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಯನ್ನು ಮಾಡುತ್ತಿದ್ದು ಇದು ಭಾತೃತ್ವದ ಸಂಕೇತ ಜಾತಿ ಬೇದಭಾವವಿಲ್ಲದೆ ಎಲ್ಲರೂ ಕೈ ಕೈ ಹಿಡಿದು ಇಂದಿನ ದಿನ ಆಚರಣೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಲು ಎಂದು ಹಾಗೂ ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವದ ಕುರಿತಂತೆ ವಿದ್ಯಾರ್ಥಿಗಳಿಗೆ ಸುದೀರ್ಘವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪಿಯು ಕಾಲೇಜಿನ ಆಡಳಿತ ಸದಸ್ಯರಾದ ಡಾ ಬಿ ವಿ ಕಂಬಳ್ಯಾಳ, ಶೇಖಣ್ಣ ಇಟಗಿ, ಶರಣಪ್ಪ ರೇವಡಿ, ರಾಜು ಸಾಂಗ್ಲೀಕಾರ, ಶ್ರೀಮತಿ ಸುಮಂಗಲಾ ಹುದ್ದಾರ,ಎಮ,ಎಸ,ಗೋಡೆ ಬಿ,ಎಸ,ಹೀರೆಮಠ ಪ್ರಾಚಾರ್ಯರಾದ ವಸಂತ್ ರಾವ್ ಗಾರಗಿ ಜಿ,ಟಿ, ರಾಯಭಾಗಿ ರವಿ ಹಲಗಿ, ಸಂಗಮೇಶ್ ವಸ್ತ್ರದ್, ಪ್ರತಿಭಾ ಲಕ್ಷಕೊಪ್ಪದ, ವಿಜಯಲಕ್ಷ್ಮಿ ಅರಳಿಕಟ್ಟಿ, ಮಂಜುನಾಥ್ ಕುಂಬಾರ್, ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಸಿಬ್ಬಂದಿಗಳು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ್.