
ಭಾರತ ವಿಕಾಸ ಸಂಗಮ ಯಾತ್ರೆಗೆ ಮಾಜಿ ಸಚಿವ ಕಳಕಪ್ಪ ಬಂಡಿ ಚಾಲನೆ.
ಗಜೇಂದ್ರಗಡ : ಸತ್ಯಮಿಥ್ಯ (ಜ -06).
ಗ್ರಾಮಗಳ ಸಬಲೀಕರಣ ಉದ್ದೇಶದೊಂದಿಗೆ ಭಾರತ ವಿಕಾಸ ಸಂಗಮ ಸಾಗುತ್ತಿದೆ.ಪ್ರಾಚೀನ ಭಾರತದ ಕಾಲಾತೀತ, ಉದಾತ್ತ ಚಿಂತನೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದು ಇದು ಸಮಾಜ ಹಾಗೂ ಪ್ರಕೃತಿ ಮಾತೆಯ ನಡುವೆ ಸಂಬಂಧವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ನುಡಿದರು.
ಅವರು ಭಾರತ ವಿಕಾಸ ಸಂಗಮ ಯಾತ್ರೆಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ,ಪಕ್ಷದ ಮುಖಂಡರಾದ ಮಹಾಂತೇಶ ಸೋಮನಕಟ್ಟಿ, ಶಿವಾನಂದ ಮಠದ, ಭಾಸ್ಕರ ರಾಯಭಾಗಿ, ರಾಜೇಂದ್ರ ಗೋರ್ಪಡೆ,ಈರಪ್ಪ ಪಟ್ಟಣಶೆಟ್ಟಿ,ಉಮೇಶ ಮಲ್ಲಾಪುರ, ಶ್ರೀನಿವಾಸ ಸವದಿ, ಮಲ್ಲಪ್ಪ ಕುರಿ, ಮಲ್ಲಪ್ಪ ಪುರ್ತಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಚನ್ನು. ಎಸ್.