
ಗದಗ: ಕೋಟೆನಾಡು ಗಜೇಂದ್ರಗಡದಲ್ಲಿ ಜ.19,20 ಮತ್ತು 21 ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
ಗಜೇಂದ್ರಗಡ : ಸತ್ಯಮಿಥ್ಯ (ಜ -07).
ಇದೆ ತಿಂಗಳು 19,20ಮತ್ತು 21 ರಂದು ಮೂರು ದಿನಗಳ ಕಾಲ ಕೋಟೆನಾಡು ಗಜೇಂದ್ರಗಡದಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ಕಸಾಪ ಗದಗ ಜಿಲ್ಲಾ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ತಿಳಿಸಿದರು.
ಅವರು ಸೋಮವಾರ ನಗರದ ಮೈಸೂರು ಮಠದಲ್ಲಿ ಜರುಗಿದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮ್ಮೇಳನ ನಡೆಸಲಿಕ್ಕೆ ಮಾನವ ಸಂಪನ್ಮೂಲದ ಜೊತೆಗೆ ಸಾಂಸ್ಕೃತಿಕ ಪರಿಸರ ಅಗತ್ಯ. ಕನ್ನಡಮ್ಮನ ತೇರು ಎಳೆಯಲು ಎಲ್ಲ ಕನ್ನಡ ಮನಸ್ಸುಗಳು ಸಹಕಾರದ ಮನೋಭಾವನೆಯೊಂದಿಗೆ ಬನ್ನಿ. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂದ್ರಶೇಖರ ವಸ್ತ್ರದರವರನ್ನು ಆಹ್ವಾನಿಸಲಾಗಿದೆ.ಈಗಾಗಲೇ ಶಾಸಕರಾದ ಜಿ. ಎಸ್. ಪಾಟೀಲರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದ್ದು ವೈಭವದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಂಪೂರ್ಣ ಸಹಕಾರದ ಅಭಯ ನೀಡಿದ್ದಾರೆ.ಮೂರು ದಿನ ಜರಗುವ ಕನ್ನಡಮ್ಮನ ಜಾತ್ರೆಯು ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಲಿದೆ. ಆ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು,ಜನಪ್ರತಿನಿದಿನಗಳು, ಕನ್ನಡ ಮನಸ್ಸುಗಳು ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದರು.
* ಜನೇವರಿ 19 ರಂದು ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಜಕ್ಕಲಿ ಗ್ರಾಮದಿಂದ ಕನ್ನಡಮ್ಮ ಭುವನೇಶ್ವರಿ ತಾಯಿಯ ಮೆರವಣಿಗೆ ಪ್ರಾರಂಭಗೊಂಡು ನಗರದ ಮೈಸೂರುಮಠದಲ್ಲಿ ಸಮಾರೋಪಗೊಳ್ಳಲಿದೆ.
* 20 ರಂದು ಬೆಳಿಗ್ಗೆ ದ್ವಜಾರೋಹಣಕಾರ್ಯಕ್ರಮ ರಾಷ್ಟಧ್ವಜ,ಕನ್ನಡ ಧ್ವಜ ಮತ್ತು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ನಂತರ ವೈಭವದ ಮೆರವಣಿಗೆ ಈ ಕಾರ್ಯಕ್ರಮದಲ್ಲಿ ನಾಡಿನ ನಾನಾ ಭಾಗಗಳಿಂದ ಕಲಾತಂಡಗಳು ಆಗಮಿಸಲಿವೆ.ಅಲ್ಲದೇ ವೇದಿಕೆ ಕಾರ್ಯಕ್ರಮ ಜರುಗಳಿದ್ದು ಸರ್ಕಾರದ ಮಂತ್ರಿ ಮಹೋದಯರು, ಶಾಸಕರು ಸೇರಿದಂತೆ ಅನೇಕರು ಭಾಗಿಯಾಗುವರು.
* 21 ರಂದು ವಿಚಾರ ಸಂಕಿರಣ, ಕವಿಗೋಷ್ಠಿ, ಮಹಿಳಾಗೋಷ್ಠಿ,ಜಿಲ್ಲೆಯ ಸಂಸ್ಕೃತಿಯ ಅನಾವರಣ, ಕಲಾ ಪ್ರದರ್ಶನ, ಪುಸ್ತಕಮಳಿಗೆಗಳು, ಕನ್ನಡ ಸಂಸ್ಕೃತಿಗೆ ಕೊಡುಗೆ ನೀಡಿದ ಕಲಾವಿದರಿಗೆ ಸನ್ಮಾನ ಹತ್ತು ಹಲವು ಕಾರ್ಯಕ್ರಮಗಳಿಗೆ ಸಾಕ್ಷಿಕರಿಸಲಿದೆ.
ಈ ಸಂದರ್ಭದಲ್ಲಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಮಂಜುಳಾ ರೇವಡಿ ಮಾತನಾಡಿ. ಮಹಿಳಾಗೋಷ್ಠಿ ಮೂಲಕ ಮಹಿಳೆಯರ ಪ್ರಾಮುಖ್ಯತೆ ಮತ್ತು ಸ್ತ್ರೀ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನ ಸೆಳೆಯುವಂತಾಗಲಿ ಎಂದರು.
ಕನ್ನಡ ಪರ ಹೋರಾಟಗಾರ ಎಚ್. ಎಸ್. ಸೋಂಪುರ ಮಾತನಾಡಿ.ದಿನನಿತ್ಯ ಬಳಸುವ ಭಾಷೆಯಲ್ಲಿ ಹೆಚ್ಚು ಇಂಗ್ಲಿಷ್ ಶಬ್ದಗಳನ್ನು ಬಳಕೆ ಮಾಡುತ್ತಿರುವದು ಖೇದಕರ ಆದ್ದರಿಂದ ಸಂಪೂರ್ಣ ಕನ್ನಡದಲ್ಲಿಯೇ ಮಾತನಾಡಿ ಮತ್ತು ಮಕ್ಕಳಿಗೆ ಕನ್ನಡದಲ್ಲಿ ಮಾತನಾಡಲು ಪ್ರೆರೇಪಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಕಸಾಪ ತಾಲೂಕಾ ಅಧ್ಯಕ್ಷರಾದ ಅಮರೇಶ ಗಾಣಿಗೇರ.ಗಜೇಂದ್ರಗಡದಲ್ಲಿ ಜರಗುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳೀಯ ಶಾಸಕ ಜಿ. ಎಸ್. ಪಾಟೀಲ್ ಅತ್ಯಂತ ಉತ್ಸಾಹಕರಾಗಿದ್ದಾರೆ. ಈ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸಲು ಸಂಪೂರ್ಣ ತಯಾರಿಯಲ್ಲಿ ಕನ್ನಡ ಮನಸುಗಳು ತಯಾರಿಯಲ್ಲಿವೆ. ಸಮ್ಮೇಳನ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠರವರು ಗಜೇಂದ್ರಗಡ ಇತಿಹಾಸವನ್ನು ಸಂಪೂರ್ಣವಾಗಿ ಬಲ್ಲವರಾಗಿದ್ದು.ನಾಡಿನ ನಾನಾ ಭಾಗಗಳಿಂದ ಕಲಾತಂಡಗಳು ಆಗಮಿಸಲಿವೆ ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವದು ಎಂದರು.
ಈ ಸಂದರ್ಭದಲ್ಲಿ ಸುರೇಶ ಪತ್ತಾರ, ಬಿ. ಸಿ. ಅಂಗಡಿ, ಎಸ್. ಎನ್. ಬಡಿಗೇರ, ನಿಂಗಪ್ಪ ಕಾಶಪ್ಪನವರ, ಕಳಕಯ್ಯ ಸಾಲಿಮಠ ಸೇರಿದಂತೆ ಅನೇಕರು ಮಾತನಾಡಿದರು.
ಅರವಿಂದ ಕವಡಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು.ಚನ್ನವೀರಸ್ವಾಮಿ,ಎಸ್. ಎಸ್. ಡೊಳ್ಳಿನ, ಶ್ರೀನಿವಾಸ ನಿಲೂರ, ರವಿ ಕವಡಿಮಟ್ಟಿ, ಬಿ.ಟಿ. ಹೊಸಮನಿ, ಆರ್. ಜಿ. ಮ್ಯಾಕಲ್, ಡಾ. ಮಹಾಂತೇಶ ಅಂಗಡಿ,ಹುಚ್ಚಪ್ಪ ಹಾವೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.