
ರಾಷ್ಟ್ರಿಯಯುವ ದಿನಾಚರಣೆ – ವೀರಸನ್ಯಾಸಿಗೆ ನಮನ.
ಗಜೇಂದ್ರಗಡ : ಸತ್ಯಮಿಥ್ಯ (ಜ -12).
ಇಂದು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ರೋಣ ಮಂಡಲ ವತಿಯಿಂದ ಗಜೇಂದ್ರಗಡ ಬಿಜೆಪಿ ಕಛೇರಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಘಟಕ ಅಧ್ಯಕ್ಷರಾದ ಶ್ರೀ ರಾಜೇಂದ್ರ ಘೋರ್ಪಡೆ. ಭಾರತದ ಆಧ್ಯಾತ್ಮೀಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಸಿಡಿಲ ಸಂತ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮಕ್ಕೆ ನೀಡಿದ ಕೊಡುಗೆ ಅಪಾರ. ಇಂದಿನ ಯುವ ಪೀಳಿಗೆಗೆ ದೇಶಾಭಿಮಾನ ಮೂಡಿಸುವ ಮೂಲಕ ಅವಿಸ್ಮರಣೀಯರಾಗಿದ್ದಾರೆ.ಅವರು ಮಾಡಿದ ಕೆಲಸಗಳು ಭಾರತೀಯರನ್ನು ಸ್ವಾಭಿಮಾನ ಪತದತ್ತ ಕೊಂಡೋಯುತ್ತವೆ.ಅವರ ಸಾಮಾಜಿಕ ಸುಧಾರಣೆ ಮತ್ತು ಸ್ವಯಂ ಸಾಕ್ಷಾತ್ಕಾರ ಗುಣಗಳು ಪ್ರಪಂಚದ ಜನರನ್ನು ಆಕರ್ಷಣೆ ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ರೋಣ ಮಂಡಲ ಯುವ ಮೋರ್ಚಾ ಅಧ್ಯಕ್ಷ ಉಮೇಶ ಚನ್ನು ಪಾಟೀಲ,ಮುಖಂಡರಾದ ಸೂಗಿರೇಶ ಕಾಜಗಾರ, ಮಾಂತೇಶ ಪೂಜಾರ,ಕುಮಾರ ರಾಠೋಡ,ಬಾಲಾಜಿರಾವ್ ಬೋಸ್ಲೆ,ಶಿವಕುಮಾರ ದಡ್ಡೂರ,ಸಂಗಮೇಶ ಸೊಬಗಿನ,ರಾಜು ಘೋರ್ಪಡೆ, ದೇವರಾಜ ವಗ್ಗರ,ಸುಭಾಷ ಕಡೆಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.