ಜಿಲ್ಲಾ ಸುದ್ದಿ

ಭುವನೇಶ್ವರಿ ಜ್ಯೋತಿಯಾತ್ರೆಯ ಮೂಲಕ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ.

Share News

ಭುವನೇಶ್ವರಿ ಜ್ಯೋತಿಯಾತ್ರೆಯ ಮೂಲಕ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ.

ಗಜೇಂದ್ರಗಡ : ಸತ್ಯಮಿಥ್ಯ ( ಜ -11).

ಈ ಭಾಗದ ಕನ್ನಡ ಮನಸುಗಳ ಅಭಿಪ್ರಾಯದ ಮೇರೆಗೆ. ಕೋಟೆನಾಡು ಗಜೇಂದ್ರಗಡದಲ್ಲಿ ಗದಗ ಜಿಲ್ಲಾಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ ಜಿಲ್ಲಾ ಘಟಕ ಮತ್ತು ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಆಡಳಿತ ವರ್ಗ ಸಹಕಾರದಲ್ಲಿ ಬಹಳಷ್ಟು ಅಚ್ಚುಕಟ್ಟಾಗಿ ಸಮ್ಮೇಳನ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ನುಡಿದರು.

ಅವರು ನಗರದ ರೋಣ ರಸ್ತೆಯಲ್ಲಿರುವ ಎಪಿಎಂಸಿ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತ. ಜನೇವರಿ 19, 20 ಮತ್ತು 21ರಂದು. ಮೂರು ದಿನಗಳ ಕಾಲ ನಡೆಯುವ ಗದಗ ಜಿಲ್ಲಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

Oplus_131072

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ್, ಗಜೇಂದ್ರಗಡ ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ,ರೋಣ ತಾಲೂಕಾಧ್ಯಕ್ಷ ರಮಾಕಾಂತ ಕಮತಗಿ, ಸಿದ್ದಣ್ಣ ಬಂಡಿ, ಪುರಸಭೆ ಅಧ್ಯಕ್ಷ ಸುಭಾಸ್ ಮ್ಯಾಗೇರಿ, ಶ್ರೀಧರ ಬಿದರಳ್ಳಿ, ಸ್ಥಾಯಿ ಕಮೀಟಿ ಚೆರ್ಮನ್ ಮುದಿಯಪ್ಪ ಮುಧೋಳ್, ಎಚ್. ಎಸ್. ಸೋಂಪುರ,ಶ್ರೀಮತಿ ಮಂಜುಳಾ ರೇವಡಿ, ಶ್ರೀಮತಿ ಕಸ್ತೂರಮ್ಮ ಹಿರೇಮಠ,ಶ್ರೀಮತಿ ಬಿ.ಟಿ. ಹೊಸಮನಿ,ಪ್ರಬಣ್ಣ ಚವಡಿ, ಸುಭಾನಸಾಬ್ ಆರಗಿದ್ದಿ, ವೀರಣ್ಣ ಶಟ್ಟರ, ಗಣೇಶ ಗುಗುಲೋತ್ತರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭುವನೇಶ್ವರಿ ಜ್ಯೋತಿಯಾತ್ರೆ ತೆರಳುವ ಮಾರ್ಗ ಮತ್ತು ದಿನಾಂಕ.

11-01-2025 ರಂದು. ಗಜೇಂದ್ರಗಡ – ಹಾಲಕೇರೆ -ಕರಮುಡಿ -ಮುಧೋಳ್ -ಮ್ಯಾಗೇರಿ- ಸೋಂಪುರ, ಹೊಸೂರು.

12-01-2025 ರಂದು.ಸಂಕನೂರ – ಶಿರಗುಂಪಿ – ಕೊಡಗಾನೂರ – ವೀರಾಪುರ – ಚಿಲಜೇರಿ – ರಾಂಪುರ.

13 -01-25 ರಂದು.ಹಿರೇಕೊಪ್ಪ – ಬಳೂಟಗಿ -ಬಂಡಿ – ನಾಗರಸಕೊಪ್ಪ – ಗೊಗೇರಿ -ಬೆನಸಮಟ್ಟಿ.

14-01-2025 ರಂದು.ಕುಂಟೋಜಿ – ವದೇಗೋಳ -ಜಿಗೇರಿ -ಮುಗನೂರ – ಬೈರಾಪುರ – ಕಾಲಕಾಲೇಶ್ವರ

15-01-2025 ರಂದು.ರಾಜೂರ – ದಿಂಡುರ – ಲಕ್ಕಲಕಟ್ಟಿ -ನಾಗೇಂದ್ರಗಡ ಕಲ್ಲಿಗನೂರ – ಮುಶಿಗೇರಿ.

16-01-2025 ರಂದು.ನೆಲ್ಲೂರ- ಚಿಕ್ಕಅಳಗುಂಡಿ – ಹಿರೇಅಳಗುಂಡಿ -ಇಟಗಿ -ಬಳಗೋಡ- ಹಿರೇಹಾಳ.

17-01-2025 ರಂದು.ಕೊತಬಾಳ – ಹೊಳೆಆಲೂರ -ರೋಣ -ಅಬ್ಬಿಗೇರಿ -ಕೋಟುಮಚಗಿ – ಜಿಗಳೂರ

18-01-2025 ರಂದು. ಹೊಸಳ್ಳಿ -ಮಾರನಬಸರಿ – ಜಕ್ಕಲಿ ಗ್ರಾಮವನ್ನು ತಲುಪಲಿದೆ.

ವರದಿ : ಸುರೇಶ ಭಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!