
ಭ್ರಷ್ಟಾಚಾರ ತನಿಖೆಗೆ ಜೆಡಿಎಸ್ ಒತ್ತಾಯ.
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಂತಹ ಭ್ರಷ್ಟಾಚಾರ ತನಿಖೆಗೆ ಒಳಪಡಿಸುವಂತೆ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಮನವಿ
ಗದಗ:ಸತ್ಯಮಿಥ್ಯ (ಜೂ 27)
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಂತಹ ಭ್ರಷ್ಟಾಚಾರ ತನಿಖೆಗೆ ಒಳಪಡಿಸುವ ಕುರಿತು ಗದಗ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು
ಮನವಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದಲ್ಲಿ ಅವರದೇ ಸ್ವಪಕ್ಷದ ಸದಸ್ಯರು ಸರ್ಕಾರದಲ್ಲಿ ಭ್ರಷ್ಟಾಚಾರ, ಲಂಚಗುಳಿತನ ಸ್ವಜನಪಕ್ಷಪಾತ ನಡೆಯುತ್ತಿದೆ ಎಂದು ಮಾಧ್ಯಮಗಳ ಎದುರು ನೇರವಾಗಿ ಸರ್ಕಾರದ ಮೇಲೆ ಅಪವಾದಿಸಿದ್ದಾರೆ. ಆಡಳಿತ ನಡೆಸುತ್ತಿರುವ ಸರ್ಕಾರ, ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ದಾಪುಗಾಲಿಟ್ಟಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಪರ ಕೆಲಸಗಳು ನಡೆಯುತ್ತಿಲ್ಲಾ. ಈಗಾಗಲೇ ಮುಂಗಾರು ಮಳೆ ರಾಜ್ಯ ಪ್ರವೇಶಿಸಿದ್ದು, ರಾಜ್ಯದಲ್ಲಿರುವ ಅನೇಕ ನದಿ, ಹಳ್ಳ-ಕೊಳ್ಳಗಳ ತುಂಬಿ ಅನೇಕ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ಮನೆಗಳು ಹಾನಿಗೆ ಒಳಗಾಗಿವೆ. ಅನೇಕ ಅಮಾಯಕ ಜನರು ತಮ್ಮ ಜೀವನವನ್ನು ಕಳೆದುಕೊಂಡಿರುತ್ತಾರೆ ಹಾಗೂ ರಾಜ್ಯದ ರೈತರು ಮುಂಗಾರು ಮಳೆಗೆ ಬಿತ್ತನೆ ಮಾಡಿದಂತಹ ಕೆಲ ಹೊಲಗಳಲ್ಲಿ ಪ್ರವಾಹ ಬಂದು ಕೊಚ್ಚಿಕೊಂಡು ಹೋಗಿರುವ ಸನ್ನಿವೇಶ ಕೂಡಾ ಕಣ್ಣು ಮುಂದೆ ಗೋಚರಿಸುತ್ತಿದೆ.
ಎಲ್ಲ ವಿಷಯಗಳನ್ನು ಮನಗಂಡಂತಹ ರಾಜ್ಯ ಆಡಳಿತಾರೂಡ ಸರ್ಕಾರ ಕೇವಲ ತನ್ನ ಗ್ಯಾರೆಂಟಿ ಘೋಷಣೆಗಳ ಮೇಲೆ ಕೇಂದ್ರಿಕೃತವಾಗಿ ಜನರಿಗೆ ಅದರ ಮೇಲೆಯೇ ನಿಗಾವಹಿಸುವಂತೆ ಕೇಂದ್ರಿಕೃತಗೊಳಿಸಲು ಪ್ರಯತ್ನಿಸುತ್ತಿದೆ. ಹೊರತಾಗಿ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯಾವುದೇ ಮಾರ್ಗ ಈವರೆಗೂ ಅನುಸರಿಸುತ್ತಿಲ್ಲಾ. ಕಾರಣ ರಾಜ್ಯ ಸರ್ಕಾರದಲ್ಲಿ ನಡೆದಂತಹ ವಸತಿ, ಹಿಂದುಳಿದ ವರ್ಗ ಹಾಗೂ ಇನ್ನೂ ಅನೇಕ ಇಲಾಖೆಗಳಲ್ಲಿ ನಡೆದಂತಹ ಹಗರಣಗಳ ಸಮಗ್ರ ತನಿಖೆಗೆ ಆದೇಶಿಸಿ, ರಾಜ್ಯ ಸರ್ಕಾರದಲ್ಲಿ ನಡೆಯುವಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿರ್ದೇಶಿಸಬೇಕೆಂದು ಗದಗ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ವಿನಂತಿಯ ಮೂಲಕ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸುವಾಗ ಗದಗ ಜಿಲ್ಲಾ ಜೆ.ಡಿ.ಎಸ್ಪಕ್ಷದ ಅಧ್ಯಕ್ಷರಾದ ಮಕ್ತುಮಸಾಬ್, ವಾಯ್. ಮುಧೋಳ(ಸಾಗರ) ಸೇರಿದಂತೆ ಪಕ್ಷದ ಮುಂಖಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ :ಮುತ್ತು ಗೋಸಲ.