
ಕೃಷ್ಣ ನದಿಯಿಂದ 70.000 ಸಾವಿರ ಕ್ಯುಸೆಕ್ ನೀರು ಬಿಡುಗಡೆ.
ನಾರಾಯಣಪುರ:ಸತ್ಯಮಿಥ್ಯ (ಜೂ-27)
ಬಸವಸಾಗರ ಜಲಾಶಯದ 22 ಕ್ರಸ್ಟಗೇಟ್‌ಗಳನ್ನು ತೆರದು 59,180 ಕ್ಯೂಸೆಕ್ಸ್ ಹಾಗೂ 6,000 ಸಾವಿರ ಕ್ಯುಸೆಕ್ ನಷ್ಟು ನೀರನ್ನು ಎಂ.ಪಿ.ಸಿ.ಎಲ್ ನಿಂದ ಹರಿಬಿಡಲಾಗುತ್ತಿದೆ. ಶುಕ್ರುವಾರ ಆಲಮಟ್ಟಿ ಶಾಸ್ತ್ರೀ ಸಾಗರದಿಂದ 70.000 ಸಾವಿರ ಕ್ಯುಸೆಕ್ ಪ್ರಮಾಣದಷ್ಟು ನೀರಿನ ಒಳಹರಿವು ಬರಿತ್ತಿದ್ದು, ಜಲಾಶಯಕ್ಕೆ ಬರುವ ಒಳಹರಿವು ಗಮನಿಸಿ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದೆ.
ಕೃಷ್ಣಾ ಪ್ರದೇಶದಲ್ಲಿ ಜಲಾನಯನ ನಿರಂತರ ಮಳೆಯಾಗುತ್ತಿರುವದರಿಂದ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ ಪ್ರತಿ ಉಭಯ ಗಂಟೆಗೊಮ್ಮೆ ಜಲಾಶಯಗಳ ಅಧಿಕಾರಿಗಳು ನದಿಗೆ ನೀರು ಹರಿಸುವ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಒಂದೊಮ್ಮೆ ಒಳಹರಿವು ಹೆಚ್ಚಾದರೆ ಹೊರ ಹರಿವು ಹೆಚ್ಚಿಸಲಾಗುತ್ತದೆ ಒಳಹರಿವು ತಗ್ಗಿದರೆ ಹೊರ ಹರಿವು ಕಡಿಮೆ ಆಗುತ್ತದೆ. ಹಿಗಾಗಿ ನದಿತೀರದ ಗ್ರಾಮಗಳ ಜನರು ಎಚ್ಚರದಿಂದ ಇರಬೇಕು ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ವಿಜಯ ಅರಳಿಯವರು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಮಾಹಿತಿಯಂತೆ ಗರಿಷ್ಠ 492.25 -ರ ಎತ್ತರದಲ್ಲಿ 33.313 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 492.25ಮೀಟರಗೆ ನೀರು ಬಂದು ತಲುಪಿದ್ದು, ಮಾಹಿತಿ 26,39 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ .
ದಿನಕ್ಕೆ 2ಕೆಜಿ ಮೀನು ಸಿಗಬೇಕಾದ್ರೆ ಹರಸಹಾಸ ಪಡಬೇಕಾಗುತ್ತದೆ ಹಾಗಾಗಿ ಮೀನುಗಳ ಸಿಗದೇ ಪರದಾಟುತ್ತಿದ್ದಾರೆ ಎಂದು ಅಜಯ್ ನಾಯಕ. ಮೀನುಗಾರ ತಿಳಿಸಿದರು
ವರದಿ : ಶಿವು ರಾಠೋಡ